Thursday, August 21, 2025
Homeದೇಶಯುದ್ಧ ಯಾತಕ್ಕಾಗಿ ಯಾರಿಗಾಗಿ ಅನಿವಾರ್ಯ?

ಯುದ್ಧ ಯಾತಕ್ಕಾಗಿ ಯಾರಿಗಾಗಿ ಅನಿವಾರ್ಯ?

ಇಂಡಿಯಾ ಪಾಕಿಸ್ತಾನದ ಮಧ್ಯ ಉದ್ಭವಿಸಿರುವ ಯುದ್ಧದ ಕಾರ್ಮೋಡದ ಕುರಿತು ಅನೇಕ ವ್ಯಾಖ್ಯಾನವನ್ನು ಮಾಡುತ್ತಿರುವವರು ಬಹುತೇಕ ಯಾರೂ ತಮ್ಮ ಮನೆಯ ಮಕ್ಕಳನ್ನು ಸೈನ್ಯಕ್ಕೆ ಸೇರಿಸಿರಲಿಕ್ಕಿಲ್ಲಾ ಎಂಬಭಾವನೆ ನನ್ನದು.
ಕಾರಣ ಇಷ್ಟೇ ನಾನು ಈ ಮೂರ್ನಾಲ್ಕು ದಿನಗಳ ಹಿಂದೆ ನಾನು ನನ್ನ ಹುಟ್ಟೂರು ಹೊನಗನಹಳ್ಳಿಗೆ ಹೋಗಿದ್ದೆ.ನಮ್ಮ ಹಳ್ಳಿಯಲ್ಲಿ ನಮ್ಮ ಪಕ್ಕದ ಮನೆಯವರು ನಮಗೆ ಬಹಳ ಆಪ್ತ ಬಂಧುಗಳು ಅವರ ಕುಟುಂಬದ ಜೊತೆ ನಮ್ಮ ಕುಟುಂಬವು ಹಿರಿಯರಿಂದ ಹಿಡಿದು ಇಲ್ಲಿಯವರೆಗೆ ಜಾತಿಬೇಧವಿಲ್ಲದೆ ಅಣ್ಣ ತಮ್ಮ ಅಕ್ಕ ತಂಗಿ ಮಾವ ಅಳಿಯ ಅತ್ತೆ ಸೊಸೆಯರೆಂದೇ ಪರಸ್ಪರ ಸಂಭಂದ ಬೆಸೆದ ಶಬ್ದಗಳನ್ನು ಬಳಸಿಯೇ ಮಾತಾಡ್ತಾ ಇದ್ದೇವೆ.ಅಷ್ಟೆ ಅಲ್ಲಾ ಊಟ ತಿನಿಸು ಗಳನ್ನೂ ಸಹ ಅವರಮನೆಗಳಲ್ಲಿ ನಾವು ನಮ್ಮ ಮನೆಗಳಲ್ಲಿ (ಅವರು ಸ್ವಾಮಿಗಳು ನಾವು ಕುರುಬರು)ಅವರು ಯಾವುದೇ ಬೇಧಭಾವಗಳಿಲ್ಲದೆ ಇಂದಿಗೂ ಮಾಡ್ತಾ ಒಬ್ಬರನ್ನೊಬ್ಬರು ಗೌರವಿಸುತ್ತಾ ಬಂದಿದ್ದೇವೆ.ಪ್ರತಿಸಲ ನಾವು ನಮ್ಮ ಹಳ್ಳಿಗೆ ಹೋಗಿ ಬರುವಷ್ಟರಲ್ಲಿ ಒಮ್ಮೆಯಾದರೂ ಅವರಮನೆಯಲ್ಲಿ ಊಟ ಅಥವಾ ತಿನಿಸು ತಿನ್ನದೆ ನಾವೆಂದೂ ಹಾಗೇ ಹೋಗಿಲ್ಲಾ.
ಅದೇ ರೀತಿ 05-05-2025ರಂದು ಆಗ್ರಾಮದಲ್ಲಿ ನಮ್ಮ ಸಂಭಂದಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ವಿ.ಮದುವೆಯ ಮಾರನೆಯದಿನ ಎಂದಿನಂತೆ ನಮ್ಮಪಕ್ಕದ ಮನೆಯಲ್ಲಿ ನಮಗೆ ಊಟದ ಕರೆಬಂತು ನಾನು ಮತ್ತು ನಮ್ಮ ಪತ್ನಿ ಹೋಗಿ ಕುಶಲೋಪಚರಿಮಾತಾಡ್ತಾ ಆ ತಾಯಿ ನಮಗೆ ಬಿಸಿಬಿಸಿ ಜೋಳದ ರೊಟ್ಟಿ ಮಾಡಿ ಊಟಕ್ಕೆ ಬಡಿಸಿದರು.ನೀವೂ ಊಟಮಾಡ್ರಿ ಎಂದು ಹೇಳಿದೆ ಆದರೆ ಅವರು ನಂತರ ಊಟಮಾಡುವುದಾಗಿ ಹೇಳಿ ನಮಗೆ ಬಡಿಸಿದರು.ನಮ್ಮ ಊಟವಾಯಿತು ಅವರು ನಮ್ಮ ಜೊತೆಗೆ ಮಾತಾಡ್ತಾ ಹಾಗೇ ಕುಳಿತರು.ಆದರೆ ಪ್ರತಿಸಲದಂತೆ ಅವರ ನಗು ಹಾಸ್ಯ ಮಾಯವಾಗಿ ಮುಖದ ಭಾವನೆ ಆತಂಕದ ಛಾಯೆ ಎದ್ದು ತೋರಿಸುತಿತ್ತುಮನದಲ್ಲಿ ಸಾಕಷ್ಟು ದುಗುಡು ಆತಂಕ ಭಯ ತುಂಬಿಕೊಂಡು ಮನದಲ್ಲಿ ಮನಿಗೆ ಆಶಿರ್ವಾದ ಬಯಸುತಿತ್ತು.
ಮಾತುಮಾತಾಡುತ್ತಾ ಆ ತಾಯಿ ಹಾಗೇ ಕುಳಿತರು ಊಟ ತಿನಿಸು ಚಹಾ ಯಾವುದರಕಡೆಗೂ ಇಷ್ಟವಿಲ್ಲದೆ ಮೇಲ್ನೋಟಕ್ಕೆ ನಮ್ಮೊಂದಿ ಮಾತಾಡ್ತಿದ್ದರು.
ಆದರೆ ಆತಾಯಿಯ ಹೃದಯ ಕಾಶ್ಮೀರ ದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ವೀರಯೋಧ ತನ್ನ ಮಗನ ಮತ್ತು ತನ್ನ ಮಗನಂತೇ ಇತರೆ ಸೈನಿಕರ ಯೋಗ ಕ್ಷೇಮದ ಹಾರೈಕೆಯಲ್ಲಿತ್ತು.ಕಾಶ್ಮೀರದಲ್ಲಿ ಸೇವೆಸಲ್ಲಿಸುತ್ತಿರುವ ಆ ವೀರಯೋಧನ ತಂದೆತಾಯಿಯರು ಈ ಭಾರತ ಪಾಕಿಸ್ತಾನ ನಡುವೆ ಉದ್ಭವಿಸಿರುವ ಯುದ್ಧ ವಾತಾವರಣ ಅದೆಷ್ಟು ವೀರ ಯೋಧರ ಹೆತ್ತ ಕರುಳುಗಳು ತಂದೆ ತಾಯಿ,ಪತ್ನಿ ಮಕ್ಕಳು ಹಾಗೂ ಹಿರಿಯಜೀವಗಳು ಹಗಲುರಾತ್ರಿ ಊಟ ನಿದ್ರೆ ಲವಲವಿಕೆ ಕಳೆದುಕೊಂಡು ದೇಶ ರಕ್ಷಕರ ಪರ ಪ್ರಾರ್ಥನೆ ಮಾಡುತ್ತಿರುವರೋ ಅವರಸಂಕಟ,ದುಗುಡು,ಅದೆಷ್ಟೋ ನಾ ಕಾಣೆ.
ಅಲ್ಲಿ ದೇಶಕ್ಕಾಗಿ ಹಗಲು ಇರುಳು ಊಟ ನಿದ್ರೆ ಇಲ್ಲದೆ ಹೋರಾಡುತ್ತಿರುವ ವೀರ ಯೋಧರು.ಇಲ್ಲಿ ವೀರ ಯೋಧರಿಗಾಗಿ ಹಗಲಿರುಳು ಊಟ ನಿದ್ರೆ ಇಲ್ಲದೆ ಅವರಿಗಾಗಿ ಪ್ರಾರ್ಥಿಸುತ್ತಿರುವ ತಂದೆ ತಾಯಿ ಪತ್ನಿ ಮಕ್ಕಳು ಅಪಾರ ಬಂಧುಬಳಗ ಹಿತೈಸಿಗಳು ಇದನ್ನೆಲ್ಲಾ ಅರ್ಥೈಸಿಕೊಂಡರೆ ಯುದ್ಧ ಯಾತಕ್ಕಾಗಿ ಯಾರಿಗಾಗಿ ಅನಿವಾರ್ಯ???ಅಂತರ ರಾಷ್ಟ್ರೀಯ ಮಟ್ಟದಲ್ಲಿ ಒಡಂಬಡಿಕೆ,ರಾಜತಾಂತ್ರಿಕತೆ,ಸಭೆಸಮಾರಂಭಗಳು,ಶೃಂಗಸಭೆಗಳು ಪರಸ್ಪರ ಚಿಂತನಮಂಥನಗಳು ಪ್ರವಾಸಗಳು ಇಂಥ ಸನ್ನಿವೇಶ ಬಾರದಂತೆ ನೋಡಿಕೊಳ್ಳುವುದಕ್ಕಾ ಅಥವಾ ಮೋಜುಮಸ್ತಿಗಾಗಿ ದುಂದುವೆಚ್ಚಮಾಡಿ ದೇಶದಜನರ ತಲೆಯಮೇಲೆ ಹೇರುವುದಕ್ಕಾ ಎಂದು ಯೋಚಿಸಬೇಕಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments