ಹುಬ್ಬಳ್ಳಿ:ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಯಾಗಲಿರುವ
‘ಪ್ಲಗ್ ಅಂಡ್ ಪ್ಲೇ’ ಮಾದರಿಯ FMCG ತಯಾರಿಕಾ ಪಾರ್ಕ್ ಗೆ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರು ಚಾಲನೆ
ನೀಡಿ ಮಾತನಾಡಿದ ಸಚಿವರು ಸಾವಿರಾರು ಉದ್ಯೋಗಗಳ ಸೃಷ್ಟಿ ಯಾಗಲಿದೆ ಎಂದು ಹೇಳಿದರು.
ಏಕಸ್ ಇನ್ಫ್ರಾ ಕಂಪನಿಯು ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ಸಂಪೂರ್ಣ ಸುಸಜ್ಜಿತ “ಪ್ಲಗ್ ಅಂಡ್ ಪ್ಲೇ” ಮಾದರಿಯ ಎಫ್ಎಂಸಿಜಿ ಉತ್ಪನ್ನಗಳ ತಯಾರಿಕಾ ಪಾರ್ಕ್ ನ ಕಾರ್ಯಾಚರಣೆಗೆ ಈದಿನ ಬೆಂಗಳೂರಿನಲ್ಲಿ ಚಾಲನೆ ನೀಡಿ ಮಾತನಾಡಿ ಸಚಿವರು ಮಾತನಾಡಿದರು.
ಪ್ಲಗ್ ಅಂಡ್ ಪ್ಲೇ ಮಾದರಿಯ ಮೂಲ ಸೌಕರ್ಯ ಇರುವುದರಿಂದ ಪೂರಕ ಉದ್ದಿಮೆಗಳು ನೇರವಾಗಿ ಕಾರ್ಯಾಚರಣೆಯಲ್ಲಿ ತೊಡಗಬಹುದಾಗಿದೆ.
ಹುಬ್ಬಳ್ಳಿ ಭಾಗದ ಸುಮಾರು 400 ಕಿಲೋಮೀಟರ್ ಸುತ್ತಳತೆಯಲ್ಲಿನ ಉತ್ಪಾದನಾ ಘಟಕಗಳು ದೇಶದ ಎಫ್ಎಂಸಿಜಿ ಸರಕುಗಳ ಪೈಕಿ 35% ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಇಕಾಸ್ ಇನ್ಫ್ರಾ ಸಂಸ್ಥೆ (Aequs Infra)ಯ ಈ ನೂತನ ವ್ಯವಸ್ಥೆ ಈ ಭಾಗದಲ್ಲಿ ಈ ಕೈಗಾರಿಕೆಗಳ ಬಲವರ್ಧನೆ ನಿಟ್ಟಿನಲ್ಲಿ ದೊಡ್ಡ ಪಾತ್ರವಹಿಸಲಿದೆ
ಈ ಯೋಜನೆ ಸ್ಥಳೀಯ ಪ್ರದೇಶದ ಕೈಗಾರಿಕಾ ಬಲವರ್ಧನೆಗೆ, ಸಾಮಾಜಿಕ ಪ್ರಗತಿಗೆ, ಹಾಗೂ ಸಾವಿರಾರು ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದು ತಿಳಿಸಿದರು.
ಏಕಸ್ ಮತ್ತು FKCCI ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಅರವಿಂದ ಬೆಲ್ಲದ್, ಏಕಸ್ ಇನ್ಫ್ರಾ ಅಧ್ಯಕ್ಷರಾದ ಶ್ರೀ ಅರವಿಂದ ಮೆಳ್ಳಿಗೇರಿ, FKCCI ಅಧ್ಯಕ್ಷರಾದ ಶ್ರೀ ಉಲ್ಲಾಸ್ ಕಾಮತ್, ಸಿಕ್ಸ್ತ್ ಸೆನ್ಸ್ ವೆಂಚರ್ಸ್ ಸಂಸ್ಥಾಪಕರಾದ ಶ್ರೀ ನಿಖಿಲ್ ವೋರಾ, ದಿ ವೆನಿನ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಮೀರ್ ಕೊಠಾರಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ಉದ್ಯಮಿಗಳು ಈ ಪಾಲ್ಗೊಂಡಿದ್ದರು.