ದಾವಣಗೆರೆ ಮೇ. 12:ವಿಶ್ವ ಮಾನವ ಕುಲಕ್ಕೆ ಸತ್ಯದ ವಿಚಾರ ಬೋಧಿಸಿದ ವೈಜ್ಞಾನಿಕವಾದ ಧರ್ಮದ ಕ್ರಾಂತಿಯ ಜಗತ್ತಿಗೆ ಸನ್ಮಾರ್ಗವನ್ನು ತೋರಿದ ಮಹಾ ಕರುಣಾಳು ಭಗವಾನ್ ಬುದ್ಧರು. ಎಂದು ಬುದ್ಧ ವಿಚಾರ ಧಾರೆ ಸಂಘದ ಕತ್ತಲಗೆರೆ ತಿಪ್ಪಣ್ಣ ತಿಳಿಸಿದರು.
ದಾವಣಗೆರೆಯಲ್ಲಿ ಬುದ್ಧ ಪೂರ್ಣಿಮಾ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮ ದಲ್ಲಿ ಅವರ ಬುದ್ಧನ ಕುರಿತು ಆತನ ಸಂದೇಶ ಕುರಿತು ಮಾತನಾಡಿ ಸನಾತನ ಕಾಲದಿಂದ ಮೂಲಭೂತ ವಾದಿಗಳ ಕಾಲ್ತುಳಿತಕ್ಕೆ ಸಿಕ್ಕು ನಲುಗಿದ ದೀನ ದಲಿತರಿಗೆ ಸನ್ಮಾರ್ಗ ತೋರಿದರು.
ಬುದ್ಧನ ವಿಚಾರಗಳನ್ನು ಶೀಲ, ಸಮಾಧಿ, ಪ್ರಜ್ಞೆಯನ್ನು ಇಂದಿನ ಜನರು ಅನುಸರಿಸಿದರೆ ರಾಷ್ಟ್ರದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಗೌತಮ ಬುದ್ಧರು ಭಾರತಕ್ಕಷ್ಟೇ ಅಲ್ಲದೆ ಜಗತ್ತಿಗೆ ದಾರಿ ತೋರಿದ ಶ್ರೇಷ್ಠ ದಾರ್ಶಣಿಕ. ಶಾಂತಿ, ಅಹಿಂಸೆಯ ದೂತ ಗೌತಮ ಬುದ್ಧ. ಜಗತ್ತಿಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಮಾರ್ಗದರ್ಶನ ನೀಡಿದ ಮಹಾನ್ ಚೇತನ. ಆಸೆಯೇ ದುಃಖಕ್ಕೆ ಮೂಲ ಎಂದು ತಿಳಿಸಿದ ದಾರ್ಶನಿಕ. ದಾರ್ಶನಿಕರ ಬದುಕು ಮತ್ತು ಬರಹ ಈಗ ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿದೆ
. ಬುದ್ಧನ ಮಾನವೀಯತೆ, ಬಸವಣ್ಣ ನವರ ಸಮಾನತೆ, ಅಂಬೇಡ್ಕರ್ ರವರ ವೈಚಾರಿಕತೆ ಇಂದಿಗೂ ಪ್ರಶಸ್ತವಾಗಿದ್ದು ಪ್ರತಿ ಅಲಕ್ಷಿತ ಸಮುದಾಯಗಳಿಗೆ ಸಮಾನತೆಯನ್ನು ಕಲ್ಪಿಸಿಕೊಟ್ಟಾಗ ಮಾತ್ರ ಶೋಷಿತ ಸಮಾಜಗಳ ಉದ್ಧಾರ ಸಾಧ್ಯ. ಎಂದು
ತಿಪ್ಪಣ್ಣ , ಕತ್ತಲಗೆರೆ. ಆಶಯ ವ್ಯಕ್ತ ಪಡಿಸಿದರು.
ಬುದ್ಧ ಪೂರ್ಣಿಮಾ ಈ ಕಾರ್ಯಕ್ರಮ ದಲ್ಲಿ ಹಲವಾರು
ಬುದ್ಧ ಅನುಯಾಯಿ ಗಳು ಪಾಲ್ಗೊಂಡಿದ್ದರು