Thursday, August 21, 2025
Home/ಗ್ನರಾಮಗರ/ಪಟ್ಟಣಬೆಂಗಳೂರು ಮಹಾನಗರದಂತೆ ದಾವಣಗೆರೆ ಎಂಸಿಸಿ ಬಿ ಬ್ಲಾಕ್ ಅಭಿವೃದ್ಧಿ: ಮೇಯರ್ ಕೆ. ಚಮನ್ ಸಾಬ್

ಬೆಂಗಳೂರು ಮಹಾನಗರದಂತೆ ದಾವಣಗೆರೆ ಎಂಸಿಸಿ ಬಿ ಬ್ಲಾಕ್ ಅಭಿವೃದ್ಧಿ: ಮೇಯರ್ ಕೆ. ಚಮನ್ ಸಾಬ್

ದಾವಣಗೆರೆ: ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ಮಹಾನಗರಗಳ ಹೃದಯಭಾಗದಲ್ಲಿನ ಪ್ರದೇಶದ ಅಭಿವೃದ್ಧಿಯಂತೆ ದಾವಣಗೆರೆ ಮಹಾನಗರ ಪಾಲಿಕೆಯ 38ನೇ ಎಂಸಿಸಿ ಬಿ ಬ್ಲಾಕ್ ಅಭಿವೃದ್ಧಿಪಡಿಸಲಾಗಿದೆ. ಇದೊಂದು ಅತ್ಯುತ್ತಮ ಕಾರ್ಯ ಎಂದು ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಬಣ್ಣಿಸಿದರು.

ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಇಲ್ಲಿನ ಅಭಿವೃದ್ಧಿ ಮತ್ತು ಸ್ವಚ್ಛತೆ ನೋಡಿದರೆ ಖುಷಿಯಾಗುತ್ತದೆ. ಈ ವಾರ್ಡ್ ನಲ್ಲಿ ಆದಷ್ಟು ಅಭಿವೃದ್ದಿ ಕಾರ್ಯಗಳು ಬೇರೆ ಆಗಿಲ್ಲ ಎಂದೆನಿಸುತ್ತದೆ. ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಆಗಿರುವ ಅಭಿವೃದ್ಧಿಯಂತೆ ಈ ವಾರ್ಡ್ ಬೆಳೆದಿರುವುದು ಎಲ್ಲರಿಗೂ ಮಾದರಿ ಎಂದು ಹೇಳಿದರು.

ಈ ವಾರ್ಡ್ ಪಾಲಿಕೆ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಅವರು ಶಕ್ತಿಮೀರಿ ಅನುದಾನ ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಈ ವಾರ್ಡ್ ಗೆ ಕೋಟ್ಯಾಂತರ ರೂಪಾಯಿ ಅನುದಾನ ತಂದು ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದಾರೆ. ಮನೆ ಬಾಗಿಲಿಗೆ ನಿಮ್ಮ ಸೇವಕ ಅಭಿಯಾನ ನಡೆಸಿ ಇತಿಹಾಸ ಬರೆದಿದ್ದಾರೆ. ಇಂಥ ಜನಪ್ರತಿನಿಧಿ ಪಡೆದ ಈ ವಾರ್ಡ್ ನ ಜನರು ಧನ್ಯರು. ಯಾಕೆಂದರೆ ಕೇವಲ ಅಭಿವೃದ್ಧಿ ಮಾತ್ರವಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಯಾವಾಗಲೂ ಅಭಿವೃದ್ಧಿ ಪರ ಚಿಂತನೆ ಮಾಡುತ್ತಿದ್ದ ಇಂಥ ಜನಪ್ರತಿನಿಧಿ ಕೈಬಿಡಬೇಡಿ. ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ ಎಂದು ಚಮನ್ ಸಾಬ್ ಹೇಳಿದರು.

ಪಾಲಿಕೆ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಮಾತನಾಡಿ, ವಾರ್ಡ್ ನಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯವಾಗಿದ್ದು ಜನರು ತೋರಿಸಿದ ಪ್ರೀತಿ, ಕೊಟ್ಟ ಧೈರ್ಯವೇ ಕಾರಣ. ಏನೇ ಸಮಸ್ಯೆಗಳಿದ್ದರೂ ಹೇಳುವ ಜನರು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದ್ದಾರೆ. ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. ಈ ಅನುದಾನದಲ್ಲಿಯೇ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನದಲ್ಲಿ ನಮ್ಮ ವಾರ್ಡ್ ಇದೆ ಎಂಬುದೇ ಖುಷಿಯ ವಿಚಾರ. ಯಾಕೆಂದರೆ ಜನರು ಸಹ ಅಷ್ಟೇ ಕಾಳಜಿ ವಹಿಸಿ ವಾರ್ಡ್ ಸ್ವಚ್ಛವಾಗಿಟ್ಟುಕೊಂಡಿದ್ದಾರೆ. ಒಣ ಕಸ, ಹಸಿ ಕಸ ಬೇರ್ಪಡಿಸಿ ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಜನರ ಬಲದಿಂದಾಗಿಯೇ ಇಷ್ಟೊಂದು ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಪ್ರಭಾ ಮಲ್ಲಿಕಾರ್ಜುನ್ ಅವರ ಆಶೀರ್ವಾದವೂ ಪ್ರಮುಖ ಅಂಶ ಎಂದು ತಿಳಿಸಿದರು.

ಎಂಸಿಸಿ ಬಿ ಬ್ಲಾಕ್ ನ ಶ್ರೀ ಕಾಸಲ್ ಶ್ರೀನಿವಾಸ್ ಶೆಟ್ಟಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ ಒಂದು ಕೋಟಿ ರೂಪಾಯಿ, ಶ್ರೀ ಕಾಸಲ್ ಶ್ರೀನಿವಾಸ ಶೆಟ್ಟಿ ಉದ್ಯಾನವನದ ಅಲಂಕಾರಿಕಾ ದೀಪದ ಕಂಬಗಳ ಸ್ಥಾಪನೆ ಕಾಮಗಾರಿಗೆ 40 ಲಕ್ಷ ರೂಪಾಯಿ, 8ನೇ ಮೇನ್ 5ನೇ ಕ್ರಾಸ್ ರಸ್ತೆ ಅಭಿವೃದ್ಧಿ ಕಾಮಗಾರಿ 25 ಲಕ್ಷ ರೂಪಾಯಿ, ಪಾಲಿಕೆಯ ಗಾಂಜಿ ವೀರಪ್ಪ ಈಜುಕೊಳ ಆವರಣದಲ್ಲಿ ಬೇಬಿ ಫೂಲ್ ನಿರ್ಮಾಣ ಕಾಮಗಾರಿಗೆ 25 ಲಕ್ಷ ರೂಪಾಯಿ, 6ನೇ ಮೇನ್ 4ನೇ ಕ್ರಾಸ್ ನಲ್ಲಿರುವ ಮಕ್ಕಳ ಉದ್ಯಾನವನಕ್ಕೆ ಸುಣ್ಣ, ಬಣ್ಣ ಹಾಗೂ 11 ನೇ ಮೇನ್ ಆರನೇ ಕ್ರಾಸ್ ನಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರಿಗೆ ಇರುವ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು 10 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಗಣೇಶ್ ಹುಲ್ಲುಮನೆ, ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಆಶಾ ಉಮೇಶ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಮಂಜುನಾಥ ಇಟ್ಟುಗುಡಿ, ನಾಮನಿರ್ದೇಶಿತ ಸದಸ್ಯ ಸುರಭಿ ಶಿವಮೂರ್ತಿ, ತೆರಿಗೆ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಉರ್ ಬಾನು ಪಂಡಿತ್, ಅಂದನೂರು ಮಂಜಣ್ಣ, ಪರಶುರಾಮಪ್ಪ, ಜಾವೀದ್ ಸಾಬ್, ಜಬ್ಬರ್ ಸಾಬ್, ಕುಶಲ್ ಶೆಟ್ರು, ಕಬ್ಬೂರು ಪ್ರಕಾಶ್, ಬೆಳ್ಳೂಡಿ ವೀರಣ್ಣ, ಮೇಕಾ ಸತ್ಯನಾರಾಯಣ್, ಪ್ರಕಾಶ್, ನಿಂಗನಗೌಡ, ವೀರೇಶ್ ಪಾಟೀಲ್, ರುದ್ರೇಶ್, ದೊಗ್ಗಳ್ಳಿ ಶಿವಕುಮಾರ್, ಹೇಮಂತ್ ಆರಾಧ್ಯ, ರವಿಯಣ್ಣ, ಗುರುಮೂರ್ತಿ, ಮುರುಗೇಶ್ ಮಂತ್ರಿ, ಶೌಕತ್ ಆಲಿ, ವಿಶ್ವನಾಥ್ ಬುಳ್ಳಾಪುರ, ಶ್ರೀಕಾಂತ್, ಮಂಜುನಾಥ್, ಬಿ ಬ್ಲಾಕ್ ನ ಹಿರಿಯ ನಾಗರಿಕರು, ಸಾರ್ವಜನಿಕರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments