ದಾವಣಗೆರೆ ಜ 31:ತಾಲೂಕಿನ ಲೋಕಿಕೆರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ಜಗದೀಶ್ ಅವಿರೋಧ ಆಯ್ಕೆಯಾಗಿದ್ದಾರೆ.
ತೆರವಾಗಿದ್ದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ
ದಿನಾಂಕ ನಿಗದಿಯಾಗಿದ್ದು
ಶ್ರೀಮತಿ ಗೀತಾ ಜಗದೀಶ್ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಚುನಾವಣಾ ಅಧಿಕಾರಿ ಯಾಗಿದ್ದ ಸಹಕಾರಿ ಸಂಘಗಳ ನಿಬಂಧಕರಾದ ಶ್ರೀಮತಿ ಮಂಜುಳಾ ಶ್ರೀಮತಿ ಗೀತಾ ರವರನ್ನು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಯಾಗಿದ್ದರೆಂದು ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾಮ
ಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ಶಿಲ್ಪಾ ಶಿವಮೂರ್ತಿ, ಪಿ ಡಿ ಓ ಶ್ರೀಮತಿ ಅಶ್ವಿನಿ, ಕಾರ್ಯದರ್ಶಿ ಸುರೇಶ ನಾಯ್ಕ್, ಗ್ರಾಮ ಪಂಚಾಯತಿಯ ಸದಸ್ಯರುಗಳಾದ ಶ್ರೀಮತಿ ಪಾರ್ವತಮ್ಮ ಅಡಿವಪ್ಪ, ಶ್ರೀಮತಿ ಕವಿತಾ ಕೃಷ್ಣಪ್ಪ, ಎಂ ಕೆ ದಾನಪ್ಪ, ಶ್ರೀಮತಿ ನಿವೇದಿತಾ ಕೆ ಓ.ಶ್ರೀಮತಿ ಎಸ್, ಎ, ಸುಧಾ, ಶ್ರೀಮತಿ ರಾಧಮ್ಮ ನಾಗಪ್ಪ, ಹೆಚ್ ಹೆಚ್ ಉಮೇಶ್, ಓಬಳೇಶ್, ಜಿಟಿ ಹನುಮಂತಪ್ಪ, ಶ್ರೀಮತಿ ನಾಗಮ್ಮ, ಟಿ ಹೆಚ್ ಮೂರ್ತಪ್ಪ,ಮಂಜಪ್ಪ, ಮೂಡ್ಲಿ ಅಂಜಿನಪ್ಪ, ಸೇರಿದಂತೆ ಗ್ರಾಮದ ಮುಖಂಡರು ಹಿರಿಯರು ಉಪಸ್ಥಿತರಿದ್ದು
ಅವಿರೋಧ ಆಯ್ಕೆಗೆ ಸಹಕರಿಸಿದರು.