ವಿಜಯಪುರ:ಬೆಳಗಾವಿಯಲ್ಲಿ ಮೀಸಲಾತಿ ಹೋರಾಟ ನಡೆಸಿದ ಸಂದರ್ಭದಲ್ಲಿ ಸರಕಾರ ನಡೆಸಿದ ಅಮಾನುಷ ಲಾಠಿ ಪ್ರಹಾರ ಖಂಡಿಸಿ ಪೂಜ್ಯ ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಧಾರವಾಡ ಹೈ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಇಂದು ಸರಕಾರಕ್ಕೆ ಛೀಮಾರಿ ಹಾಕಿದೆ. ಹಾಗೂ ಕಾಲ ಮಿತಿಯೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ.ಅಪಾರ ಸಂತಸ ವ್ಯಕ್ತಪಡಿಸಿದ ಸ್ವಾಮೀಜಿ ಅವರು ಈ ಪ್ರಥಮ ಹಂತದ ಗೆಲುವನ್ನು ಸಮಸ್ತ ಹೋರಾಟಗಾರರಿಗೆ ಸಮರ್ಪಿಸಿ ಅವರು ನಗರದ ಅದಿದ್ಯವ ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ಬೇಟಿ ನೀಡಿ ದರ್ಶನ ಪಡೆದು ಮಂಗಲಾರ್ಚನೆಗ್ಯದರು.ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ವತಿಯಿಂದ ಆಡಳಿತ ಮಂಡಳಿಯ ಶ್ರೀ ನೀಲಾ.ದೇಸಾಯಿ ಮುಂತಾದವರು ಶ್ರೀಗಳನ್ನು ಶಾಲು ಹೊದಿಸಿ ಫಲಪುಷ್ಪ ವಿತರಿಸಿ ಗೌರವಿಸಿ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಶ್ರೀ ಬಿ.ಎಂ.ಪಾಟೀಲ್ ದೇವರ ಹಿಪ್ಪರಗಿ. ನಿಂಗನಗೌಡ ಸೊಲ್ಲಾಪುರ.ದಾನೇಶ ಅವಟಿ.ಸಂತೋಷ ಮುಂಜಣ್ಣಿ.ಸಂತೋಷ ಅವಟಿ. ಗಿರೀಶ ಚಾಂಡಕವಟೆ.ಸದಾಶಿವ ಅಳ್ಳಿಗಿಡದ. ಮುಂತಾದವರಿದ್ದರು.