ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಗ್ರಾಮದ ನಿವೃತ್ತ ಶಿಕ್ಷಕರಾದ ದಿವಂಗತ ಶರಣಪ್ಪ ಬಸಪ್ಪ ತೆಗ್ಗಿನಕೇರಿ ಇವರ ಧರ್ಮಪತ್ನಿ ಶ್ರೀಮತಿ ಶಾಂತಮ್ಮ ಶರಣಪ್ಪ ತೆಗ್ಗಿನಕೇರಿ ಇವರು ದಿನಾಂಕ:25-04-2025ರಂದು ನಿಧನರಾಗಿದ್ದು ಮೃತರು ನಾಲ್ಕುಜನ ಪುತ್ರರು ಒಬ್ಬ ಪುತ್ರಿ ಹಾಗೂ ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿ ಇಹಲೋಕ ತ್ಯಜಿಸಿದ್ದಾರೆ.ಮೃತರ ಅಂತ್ಯ ಕ್ರಿಯೆಯು ದಿನಾಂಕ:26-04-2025,ರಂದು ಮದ್ಯಾಹ್ನ 12-00ಗಂಟೆಗೆ ಸ್ವಗ್ರಾಮದ ರುದ್ರಭೂಮಿಯಲ್ಲಿ ನೆರವೇರಲಿದೆ.
ಮೃತರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲೆಂದು ಪ್ರಾರ್ಥಿಸುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ.