ಝಳಕಿ : 2020ರಲ್ಲಿ ಕೊರೊನಾ ಹಾವಳಿಯಿಂದಾಗಿ ಸಾಮಾನ್ಯ ಜನರ ಜೀವನ ಬೀದಿಗೆ ಬಂದಿದ್ದು, ಅದರಲ್ಲೂ ಗ್ರಾಮೀಣ ವ್ಯಾಪಾರಸ್ಥರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷರು ರಾಜಕುಮಾರ ಸಾಗಾಯಿ ತಮ್ಮ ಸ್ವ ಗ್ರಾಮದ ಜಮೀನಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಗ್ರಾಮೀಣ ವಿಭಾಗದ ವ್ಯಾಪಾರಸ್ಥರು ತಮ್ಮ ಜೀವನ ವ್ಯಾಪಾರದ ಮೇಲೆ ಅವಲಬಿಸಿದ್ದು, ಇವಾಗ ಜನರೆಲ್ಲಾ ಅನಲೈನ ಖರೀದಿಗೆ ಮೊರೆ ಹೋಗಿದ್ದು, ವ್ಯಾಪಾರಸ್ಥರ ಜೀವನ ಸಂಕಷ್ಟದ ಸ್ಥಿತಿಗೆ ಬಂದಿದೆ, ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ, ಯಾವುದೊ ಸಮಸ್ಸೆ ಬಂದಲ್ಲಿ ಅಥವಾ ಹಣ ಇಲ್ಲದ ಸಮಯದಲ್ಲಿ ಸಮಯಕ್ಕೆ ಸ್ಪಂದಿಸೋರು ಗ್ರಾಮಸ್ಥರು ಆದರೆ ನಾವುಗಳು ಆನಲೈನ ಖರೀದಿ ಮಾಡೋದರಿಂದ ಗ್ರಾಮೀಣ ವ್ಯಾಪಾರಸ್ಥರು ಬದೋಕೋದು ಹೇಗೆ, ಇದರಿಂದಾಗಿ ನಮ್ಮ ಭಾವನೆಗಳನ್ನು ನಾವು ಅರಿತು ಇಂತಹ ವ್ಯಾಪಾರಸ್ಥರಿಗೆ ಸಹಾಯ ಹಸ್ತ ಬೀರದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಧಾರ್ಮಿಕ, ಸಂಸ್ಕೃತಿಕ ಕಾರ್ಯಕ್ರಮ ಮಾಡೋವದಾದರೆ ಯೋಚನೆ ಮಾಡುವಂತಹ ಸಮಯ ಬರೋದು ಸಹಜ, ಇದನ್ನು ನಾವೆಲ್ಲರೂ ಕೂಡಿಕೊಂಡು ಗ್ರಾಮೀಣ ವ್ಯಾಪಾಸ್ತರಿಗೆ ಕೈ ಜೋಡಿಸೋಣ ಎಂಬ ಯೋಚನೆಯನ್ನು ಬಹಳ ದುಃಖ ಕರವಾಗಿ ಮಾತನಾಡಿ ಪ್ರಕಟಣೆ ಮೂಲಕ ಜನರಲ್ಲಿ ವಿನಂತಿಸಿಕೊಂಡರು.
ಆನಲೈನ್ ವ್ಯಾಪಾದಿಂದಾಗಿ ಬೀದಿಗೆ ಬಂದ ಗ್ರಾಮೀಣ ವ್ಯಾಪಾರಸ್ಥರು.
RELATED ARTICLES