ದಾವಣಗೆರೆ: ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವುದು ಕಾಂಗ್ರೆಸ್, ಸರ್ಕಾರ ಪರವಾದ ಸಂದೇಶ. ವಿಷ ಬೀಜ ಬಿತ್ತಿ ಜನರ ಮನಸ್ಸು ಕೆಡಿಸಲು ಯತ್ನಿಸಿದ್ದ ಬಿಜೆಪಿ- ಜೆಡಿಎಸ್ ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ದಾವಣಗೆರೆ ಜವಾಹರ್ ಲಾಲ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯರ ಪರ ಮುಡಾ ಹಗರಣ ಸಂಬಂಧ ವಿನಾಕಾರಣ ಆರೋಪ ಮಾಡಿದ್ದರು. ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಹಾಸ್ಯ ಮಾಡಿದ್ದರು. ಸರ್ಕಾರದ ಜನಪ್ರಿಯ ಯೋಜನೆಗಳು, ಕಾರ್ಯಕ್ರಮಗಳು, ಸದೃಢ ಆಡಳಿತಕ್ಕೆ ರಾಜ್ಯದ ಮತದಾರರು ಸರಿಯಾದ ಉತ್ತರವನ್ನು ನೀಡಿದ್ದಾರೆ. ಶಿಗ್ಗಾವಿ, ಚನ್ನಪಟ್ಟಣ, ಸಂಡೂರಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ದಾರೆ ಎಂದು
ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಚುನಾವಣೆ ಎದುರಿಸಿದ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ವಕ್ಫ್ ವಿಚಾರದಲ್ಲಿ ಜನರಲ್ಲಿ ವಿನಾಕಾರಣ ತಪ್ಪು ಸಂದೇಶ ನೀಡಿ ಜನರ ನಡುವೆ
ದ್ವೇಷ ಭಾವನೆ ಮೂಡಿಸಿದ್ದ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಇದಕ್ಕಿಂತ ಬೇರೆ ಉತ್ತರ ಬೇಡ ಎಂದೆನಿಸುತ್ತದೆ. ಕಾಂಗ್ರೆಸ್ ಪಕ್ಷವು ಸದೃಢವಾಗಿದ್ದು, ರಾಜ್ಯ ಸರ್ಕಾರವು ಗಟ್ಟಿಯಾಗಿದೆ. ಸತ್ಯವನ್ನು ಜನರ ಮುಂದೆ ಹೇಳಿ. ಅದನ್ನು ಬಿಟ್ಟು ಸುಳ್ಳಿನ ರಾಜಕಾರಣ ಬಿಡಬೇಕು ಎಂದು ಸಲಹೆ ನೀಡಿದ್ದಾರೆ.