ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣವು ಇದೇ ಮಾರ್ಚ್ 15,16,17 ರಂದು ದಾವಣಗೆರೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ವೃತ್ತಿ ರಂಗೋತ್ಸವ – 2025 ಕಾರ್ಯಕ್ರಮ ಹಮ್ಮಿಕೊಂಡಿದೆ. ವಿಚಾರ ಸಂಕಿರಣ, ರಂಗ ದಾಖಲೆ ಮತ್ತು ಚಿತ್ರಕಲಾ ಪ್ರದರ್ಶನ, ರಂಗ ಸಂವಾದ ಸೇರಿದಂತೆ ಮೂರು ದಿವಸ ಮೂರು ಮಹತ್ವದ ನಾಟಕಗಳ ಪ್ರದರ್ಶನ ಜರುಗುತ್ತವೆ. ಮೂರು ನಾಟಕಗಳ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ “ನಾಟಕ ವಿಮರ್ಶಾ” ಸ್ಪರ್ಧೆ ಏರ್ಪಡಿಸಲಾಗಿದೆ.
ಪ್ರಥಮ ಬಹುಮಾನ ₹ 3000
ದ್ವಿತೀಯ ಬಹುಮಾನ ₹ 2000
ತೃತೀಯ ಬಹುಮಾನ ₹ 1000
ಸ್ಪರ್ಧೆಯ ನಿಯಮಗಳು :
- ವಿಮರ್ಶೆಯು ಐದುನೂರು ಪದಗಳ ಮಿತಿಯಲ್ಲಿರಬೇಕು
- ವಿಮರ್ಶೆಯು ಮೂರು ನಾಟಕಗಳ ಕುರಿತು ಇರಬೇಕು
- ವಿಮರ್ಶಾ ಕೈ ಬರಹ ಸ್ಪಷ್ಟವಾಗಿದ್ದು ಪದಗಳ ಸಂಖ್ಯೆ ಸಮೇತ ಇರಬೇಕು. ಡಿ.ಟಿ.ಪಿ. ಮಾಡಿ ಕಳಿಸಿದರೆ ಹೆಚ್ಚು ಉತ್ತಮ.
- ಕಾಲೇಜು ಪ್ರಾಚಾರ್ಯರಿಂದ ತಾವು ವಿದ್ಯಾರ್ಥಿ ಎಂಬುದರ ದಾಖಲೆ ಸಲ್ಲಿಸಬೇಕು
- ಫೋನ್ ನಂ. ಸಮೇತ ಪೂರ್ಣ ವಿಳಾಸ ದೊಂದಿಗೆ ವಿಮರ್ಶಾ ಬರಹ ಸಲ್ಲಿಸಲು 20.03.2025 ಕೊನೆಯ ದಿನಾಂಕ
- ಇದೇ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು
ಬರಹ ಕಳಿಸುವ ವಿಳಾಸ :
ನಿರ್ದೇಶಕರು /ವಿಶೇಷಾಧಿಕಾರಿಗಳು
ವೃತ್ತಿ ರಂಗಭೂಮಿ ರಂಗಾಯಣ,
ಕೊಠಡಿ ಸಂಖ್ಯೆ : 38 A
ಮೊದಲ ಮಹಡಿ, ಜಿಲ್ಲಾಡಳಿತ ಭವನ,
ಪಿ. ಬಿ. ರಸ್ತೆ ದಾವಣಗೆರೆ – 577006
dvgrangayan@gmail.com