Thursday, August 21, 2025
Homeಸಾರ್ವಜನಿಕ ಧ್ವನಿಚನ್ನಗಿರಿ ಶಾಸಕನ ವಿರುದ್ಧ ಕಿಡಿ ಕಾರಿದ ಅಹಿಂದ.ರಾಜಿನಾಮೆಗೆ ಒತ್ತಾಯ.

ಚನ್ನಗಿರಿ ಶಾಸಕನ ವಿರುದ್ಧ ಕಿಡಿ ಕಾರಿದ ಅಹಿಂದ.ರಾಜಿನಾಮೆಗೆ ಒತ್ತಾಯ.

ದಾವಣಗೆರೆ: ಸಾಮಾಜಿಕ, ಶೈಕ್ಷಣಿಕ, ಜಾತಿ ಗಣತಿ ವರದಿ ಬಿಡುಗಡೆ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜುರವರನ್ನು ಬೆಂಬಲಿಸಿದ, ಕ್ಷೇತ್ರದ ಅಹಿಂದ ಮತದಾರರಿಗೆ ಮಾಡುತ್ತಿರುವ ದ್ರೋಹ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಹಿಂದ ಸಹಕಾರವಿಲ್ಲದೇ ಚುನಾವಣೆ ಎದುರಿಸಿ ಗೆಲ್ಲಲಿ.

ಕಾಂಗ್ರೇಸ್ ಪಕ್ಷದಡಿಯಲ್ಲಿ ಟಿಕೆಟ್ ಪಡೆದು, ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ಸಹಕಾರದಿಂದ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿರುವ ಅಹಿಂದ ಮತದಾರರ ಮತಗಳಿಂದ ಆಯ್ಕೆಯಾಗಿ, ಶಾಸಕರಾಗಿ ವಿಜೃಂಭಿಸುತ್ತಿರುವ ಶಿವಗಂಗಾ ಬಸವರಾಜುರವರು ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಲು ನಾನು ಬಿಡುವುದಿಲ್ಲವೆಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ.
2015ರಲ್ಲಿ ಅಂದಿನ ಕಾಂಗ್ರೇಸ್ ಸರ್ಕಾರದ ಆಳ್ವಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ, ಶೈಕ್ಷಣಿಕ, ಜಾತಿ ಗಣತಿ ನಡೆಸಲು 165 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗದ ಸಹಯೋಗದಲ್ಲಿ “ವಿದ್ಯಾವಂತ, ತರಬೇತಿ ಪಡೆದ ಶಿಕ್ಷಕರು”ಗಳಿಂದ ಮನೆ, ಮನೆ ಸಮೀಕ್ಷೆಗಳನ್ನು ನಡೆಸಿದ್ದಾರೆ. 55 ಪ್ರಶ್ನೆಗಳನ್ನು ಒಳಗೊಂಡ ಸಮೀಕ್ಷೆಯಲ್ಲಿ ಒಬ್ಬ ವ್ಯಕ್ತಿಯ, ಒಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿಗಳ ಸಂಗ್ರಹವಾಗಿರುತ್ತದೆ. ವರದಿ ಸಿದ್ಧವಾಗಿದ್ದರೂ 10 ವರ್ಷಗಳಿಂದ ಬಿಡುಗಡೆಗೊಳಿಸಲು ಮೀನಾ ಮೇಷ ಎಣಿಸುತ್ತಿರುವುದು, ಅಂದಿನ ಕಾಂಗ್ರೇಸ್, ಸಮ್ಮಿಶ್ರ, ಬಿಜೆಪಿ ಮತ್ತು ಮತ್ತೊಮ್ಮೆ ಕಾಂಗ್ರೇಸ್ ಪಕ್ಷಗಳ ಸರ್ಕಾರಗಳು ಅಹಿಂದ ವರ್ಗಗಳಿಗೆ ಮಾಡುತ್ತಿರುವ ಅನ್ಯಾಯ.

ಕಾಂಗ್ರೇಸ್ ಪಕ್ಷದ ವರಿಷ್ಠರು ಪ್ರತಿಪಕ್ಷದ ನಾಯಕರೂ ಆಗಿರುವ ರಾಹುಲ್‌ಗಾಂಧಿಯವರು ದೇಶಾದ್ಯಂತ ಜಾತಿ ಗಣತಿ ಮಾಡಲು ಲೋಕಸಭೆಯಲ್ಲಿ ಹಾಗೂ ಚುನಾವಣಾ ಪ್ರಚಾರಗಳಲ್ಲಿ ಒತ್ತಾಯ ಮಾಡಿರುತ್ತಾರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ “ಜಾತಿ ಗಣತಿ” ಬಿಡುಗಡೆ ಮಾಡುತ್ತೇವೆಂದು ವಾಗ್ದಾನ ನೀಡಿರುತ್ತಾರೆ. ಅಂದು ಪ್ರಣಾಳಿಕೆಯನ್ನು ಜನರ ಮುಂದಿಟ್ಟು ಮತಗಳನ್ನು ಕೇಳಿ ಗೆದ್ದಿರುವ ಚನ್ನಗಿರಿ ಶಾಸಕರಿಗೆ ಅಂದು ಜಾತಿ ಗಣತಿಯ ಅಂಶವನ್ನು ಯಾಕೆ ವಿರೋಧಿಸಲಿಲ್ಲ ? 10ವರ್ಷಗಳ ನಂತರ ನಮ್ಮ ಮನೆಗೆ ಬಂದು ಸಮೀಕ್ಷೆ ನಡೆಸಲಿಲ್ಲ, ಎಲ್ಲೋ ಕುಳಿತು ಸಮೀಕ್ಷೆ ಮಾಡಿರುತ್ತಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವ ಶಾಸಕರು ಅಂದು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಾಗಿ, ಸರ್ಕಾರದ ಭಾಗವಾಗಿದ್ದರು. ಇಂದು “ನಮ್ಮ
ಮನೆಗೆ ಬಂದಿಲ್ಲ ಎಂದು ಹೇಳುವುದೇ ಪ್ರಜಾಪ್ರಭುತ್ವಕ್ಕೆ ಹಾಗೂ ತನ್ನ ಪಕ್ಷಕ್ಕೆ ಮಾಡುತ್ತಿರುವ ಅಪಮಾನ” ಚನ್ನಗಿರಿ ಕ್ಷೇತ್ರದ 80% ರಷ್ಟಿರುವ ಅಹಿಂದ ವರ್ಗಗಳಿಗೆ ಅಪಮಾನ ಮಾಡುತ್ತಿರುವ ಶಿವಗಂಗಾ ಬಸವರಾಜುರವರು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಹಿಂದ ವರ್ಗಗಳ ಮತಗಳ ಬೆಂಬಲವಿಲ್ಲದೇ ಚುನಾವಣೆ ಎದುರಿಸಲಿ ಎಂಬ ಪಂಥಾಹ್ವಾನವನ್ನು ನೀಡುತ್ತಿದ್ದೇವೆ.

ಪಕ್ಕದ ತೆಲಂಗಾಣ ರಾಜ್ಯದ ಕಾಂಗ್ರೇಸ್ ನೇತೃತ್ವದ ಸರ್ಕಾರ ಒಂದೇ ವರ್ಷದಲ್ಲಿ ಜಾತಿ ಗಣತಿಯನ್ನು ಬಿಡುಗಡೆ ಮಾಡಿದ್ದಾರೆ ಅವರು ತೋರಿಸಿದ ಧೈರ್ಯ ಹಾಗೂ ಬದ್ಧತೆಯನ್ನು, ಅಹಿಂದ ವರ್ಗಗಳ ಪರಮೋಚ್ಚ ನಾಯಕರಾದ ಶ್ರೀ ಸಿದ್ದರಾಮಯ್ಯನವರು 10 ವರ್ಷಗಳ ಹಿಂದೆ ತಾವೇ ನಡೆಸಿದ ಸಮೀಕ್ಷೆ,ಮತ್ತೊಮ್ಮೆ ಮುಖ್ಯಮಂತ್ರಿಯಾಗಿ 2 ವರ್ಷಗಳು ಕಳೆದರೂ ಕಾಲಹರಣ ಮಾಡುತ್ತಾ, ಮೀನಾ ಮೇಷ ಎಣಿಸುತ್ತಿರುವುದು ಯಾಕೆ ? ಮುಖ್ಯಮಂತ್ರಿಗಳು ಈಗಲಾದ್ರೂ ಧೈರ್ಯ ತೋರಿ, ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಿ, ತಮ್ಮದೇ ಪಕ್ಷದ ಈ ವರದಿಯನ್ನು ವಿರೋಧಿಸುವ ಶಾಸಕರು, ಸಚಿವರುಗಳ ಉದ್ಧಟತನದ ಮಾತುಗಳಿಗೆ ಉತ್ತರ ನೀಡಿ, ಅಹಿಂದ ವರ್ಗಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು
ರಾಜು ಮೌರ್ಯ
ರಾಜ್ಯ ಪ್ರಧಾನ ಕಾರ್ಯದರ್ಶಿ ಅಹಿಂದ ಚೇತನ
ಎಸ್. ಎಂ. ಸಿದ್ದಲಿಂಗಪ್ಪ
ರಾಜ್ಯ ಸಂಘಟನಾ ಕಾರ್ಯದರ್ಶಿ ಅಹಿಂದ ಚೇತನ
ಸಿ. ವೀರಣ್ಣ
ಜಿಲ್ಲಾಧ್ಯಕ್ಷರು ಹಾಲುಮತ ಮಹಾಸಭಾ
ಚಂದ್ರು ದೀಟೂರ್
ಕಾರ್ಯಾಧ್ಯಕ್ಷರು, ಹಾಲುಮತ ಮಹಾಸಭಾ
ಹಸನ್ ಬಾಬು ಅಹಿಂದ ಚೇತನ
ಅಣ್ಣಪ್ಪ ಎಲ್. ಅಹಿಂದ ಮುಖಂಡರು
ಹೊಳೆಬಸಪ್ಪ ಎಸ್. ಅಹಿಂದ ಮುಖಂಡರು
ಎಸ್. ಶೇಖರಪ್ಪ, ಚಲವಾದಿ ಸಮುದಾಯದ ಮುಖಂಡರು, ಅನಿಲ್ ಕುಮಾರ್, ಹಾಲುಮತ ಮಹಾಸಭಾದ ಇತರರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments