ದಾವಣಗೆರೆ ಗ್ರಾಮಾಂತರ ವ್ಯಾಪ್ತಿಗೆ ಬರುವ ವಡ್ಡವನಹಳ್ಳಿ ಕೇಂದ್ರ ಸರ್ಕಾರ ಇಲಾಖೆಯ ಒಳಪಟ್ಟಿರುವ ಅಂಗವಿಕಲರ ತರಬೇತಿ ಕೇಂದ್ರದಲ್ಲಿ ಪ್ರಾರಂಭವಾದ ದಿನದಿಂದ ಯಾವುದೇ ಕಾರ್ಯಕ್ರಮದಲ್ಲಿ ನಡೆದರು ಕನ್ನಡ ಬಳಕೆ ಮಾಡುತ್ತಿಲ್ಲ ಮತ್ತು ಒಬ್ಬ ಕನ್ನಡಿಗನು ನಮ್ಮ ನಾಡಿನ ವಿಕಲಚೇತನ ಮಕ್ಕಳಿಗೆ ತರಬೇತಿ ಕೊಡುವ ಕನ್ನಡ ಶಿಕ್ಷಕ ಇಲ್ಲ ಎಲ್ಲಾ ಉತ್ತರ ಭಾರತೀಯರು ಮತ್ತು ತಮಿಳುನಾಡಿನಿಂದ ಬಂದಂತಹ ಶಿಕ್ಷಕರೇ ಇದ್ದಾರೆ ತಕ್ಷಣ ಕನ್ನಡ ಶಿಕ್ಷಕರ ನೇಮಕ ಆಗಬೇಕು ಕನ್ನಡ ಬಳಕೆ ಆಗಬೇಕೆಂದು ಕರವೇ ಒತ್ತಾಯಿಸುತ್ತದೆ. ಇತ್ತೀಚಿಗೆ ಯೂತ್ ಡೇ ನಮ್ಮ ಕಾರ್ಯಕ್ರಮ ಸಹ ನಡೆಸಲಾಯಿತು ಅದರಲ್ಲೂ ಸಹ ಒಂದು ಪದ ಕನ್ನಡ ಬಳಕೆ ಮಾಡದೆ ಹಿಂದಿ ಇಂಗ್ಲಿಷ್ ನಲ್ಲಿ ಕಾರ್ಯಕ್ರಮ ನಡೆಸಿದ್ದಾರೆ ಇದರ ಮೇಲೆ ಉಸ್ತುವಾರಿ ಯಾದ ನಮ್ಮ ಜಿಲ್ಲಾಡಳಿತದಲ್ಲೇ ಇರುವ ವಿಕಲಚೇತನ ಮತ್ತು ಅಂದ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಕಾಶ್ ಅವರನ್ನು ಕೇಳಿದರೆ ನಾವು ಈಗಾಗಲೇ ಅನೇಕ ಸಾರಿ ತಿಳಿಸಿದ್ದೇವೆ . ಕನ್ನಡದಲ್ಲಿ ಕಾರ್ಯಕ್ರಮ ನಡೆಸಬೇಕು ಆದರೆ ಇದು ಕೇಂದ್ರ ಸರ್ಕಾರ ಇಲಾಖೆಯಲ್ಲಿ ಒಳಪಡುತ್ತದೆ ಆದ ಕಾರಣ ನಾವು ಮಾಡುವುದಕ್ಕೆ ಬರುವುದಿಲ್ಲ ಅಂತ ತಿಳಿಸಿದ್ದಾರೆ ಹೇಳಿದರು ಇದಕ್ಕೆ ಒಪ್ಪದ ಕರವೇ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ಅವರು ಮಾತನಾಡಿ ನಮ್ಮ ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡ ಯಾವುದೇ ಕೇಂದ್ರ ಸರ್ಕಾರದ ಒಳಪಟ್ಟಿರುವ ಇಲಾಖೆಗಳು ತ್ರಿಭಾಷಾ ಸೂತ್ರ ಅನುಸರಿಸಬೇಕು ಇಲ್ಲವಾದರೆ ಅಂತ ಇಲಾಖೆಗಳು ನಮ್ಮ ಜಿಲ್ಲೆಯಲ್ಲಿ ಇರುವುದು ಅವಶ್ಯಕತೆ ಇಲ್ಲ ಇದಕ್ಕೂ ಮೀರಿ ನಡೆದರೆ ಅಂತ ಇಲಾಖೆಗಳ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು ಆಗ ಅಧಿಕಾರಿಗಳು ಈಗಾಗಲೇ ಜಿಲ್ಲಾಧಿಕಾರಿಗಳು ಅವರಿಗೆ ನೋಟಿಸ್ ನೋಡಲು ತಿಳಿಸಿದ್ದಾರೆ ಒಂದು ವಾರ ಸಮಯ ಕೊಡಿ ಅಷ್ಟರ ಒಳಗಾಗಿ ಸರಿಪಡಿಸುತ್ತೇವೆ ಇಂದು ಪ್ರಕಾಶ್ ತಿಳಿಸಿದ್ದಾರೆ ಕರ್ನಾಟಕ ತೋಟಪ್ಪನ ಛತ್ರ ಯಂತೆ ಅಂದುಕೊಂಡಿದ್ದಾರೆ ನಮ್ಮ ರಾಜ್ಯದಲ್ಲಿ ಯಾವ ಪರಭಾಷೆಕರೆ ಬರಲಿ ಯಾವ ಇಲಾಖೆ ನೇ ಬರಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಲೇಬೇಕು ಇಲ್ಲವಾದರೆ ಅಂತವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಕ್ಕ ಪಾಠ ಕಲಿಸಲಿದೆ ಎಂದು ಕರವೇ ಜಿಲ್ಲಾ ಅಧ್ಯಕ್ಷರ ಎಂ ಎಸ್ ರಾಮೇಗೌಡ ತಿಳಿಸಿದ್ದಾರೆ
ಅಂಗವಿಕಲರ ತರಬೇತಿ ಕೇಂದ್ರದಲ್ಲಿ ಕನ್ನಡ ಬಳಕೆ ಮಾಡದ ಅಧಿಕಾರಿಗಳ ವಿರುದ್ಧ ಕರವೇ ಕಿಡಿ
RELATED ARTICLES