Thursday, August 21, 2025
Homeಬರಹಮಾಹಾಶಿವನ 60 ಅಡಿ ಎತ್ತರದ ಬೃಹತ್ ವಿಗ್ರಹಕ್ಕೆ ಜೀವಕಳೆ ತುಂಬಿದ ಬಸವರತ್ನ ರಾಷ್ಟ್ರೀಯ ಪ್ರಶಸ್ಥಿ ಪುರಸ್ಕೃತ...

ಮಾಹಾಶಿವನ 60 ಅಡಿ ಎತ್ತರದ ಬೃಹತ್ ವಿಗ್ರಹಕ್ಕೆ ಜೀವಕಳೆ ತುಂಬಿದ ಬಸವರತ್ನ ರಾಷ್ಟ್ರೀಯ ಪ್ರಶಸ್ಥಿ ಪುರಸ್ಕೃತ ಶಿಲ್ಪಿ ಟಿ. ಶಿವಶಂಕರ್

ಮಹಾಶಿರಾತ್ರಿಗೆ ಮಾಹಾಶಿವನ 60 ಅಡಿ ಎತ್ತರದ ಬೃಹತ್ ವಿಗ್ರಹಕ್ಕೆ ಜೀವಕಳೆ ತುಂಬಿದ ಬಸವರತ್ನ ರಾಷ್ಟ್ರೀಯ ಪ್ರಶಸ್ಥಿ ಪುರಸ್ಕೃತ ಶಿಲ್ಪಿ ಟಿ. ಶಿವಶಂಕರ್ ರವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಸದ್ಗುರು ದತ್ತಾವಧೂತ ಆಶ್ರಮ ಭಾರತೀಯ ಸಾಂಪ್ರದಾಯಿಕ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವಿದ್ಯಾವಂತ ಶಿಲ್ಪಿ ಶಿವಶಂಕರ್ ಹಗಲಿರುಳು ಶ್ರಮ ಕರ್ನಾಟಕದಲ್ಲಿ ದೇವಾಲಯಗಳಿಗೆ ಗೋಪುರಗಳನ್ನು ನಿರ್ಮಿಸುವಲ್ಲಿ ನೈಪುಣ್ಯತೆ ಹೊಂದಿರುವ ರಾಜ್ಯ ಪ್ರಶಸ್ತಿ ಪುರಸ್ಕöÈತ ಟಿ ಶಿವಶಂಕರ್. ಶಿಲ್ಪಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಶ್ರೀ ದತ್ತಾವಧೂತ. ಸದ್ಗುರು ಅಪ್ಪ ಅವರ ಆಶೀರ್ವಾದದಿಂದ ದತ್ತಾವಧೂತ ಆಶ್ರಮದಲ್ಲಿ ನಿರ್ಮಿಸಿರುವ ನೆಲದಿಂದ 60 ಅಡಿ ಎತ್ತರದ ಶಿವನ ವಿಗ್ರಹ ನೋಡುಗರ ಕಣ್ಮನ ಸೆಳೆಯುತ್ತಿದೆ. ಈ ಶಿವನ ವಿಗ್ರಹ ಅದ್ಭುತವಾಗಿದೆ. ಈ ವಿಗ್ರಹವು .ಕೇವಲ ಆರು ತಿಂಗಳಲ್ಲಿ ಸಂಪೂರ್ಣವಾಗಿ ನಿರ್ಮಿಸಿರುತ್ತಾರೆ. ಟಿ ಶಿವಶಂಕರ್ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶಿಲ್ಪಿ .

ವಿದ್ಯಾಭ್ಯಾಸದಲ್ಲಿ ಹೆಚ್ಚು ದಿನ ಮುಂದುವರೆಯದಿದ್ದರೂ . ಶಿಲ್ಪಕಲೆಯಲ್ಲಿ ವಿಶೇಷವಾಗಿ ಗೋಪುರ ಹಾಗೂ ಸಭಾಮಂಟಪಗಳನ್ನು ನಿರ್ಮಿಸುವಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡವರು.ದಾವಣಗೆರೆ ನಗರದ ಶ್ರೇಷ್ಠ ವಾಸ್ತು ಶಿಲ್ಪ ಶೈಲಿಯನ್ನು ತಮ್ಮ ತಂದೆಯವರಾದ ಶಿಲ್ಪಕಲಾ ಅಕಾಡೆಮಿಯ ಪ್ರಶ್ಸಸ್ತಿ ಪುರಸ್ಕೃತರಾದ ದಿವಂಗತ ವೈ. ತಿಮ್ಮಪ್ಪ ರವರಿಂದ ಕಲಿತು ಜೀವನೋಪಾಯಕ್ಕಾಗಿ ಶಿಲ್ಪಕಲೆಗೆ ಜೀವನನ್ನೆ ಮುಡಿಪಾಗಿಟ್ಟ ಶಿಲ್ಪಿ. ಅದೇ ವೃತ್ತಿ ಜೀವನವಾಗಿ ಅನೇಕ ದುಡಿಯುವ ಕೈಗಳಿಗೆ ಕೆಲಸ ನೀಡಿರುತ್ತಾರೆ. ದಾವಣಗೆರೆಯವರಾದ ಟಿ ಶಿವಶಂಕರ್ ಸುತ್ತಮುತ್ತಲ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅಸಂಖ್ಯಾತ ಗುಡಿ ಗೋಪುರಗಳನ್ನು ಸಭಾ ಮಂಟಪಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇದಲ್ಲದೆ ಹೂರ. ರಾಜ್ಯಗಳಲ್ಲೂ ಸಹ ನಾಲ್ಕು ದಶಕಗಳಿಂದ ಮನೆ ಕುಟುಂಬ ಎನ್ನದೆ ಅನೇಕ ಗೋಪುರ ಹಾಗೂ ಸಭಾಮಂಟಪಗಳನ್ನು ವಿಭಿನ್ನ ಶೈಲಿಯಲ್ಲಿ ನಿರ್ಮಾಣ ಮಾಡಿರುವ ಶಿಲ್ಪಿ ಶಿವಶಂಕರ್. ಅವರು ಒಂದೊಂದು ದೇವಾಲಯವನ್ನೂ ವಿಭಿನ್ನ ರೀತಿಯಲ್ಲಿ ನಿರ್ಮಾಣ ಮಾಡುವಲ್ಲಿ ನಿಪುಣರು. ಶಿಲ್ಪಕಲಾ ಅಕಾಡೆಮಿಯ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ.ಭಾರತ ಜ್ಯೋತಿ ಹಾಗೂ ಬಸವರತ್ನ ರಾಷ್ಟ್ರೀಯ ಗೌರವವನ್ನೂ ಪಡೆದಿರುವ ಶಿವಶಂಕರ್ ರವರು ಅನೇಕ ಪ್ರಶಸ್ತಿ ಹೀಗೆ ನಾಡಿನ ಪ್ರತಿಷ್ಟಿತ ಮಠಮಾನ್ಯ ಸಂಘಸಂಸ್ಥೆಗಳು,ದಾವಣಗೆರೆ ಮಹಾನಗರ ಪಾಲಿಕೆ,ದಾವಣಗೆರೆ ಜಿಲ್ಲಾಡಳಿತ ಹೀಗೆ ಇಳಿವಯಸ್ಸಿನಲ್ಲಿ ಇವರ ಗುಣಮಟ್ಟ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಗೌರವ ಸಿಕ್ಕಿರುವುದು ಇವರ ಕಲೆಗೆ ಪ್ರೋತ್ಸಾಹ ದೊರೆತಿರುವುದು ಶ್ಲಾಘನೀಯವಾದದ್ದು.ಸರ್ಕಾರಿ ಕೆಲಸವನ್ನು ಹುಡುಕದೆ ತಂದೆಯಿಂದ ಕಲಿತ ವಿದ್ಯೆ ಇಂದು ಭಾರತೀಯ ಸಾಂಪ್ರದಾಯಿಕ ಕಲೆಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಶಿಲ್ಪಕಲಾವಿದರನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ ಇವರಿಂದ ತರಬೇತಿ ಪಡೆದ ನೂರಾರು ಕಲಾವಿದರ ಬಾಳಿಗೆ ಬೆಳಕಾಗಿ ಅವರ ಜೀವನಕ್ಕೆ ದಾರಿದೀಪವಾಗಿದ್ದಾರೆ.(ವಿಶೇಷ ಲೇಖನ ಬಿ. ಚನ್ನವೀರಯ್ಯ ಹಿರಿಯ ವರದಿಗಾರರು ದಾವಣಗೆರೆ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments