Thursday, August 21, 2025
Homeಬರಹರೇಣುಕರನ್ನ ಬಸವಣ್ಣನ ಬೆನ್ನೇರಿಸಿ ಕರ್ನಾಟಕದಲ್ಲಿ ವೀರಶೈವರು ಬೆಳೆಸಿದರು!

ರೇಣುಕರನ್ನ ಬಸವಣ್ಣನ ಬೆನ್ನೇರಿಸಿ ಕರ್ನಾಟಕದಲ್ಲಿ ವೀರಶೈವರು ಬೆಳೆಸಿದರು!

ಬಸವ ಜಯಂತಿಯಲ್ಲಿ ರೇಣುಕರ ಚಿತ್ರವಿಟ್ಟು ಆಚರಿಸಬೇಕು ಎಂದು ಶ್ರೀಯುತ ಶಂಕರ್ ಬಿದರಿಯವರಿ ಆದೇಶ ಕೊಟ್ಟಿದ್ದಾರಂತೆ..ಅದಕ್ಕಾಗಿ ಈ ಬರಹ..

ರೇಣುಕ ಒಂದು ಅಸ್ತಿತ್ವ ಇಲ್ಲದ ಕಾಲ್ಪನಿಕ ಪಾತ್ರ, ಆಂಧ್ರದ ಆರಾಧ್ಯ ಬ್ರಾಹ್ಮಣರು ವೀರಶೈವ ಕರ್ನಾಟಕದಲ್ಲಿ ನೆಲೆಯೂರಲು ಬಳಸಿಕೊಂಡ ಪಾತ್ರವಷ್ಟೇ..ರೇಣುಕರ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿವೆ ಅವುಗಳೆಲ್ಲ ಹೇಳುವುದು ಬಸವಣ್ಣನಿಗೂ ರೇಣುಕರಿಗೂ ಯಾವುದೇ ಸಂಬಂಧವಿಲ್ಲ, ಬದಲಾಗಿ ಅಸ್ತಿತ್ವವೇ ಇಲ್ಲದ ರೇಣುಕರನ್ನ ಬಸವಣ್ಣನ ಬೆನ್ನೇರಿಸಿ ಕರ್ನಾಟಕದಲ್ಲಿ ವೀರಶೈವರು ಬೆಳೆಸಿದರು, ಕಪೋಲ ಕಲ್ಪಿತ ಕಥೆಗಳನ್ನು ಕಟ್ಟಿದರು ಬಸವಣ್ಣನ್ನ ರೇಣುಕರ ಶಿಷ್ಯನನ್ನಾಗಿ ಬಿಂಬಿಸುವ ವ್ಯರ್ಥ ಪ್ರಯತ್ನಗಳು ಸಹ ನಡೆದವು..ಆಶ್ಚರ್ಯವೆಂದರೆ ವೀರಶೈವರ ಪವಿತ್ರ ಗ್ರಂಥ ಸಿದ್ಧಾಂತ ಶಿಖಾಮಣಿ ಪ್ರಾರಂಭವಾಗುವುದೇ “ಓಂ ಶ್ರೀಗುರುಬಸವಲಿಂಗಾಯನಮಃ” ಎಂದು..ಅಂದರೆ ಈ ಗ್ರಂಥ ಬಸವಾದಿ ಶರಣರ ನಂತರವೇ ಬರೆದ ಕೃತಿಯಾಗಿದೆ ಹೊರತು ಆದಿ ಅನಾದಿ ಅಪೌರೇಶಯವಲ್ಲ, ಆದರೂ ಅವರು ತಮ್ಮ ಗೊಡ್ಡು ವಾದವನ್ನು ಬಿಡುವುದಿಲ್ಲ..

ಆದರೆ ಸುಳ್ಳು ಸ್ವಲ್ಪ ಕಾಲ ಮೆರೆಯಬಹುದು ಆದರೆ ಸತ್ಯ ಎಂದಿಗೂ ಶಾಶ್ವತ, ಈಗ ಲಿಂಗಾಯತರು ಪ್ರಜ್ಞಾವಂತರಾಗಿದ್ದಾರೆ, ಲಿಂಗಾಯತರು ನೂರಾರು ವರ್ಷಗಳ ಕಾಲ ವಚನ ಸಾಹಿತ್ಯದಿಂದ ವಂಚಿತರಾಗಿದ್ದರು ಆದರೆ ಫ. ಗು. ಹಳಕಟ್ಟಿಯವರಿಂದಾಗಿ ಮತ್ತೊಮ್ಮೆ ಲಿಂಗಾಯತಕ್ಕೆ ಮರುಜನ್ಮ ಸಿಕ್ಕಂತಾಗಿದೆ. ಸತ್ಯ ಸುಳ್ಳುಗಳನ್ನ ಅರಿಯುವಂತಾಗಿದೆ..

ಬಸವಣ್ಣ ಒಂದು ಕಾಲ್ಪನಿಕ ಪಾತ್ರವಲ್ಲ, ಪಂಚಾಚರ್ಯರು ಬಿಂಬಿಸಿದಂತೆ ನಾಲ್ಕು ಕಾಲಿನ ಎತ್ತು ಅಲ್ಲ ಅಥವಾ ಪೌರಾಣಿಕ ದೇವರುಗಳಂತೆ ಅವತಾರ ಎತ್ತಿ ಬಂದವನಲ್ಲ ಬದಲಾಗಿ ನಮ್ಮ ನಿಮ್ಮಂತೆಯೇ ತಾಯಿ ಗರ್ಭದಲ್ಲಿ ಹುಟ್ಟಿ ಇದೆ ನಿಸರ್ಗದ ಮಡಿಲಲ್ಲಿ ಬೆಳೆದು ಸಮಾಜೋ-ಧಾರ್ಮಿಕ-ಆರ್ಥಿಕ ಕ್ರಾಂತಿಯ ಹರಿಕಾರನಾದ..ಬಸವಣ್ಣ ದೇವರಲ್ಲ, ಮನೆಯ ಜಗಲಿಮೇಲೆ ಕುಳಿತು ಪೂಜಿಸಿಕೊಳ್ಳುವನಲ್ಲ, ಉಸಿರುಗಟ್ಟುವ ದೇವರಮನೆಯಲ್ಲಿ ಇರುವವನಲ್ಲ ಬದಲಾಗಿ ಸಮಾಜದ ಅಂಗಳದಲ್ಲಿ ನಿಲ್ಲುವ, ಜಗತ್ತಿಗೆ ಜಂಗಮನಾದವನು ಬಸವಣ್ಣ..ಸ್ತ್ರೀ ಕುಲೋದ್ಧಾರಕ, ವಿಶ್ವಗುರು, ಭಕ್ತಿಭಂಡಾರಿ, ಗುರುವಿಲ್ಲದ ಗುಡ್ಡ, ಮಹಾಮಾನವತಾವಾದಿ ಅಂತೆಲ್ಲ ಬಿರುದುಗಳು ಹೇಗೆ ಬಂದವು? ಯಾಕೆ ಬಂದವು?. ಶಾಸನಗಳಲ್ಲಿ ಬಸವಣ್ಣ, ಜನಪದರಲ್ಲಿ ಬಸವಣ್ಣ ಹೇಗೆ ಬಂದ ಎನ್ನುವುದನ್ನ ತಿಳಿದರೆ ಕಾಲ್ಪನಿಕ ರೇಣುಕರನ್ನ ಬಸವಣ್ಣನ ಬೆನ್ನಿಗೆ ಕಟ್ಟುವುದು ನಿಲ್ಲುತ್ತೆ …

ಶ್ರೀಯುತ ಶಂಕರ ಬಿದರಿಯವರೇ, ತಾವು ವೀರಶೈವ ಮಹಾಸಭೆ ಎಂಬ ಸಂಸ್ಥೆಗೆ ಮುಖ್ಯಸ್ಥರಾದ ಮಾತ್ರಕ್ಕೆ ರೇಣುಕರನ್ನ ಬಸವಣ್ಣನೊಂದಿಗಿಟ್ಟು ಬಸವಜಯಂತಿ ಆಚರಿಸಿ ಎಂದು ಕಟ್ಟಪ್ಪಣೆ ಆದೇಶ ಕೊಡಬೇಡಿ, ಬಸವಾನುಯಾಯಿಗಳು ಯಾವ ದೊಣ್ಣೆ ನಾಯಕನ ಆದೇಶ ಪಾಲಿಸುವುದಿಲ್ಲ ಅಥವಾ ನಿಮ್ಮನ್ನ ನಾಯಕನೆಂದು ಪರಿಗಣಿಸಿಲ್ಲ..

ನಾವು ಹಳ್ಳಿಗಳಲ್ಲಿ ಹಾದಿಬೀದಿಗೂ ಸ್ಥಾಪಿಸಿರುವ ಸಣ್ಣ ಪುಟ್ಟ ದೇವರುಗಳನ್ನು ಸಹ ಗೌರವಿಸುತ್ತೇವೆ, ಅಂತೆಯೇ ಕಾಲ್ಪನಿಕವಾದರೂ ರೇಣುಕರನ್ನ ಗೌರವಿಸುವೆವು ಆದರೆ ಬಸವಣ್ಣನೊಂದಿಗೆ ಹೋಲಿಸುವು ಹೊಂದಿಸುವು ಪ್ರಯತ್ನ ಕೈಬಿಡಿ..

ರೇಣುಕ ಒಂದು ಕಾಲ್ಪನಿಕ ಪಾತ್ರ, ಬಸವಣ್ಣ ಒಬ್ಬ ಐತಿಹಾಸಿಕ ಪುರುಷ..ಎಂದಿನಂತೆ ಬಸವ ಜಯಂತಿ ಜಗತ್ತಿನಾದ್ಯಂತ ಅದ್ದೂರಿಯಾಗಿ ಆಚರಿಸುವೆವು ಮತ್ತು ನಿಮ್ಮನ್ನು ಸಹ ಆಮಂತ್ರಿಸುವೆವು, ನೀವು ನಮ್ಮವರು, ನಿಮ್ಮವರನ್ನು ಕರೆತಂದು ಶರಣೆಂದು ಹಸನಾಗಿರಿ ಎಂದು ಆಶಿಸುವೆ..
(ಕನ್ನಡಿಗ ಪ್ರಕಾಶ್ ಫೇಸ್ಬುಕ್ ಕೃಪೆ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments