Wednesday, May 6, 2026
Homeಸಾರ್ವಜನಿಕ ಧ್ವನಿಕನ್ನಡದ ಅನ್ನತಿಂದುಬೆಳೆದು ಪದವಿ,ಪುರಸ್ಕಾರ,ಪಡೆದ ಕಲಾವಿದೆ ಚಿಂದೋಡಿ ವಡೆತನದ ಶಂಕರ್ ಲೀಲಾ ಗ್ಯಾಸ್ ಎಜನ್ಸಿಯ ಕನ್ನಡಪ್ರೇಮ!!!!!

ಕನ್ನಡದ ಅನ್ನತಿಂದುಬೆಳೆದು ಪದವಿ,ಪುರಸ್ಕಾರ,ಪಡೆದ ಕಲಾವಿದೆ ಚಿಂದೋಡಿ ವಡೆತನದ ಶಂಕರ್ ಲೀಲಾ ಗ್ಯಾಸ್ ಎಜನ್ಸಿಯ ಕನ್ನಡಪ್ರೇಮ!!!!!


ದಾವಣಗೆರೆ:ದಾವಣಗೆರೆಯು ಕರ್ನಾಟಕದ ಹೃದಯ ಭಾಗ.ದಾವಣಗೆರೆ ಸಂಗೀತ,ನೃತ್ಯ,ಕವಿ,ಕಲಾವಿದರ ತವರೂರು ಅಷ್ಟೆ ಅಲ್ಲಾ ಕನ್ನಡ ನೆಲ,ಜಲ,ಭಾಷೆಯ ವಿಷದಲ್ಲಿ ಯಾವುದೇ ರಾಜಿಇಲ್ಲದೆ ಹೋರಾಡಿದ ಅಪ್ಪಟ ಕನ್ನಡಪರ ಗೋಕಾಕ್ ವರದಿ ಜಾರಿಯ ಹೋರಾಟದಂಥ ಹತ್ತು ಹಲವಾರು ಹೋರಾಟಗಳಲ್ಲಿ ಮುಂಚೂಣಿ ಯಲ್ಲಿದ್ದು ಹೋರಾಡಿದ ದಿಟ್ಟ ಕೆಚ್ಚೆದೆಯ ಕನ್ನಡಪರ ಹೋರಾಟಗಾರರ ಬಹುದೊಡ್ಡ ಹೆಸರಿನ ನೂರಾರು ಮಹಾನ್ ಕನ್ನಡಪರ ಹೋರಾಟಗಾರರ ನೆಲೆಯಾಗಿದೆ.ಅಂಥ ನಾಯಕರಿಗೆ ಅವಮಾನವಾಗುವಂತ ವರ್ತನೆಗಳು ಇತ್ತೀಚಿನ ದಾವಣಗೆರೆಯ ಜಿಲ್ಲಾಡಳಿತ,ಮಹಾನಗರಪಾಲಿಕೆ ಕೊಡಮಾಡುವ ರಾಜ್ಯೋತ್ಸವ ಪುರಸ್ಕೃತರು ಪ್ರತಿವರ್ಷ ನಾಮುಂದು ತಾಮುಂದು ಎಂಬಂತೆ ಕಂಡಕಂಡವರ ದುಂಬಾಲುಬಿದ್ದು ಪ್ರಶಸ್ತಿ ಪಟ್ಟಿಯಲ್ಲಿ ಹೆಸರುಸೇರಿಸಲು ಹೆಣಗಾಡುವವರಿಗೇನೂ ಕಡಿಮೆಇಲ್ಲದಷ್ಟು ನಾಚಿಕೆ ಬರುವಂತಿವೆ ಮತ್ತು ಕನ್ನಡಪರ ಹೋರಾಟ ಸಂಘಟನೆಗಳು ಜಿಲ್ಲಾ,ರಾಜ್ಯ,ರಾಷ್ಟ್ರ,ಅಂತರ್ ರಾಷ್ಟ್ರೀಯ ಮಟ್ಟದ ಸಂಘಟನೆಗಳೂ ಇದೆ ದಾವಣಗೆರೆ ನಗರದಲ್ಲಿವೆ.ಆದರೆ ಕೆಲವು ಸಂಘಟನೆಗಳ ಹೆಸರಲ್ಲಿ ಮಾಡಬಾರದ ಕೆಲಸಗಳನ್ನೂ ಮಾಡಿ ಹೊಟ್ಟೆಪಾಡಿಗೆ ಇದ್ದಾರೆಂದೂ ಜನರು ಆಡಿಕೊಳ್ಳುವದೂ ಉಂಟು.
ಇವರೆಲ್ಲರೂ ಒಂದುಕಡೆಯಾದರೆ ಸ್ವತಃ ಕನ್ನಡ ಚಲನಚಿತ್ರದ ಹೆಸರಾಂತ ನಟಿಯರಲ್ಲಿ ಒಬ್ಬರಾದಂಥ “ಪದ್ಮಶ್ರೀ ” ಪ್ರಶಸ್ತಿ ಪುರಸ್ಕೃತರು ಕನ್ನಡ ನಾಡು,ನುಡಿ,ಕಲೆಗಾಗಿ ದುಡಿದ ಹೆಮ್ಮೆಯ ಕಲಾವಿದೆ ದಿವಂಗತ ಚಿಂದೋಡಿ ಲೀಲಮ್ಮನವರ ಕುಟುಂಬದವರ ಒಡೆತನದ ಶಂಕರ್ ಲೀಲಾ ಗ್ಯಾಸ್ ಎಜನ್ಸಿಯ ಬಿಲ್ಲಿನಲ್ಲಿರುವ ಕನ್ನಡ ಪದ ದಾವಣಗೆರೆಯ ಹೆಸರನ್ನು ಓದಿದ ಕನ್ನಡಿಗರೆಲ್ಲರೂ ಸೇರಿದಂತೆ ಅದರಲ್ಲೂ ವಿಶೇಷವಾಗಿ ಕನ್ನಡಪರ ಹೋರಾಟಗಾರರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮೂರ್ಛೆ ಹೋಗಲೂಬಹುದು ಆದ್ದರಿಂದ ಕನ್ನಡದ ಅನ್ನತಿಂದು ಬೆಳೆದು ಕನ್ನಡವನ್ನು ಕೊಲ್ಲುವ ಕನ್ನಡಕಲಾವಿದರ ಕುಟುಂಬದವರು ಇದಕ್ಕೆ ಸಂಭಂದಪಟ್ಟವರು ತಕ್ಷಣವೇ ಶಂಕರ್ ಲೀಲಾ ಗ್ಯಾಸ್ ಎಜನ್ಸಿಯ ಬಿಲ್ಲುಗಳಲ್ಲಿ ಕನ್ನಡ ಕೊಲ್ಲುವಂತೆ ಆಗಿರುವುದನ್ನು ಸರಿಪಡಿಸಿ ಬಹಿರಂಗವಾಗಿ ಕನ್ನಡಿಗರ ಕ್ಷಮೆ ಕೋರಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಶಂಕರ್ ಲೀಲಾಗ್ಯಾಸ್ ಗ್ರಾಹಕರು ಕನ್ನಡ ಪ್ರೇಮಿಯೂ ಆಗಿರುವ ಶ್ರೀ ಅಶೋಕ ಶೆಟ್ಟಿಯವರು ಅಗ್ರಹ ಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments