Thursday, August 21, 2025
Homeರಾಜಕೀಯಸಿದ್ದರಾಮಯ್ಯನವರ ಸರ್ಕಾರವು ಅಚ್ಚುಕಟ್ಟಾಗಿ ರಾಜ್ಯ ಕಾರ್ಯಭಾರ ಮಾಡುತ್ತಿರುವಾಗ ಕಪ್ಪು ಚುಕ್ಕೆ:ಬೇಡ ಜಂಗಮ ಸಮಾಜದ ಸರ್ವ ಸಂಘಟನೆಗಳ...

ಸಿದ್ದರಾಮಯ್ಯನವರ ಸರ್ಕಾರವು ಅಚ್ಚುಕಟ್ಟಾಗಿ ರಾಜ್ಯ ಕಾರ್ಯಭಾರ ಮಾಡುತ್ತಿರುವಾಗ ಕಪ್ಪು ಚುಕ್ಕೆ:ಬೇಡ ಜಂಗಮ ಸಮಾಜದ ಸರ್ವ ಸಂಘಟನೆಗಳ ನಿಯೋಗದ ಖಂಡನೆ,

ಬೆಂಗಳೂರು .ಮೇ .21.*ಬೇಡ ಜಂಗಮ ಸಮಾಜದ ಸರ್ವ ಸಂಘಟನೆಗಳ ನಿಯೋಗವು ,ಇಂದು ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಜಾತಿ ಜನಗಣತಿಯ ಮುಖ್ಯಸ್ಥರಾದ ಶ್ರೀ ನಾಗಮೋಹನ್ ದಾಸ್ ರವರಿಗೆ ಬೇಡ ಜಂಗಮ ಸಮಾಜದ ಸರ್ಕಾರದ ಸುತ್ತೋಲೆಗಳು, ಆದೇಶಗಳು ,ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶಗಳು, ರಾಷ್ಟ್ರಪತಿ ಗಳ ಆದೇಶ, ಹಾಗೂ ಇತರೆ ಎಲ್ಲಾ ಮಹತ್ತರವಾದ ದಾಖಲಾತಿಗಳನ್ನು ನೀಡಿ, ರಾಜಕೀಯ ದುರುದ್ದೇಶದಿಂದ ಹೊಸಪೇಟೆಯ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ದುರುದ್ದೇಶಪೂರ್ವಕವಾಗಿ ಇಲ್ಲಸಲ್ಲದ ಆರೋಪವನ್ನು ಬೇಡ ಜಂಗಮ ಸಮಾಜದ ಮೇಲೆ ಯಾವುದೇ ಆಧಾರ ರಹಿತವಾದ ಹೇಳಿಕೆಯನ್ನು ತೀರ್ವವಾಗಿ ಖಂಡಿಸಿ, ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಬಹುದೊಡ್ಡ ರೀತಿಯಲ್ಲಿ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನಿಯೋಗವು ವ್ಯಕ್ತಪಡಿಸಿದೆ .ಯಾವುದೇ ಕಾನೂನಾತ್ಮಕ ಆಧಾರವಿಲ್ಲದೆ, ಇಲ್ಲಸಲ್ಲದ ಆರೋಪಗಳನ್ನು ಬೇಡ ಜಂಗಮ ಸಮಾಜದ ಮೇಲೆ ಸಮಾವೇಶದಲ್ಲಿಯೇ ವ್ಯಕ್ತಪಡಿಸಿದ್ದು ಬಹುದೊಡ್ಡ ಅಪರಾಧವಾಗಿದೆ . ಇದರಿಂದಾಗಿ ಪಕ್ಷದ ಯಶಸ್ಸಿಗೂ ಕೂಡ ಬಹುದೊಡ್ಡ ಒಡತವನ್ನೇ ಕೊಡುತ್ತದೆ .ಸಿದ್ದರಾಮಯ್ಯನವರ ಸರ್ಕಾರವು ತುಂಬಾ ಅಚ್ಚುಕಟ್ಟಾಗಿ ರಾಜ್ಯದಲ್ಲಿ ಕಾರ್ಯಭಾರ ಮಾಡುತ್ತಿರುವಾಗ, ಕಪ್ಪು ಚುಕ್ಕೆಯಂತೆ ಮಲ್ಲಿಕಾರ್ಜುನ ಖರ್ಗೆಯವರ ಈ ಹೇಳಿಕೆಯು ಮುಂದಿನ ದಿನಗಳಲ್ಲಿ ಪಕ್ಷಕ್ಕೂ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೂ ತಮ್ಮ ರಾಜಕೀಯ ಇತಿಹಾಸವೇ ಅವನತಿಯತ್ತ ಸಾಗುವುದರಲ್ಲಿ ಅನುಮಾನವೇ ಇಲ್ಲ. ಇವರಿಂದ ಇಡೀ ಕರ್ನಾಟಕದ ಎಲ್ಲಾ ಬೇಡ ಜಂಗಮ ಬಂಧುಗಳ ವೈರತ್ವವನ್ನು ಮಲ್ಲಿಕಾರ್ಜುನ ಖರ್ಗೆಯವರು ತಂದುಕೊಂಡಿದ್ದಾರೆ . ಅವರು ಹೇಳಿದ ಹೇಳಿಕೆಗಳಿಗೆ ಈಗಲೂ ಬದ್ಧವಾಗಿದ್ದರೆ , ಸರ್ಕಾರದ ಆದೇಶಗಳು, ಸುತ್ತೋಲೆಗಳು, ಹೈಕೋರ್ಟ್ ಸುಪ್ರೀಂಕೋರ್ಟಿನ ಆದೇಶಗಳನ್ನು ತೆಗೆದುಕೊಂಡು ಬನ್ನಿ .ನೀವೇ ಒಂದು ಸ್ಥಳ,ಹಾಗೂ ಅವಧಿ ನಿಗದಿಪಡಿಸಿ ನಾವು ಸಹ ನಮ್ಮಲ್ಲಿರುವ ಬೇಡ ಜಂಗಮ ಸಮಾಜಕ್ಕೆ ಸಂಬಂಧಿಸಿದ ಎಲ್ಲಾ ಸರ್ಕಾರದ ಆದೇಶಗಳು ಸುತ್ತೋ ಲೆಗಳು ಹೈಕೋರ್ಟ್ ,ಸುಪ್ರೀಂ ಕೋರ್ಟ್ ಆದೇಶ ಎಲ್ಲವನ್ನು ಒಳಗೊಂಡು ಕಾನೂನು ತಜ್ಞರನ್ನು ಒಳಗೊಂಡ ಸಮಿತಿಯು ಎದುರಿಗೆ ಬಂದು ನೀವು ಹೇಳಿದ ಹೇಳಿಕೆಗೆ ಆಧಾರಯುತ ದಾಖಲೆಗಳನ್ನು ನೀಡಿ ಸಾಬೀತುಪಡಿಸಿ .ನಾವು ಸಹ ನಮ್ಮಲ್ಲಿರುವ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಬಂದು ಸಾಬೀತು ಪಡಿಸುತ್ತೇವೆ, ಇದು ನಮ್ಮ ಸವಾಲಾಗಿದೆ.ನಿಮ್ಮ ಮಾತಿಗೆ ನೀವು ಬದ್ಧರಾಗಿದ್ದರೆ ನಮ್ಮ ಪಂಥ ಸವಾಲನ್ನು ಸ್ವೀಕರಿಸಿ ದಿನಾಂಕ ಸಮಯವನ್ನು ನಿಗದಿಪಡಿಸಿ ಆಗಮಿಸಿ ಸಾಬೀತುಪಡಿಸಿ .ಅದು ಬಿಟ್ಟು ಸಮಾಜಕವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ಬೇಡ ಜಂಗಮ ಸಮಾಜವು ತೀರ್ವವಾಗಿ ಖಂಡಿಸಿದೆ .ಈ ಕೆಳಗೆ ನಮ್ಮ ಸಮಾಜದ ಆಧಾರಯುತ ದಾಖಲೆಗಳ ಕೆಲವು ಗಳನ್ನು ಮಾತ್ರ ತಮ್ಮ ಗಮನಕ್ಕೆ ತರುತ್ತಿದ್ದೇವೆ . ಈ ದಾಖಲೆಗಳ ದಾಖಲೆಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ನಿಮ್ಮ ನಿರ್ಧಾರ ಮಾಡಲು ಕೋರುತ್ತೇವೆ.
ನಿನ್ನೆ ವಿಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ವೀರಶೈವ ಲಿಂಗಾಯತ ಪಂತದಲ್ಲಿ ಬರುವ ಜಂಗಮರು ಬೇಡ ಜಂಗಮರುರಲ್ಲ ಎಂದು ಸುಳ್ಳು ಹೇಳಿ ದಲಿತರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಈ ವಿಷಯದ ಕುರಿತು ಸರ್ಕಾರ ಗಂಭೀರ ಚಿಂತನೆ ಮಾಡಬೇಕೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರುವದನ್ನು ಖಂಡಿಸಿ ಈ ಪತ್ರಕಾ ಸಭೆಯನ್ನು ಇಂದು ಕರೆಯಲಾಗಿದೆ.
ಈ ಸಂಧರ್ಭದಲ್ಲಿ ಪತ್ರಿಕೆಗೆ ಸವಿಸ್ತಾರವಾಗಿ ದಾಖಲೆ ಸಮೇತ ವೀರಶೈವ ಲಿಂಗಾಯತ ಪಂತದಲ್ಲಿ ಬರುವ ಜಂಗಮರು ಬೇಡ ಜಂಗಮರು ಎನ್ನುವುದನ್ನು ನಾವು ಹೇಳಿಕೆ ನೀಡುತ್ತೇವೆ.
ಆದರೆ ಕೇಂದ್ರ ಸರಕಾರದ ರಾಜ್ಯಸಭೆಯ ಪ್ರತಿ ಪಕ್ಷದ ನಾಯಕರಾಗಿ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ವೀರಶೈವ ಲಿಂಗಾಯತ ಪಂತದಲ್ಲಿ ಬರುವ ಜಂಗಮರು ಬೇಡ ಜಂಗಮರು ಎಂದು ಸುಳ್ಳು ಹೇಳಿ ದಲಿತರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಜನರಲ್ಲಿ ಸುಳ್ಳು ಮಾಹಿತಿಯನ್ನು ನೀಡಿ ಒಂದು ಜನಾಂಗಕ್ಕೆ ನೋವುಂಟು ಮಾಡಿರುವುದು ಖಂಡನೀಯ.
ಒಳ ಮೀಸಲಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯಲ್ಲಿ 101ಜಾತಿಗಳಿಗೂ ಅವಕಾಶವಿದೆ, ಅದರಲ್ಲಿ ಬೇಡಜಂಗಮವು ಒಂದು, ವೀರಶೈವ ಲಿಂಗಾಯತ ಪಂತದಲ್ಲಿ ಬರುವ ಜಂಗಮರು ಬೇಡ ಜಂಗಮರು ಬೇಡಜಂಗಮರೆದು ಸಮೀಕ್ಷೆಯಲ್ಲಿ ಬರೆಸುವದನ್ನು ತಡೆಯಬೇಕು ಎಂದು ಕಾನೂನು ಬದ್ಧ /ಸಂವಿಧಾನಿಕ ಹಕ್ಕನ್ನು ವಿರೋದಿಸುವದು ಸರಿಯಾದುದಲ್ಲ.
ಬೇಡಜಂಗಮರು ಎಂದರೆ ಯಾರು? ಅವರ ಗುಣಲಕ್ಷಣಗಳೇನು? ಮತ್ತು ಅವರು ಎಲ್ಲಿ ಎಲ್ಲಿ ವಾಸವಾಗಿದ್ದರೆ ಎಂಬುದರ ಬಗ್ಗೆ ಸರ್ಕಾರದಿಂದ ಸಮೀಕ್ಷೆಗಳು ನೆಡದು ವರದಿ ಮಾಡಿದ್ದು ಸದರಿ ವರದಿಗಳ ಆಧಾರದ ಮೇಲೆ ಬೇಡಜಂಗಮರು ಗುರುತಿಸಿರುವುದನ್ನು ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಬೀದರ, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಅಂದಿನ ಹೈದ್ರಾಬಾದ ರಾಜ್ಯದಲ್ಲಿದ್ದವು ಹೈದ್ರಾಬಾದ ರಾಜ್ಯದಲ್ಲಿ Census of India 1901 Volume XXII-A Hyderabad Part-II ದಾಖಲೆಯ ಪ್ರಕಾರ ಅಂದೇ ಇಡೀ ಜಂಗಮರು ಕೆಳದರ್ಜೆ ಧಾರ್ಮಿಕ ಬಿಕ್ಷುಕರ(Inferior religious mendicants ) ಪಟ್ಟಿಯಲ್ಲಿದ್ದು ಸರಕಾರದ ಸವಲತ್ತು ಅನುವು ಮಾಡಿಕೊಟ್ಟಿತ್ತು.
Census of India 1921 Hyderabad State ದಾಖಲೆಯ ಪ್ರಕಾರವಾಗಿ ನಿಜಾಮರ ಆಳ್ವಿಕೆ ಕಾಲದಲ್ಲಿ ಹೈದ್ರಾಬಾದ ರಾಜ್ಯದಲ್ಲಿ ಇಡೀ ಜಂಗಮರನ್ನು ಅಂದು ಜಾರಿಯಲ್ಲಿದ್ದ ‘ಡಿಪ್ರೆಸ್ಟ್ ಕ್ಲಾಸ’ (Depressed Class) ಪಟ್ಟಿಯಲ್ಲಿ ಇನ್ನಿತರ ಕೆಳದರ್ಜೆ ಜಾತಿಗಳೊಡನೆ ಸೇರಿಸಿ ಸರಕಾರದ ಸವಲತ್ತು ಸೌಲಭ್ಯ ನೀಡಲಾಗಿತ್ತು.
1935 ರಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ The Government of India ACT 1935ನ್ನು ಹೊರಡಿಸಿ ಪರಿಶಿಷ್ಟ ಜಾತಿಯ ವಿವರಣೆಯನ್ನು (Definition) ದಾಖಲೆಯಲ್ಲಿ ನೀಡಲಾಗಿದೆ.
ಮುಂದೆ ಹೈದ್ರಾಬಾದ ಹರಿಜನ ಟೆಂಪಲ ಎಂಟ್ರಿ ರೆಗ್ಯೂಲೇಷನ್ 1358 Fasli (L.E1949)ರ ದಾಖಲೆಯ ಶೆಡ್ಯೂಲ್ನಲ್ಲಿ ಇತರ ಜಾತಿಗಳೊಡನೆ ಜಂಗಮ ಜಾತಿಯನ್ನು ಸೇರಿಸಿದ್ದಾರೆ.
1950 ರಲ್ಲಿ ರಚಿಸಲಾದ ಭಾರತ ಸಂವಿಧಾನ ಅಧಿನಿಯಮ 341 ರ ಪ್ರಕಾರ ಗೌರವಾನ್ವಿತ ರಾಷ್ಟ್ರಪತಿಯವರು ರಾಜ್ಯಪಾಲ/ರಾಜ್ಯ ಪ್ರಮುಖರುಗಳೊಡನೆ ಚರ್ಚಿಸಿ The Government of India ACT 1935ರಲ್ಲಿ ತಿಳಿಸಲಾಗಿರುವ ಪರಿಶಿಷ್ಟ ಜಾತಿ ವಿವರಣೆಯಲ್ಲಿನ ನಿಯಮಕ್ಕೆ ಬದ್ಧವಾಗಿ 1921 ರಲ್ಲಿ ಜಾರಿಯಲ್ಲಿದ್ದ ‘ಡಿಪ್ರೆಸ್ಟ್ ಕ್ಲಾಸ’ (Depressed Class) ಪಟ್ಟಿಯಲ್ಲಿದ್ದ ಇಡೀ ಜಂಗಮ ಸಮುದಾಯದ ಬದಲಾಗಿ ಜಂಗಮ ಸಮುದಾಯದ ವಂಶಪಾರAಪರವಾಗಿ ಬಂದ ಧಾರ್ಮಿಕ ಬಿಕ್ಷಾವೃತ್ತಿಯಾದ ಕುಲಕಸುಬಿನ ಆಧಾರದ ಅಡಿಯಲ್ಲಿ ಗುರುತಿಸಲ್ಪಡುವ ಬೇಡಜಂಗಮರನ್ನು ಅಂದಿನ ಹೈದ್ರಾಬಾದ ರಾಜ್ಯದ ಪಟ್ಟಿಯನ್ನು ಪರಿಗಣಿಸಿ The Constitution (Schedule Castes) order 1950ನ್ನು ಹೊರಡಿಸಿರುತ್ತಾರೆ.
ಭಾಷಾವಾರು ರಾಜ್ಯಗಳನ್ನು ಪುನರ ವಿಂಗಡಿಸಿದಾಗ ಈ ಹಿಂದೆ ಹೈದ್ರಾಬಾದ ರಾಜ್ಯದಲ್ಲಿನ ಬೀದರ, ಗುಲಬರ್ಗಾ, ರಾಯಚೂರ ಜಿಲ್ಲೆಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ ವರ್ಗಾಯಿಸಿ ಈ ಮೂರು ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಜಂಗಮರು ಎಂದು ಕರೆಯುವ ಬೇಡ ಜಂಗಮರುಗಳಿಗೆ The Schedule Castes and Schedule Tribes list (modification) Order 1956 ಹೊರಡಿಸಲಾಗಿದೆ.
ಮುಂದುವರೆದು Census of India 1971 series-1 India, The Schedule Castes and Schedule Tribes orders ಪಟ್ಟಿಯಲ್ಲಿ ಬೀದರ, ಗುಲಬರ್ಗಾ ಮತ್ತು ರಾಯಚೂರ ಜಿಲ್ಲೆಗಳಲ್ಲಿ ಒಟ್ಟು ಜನಸಂಖ್ಯೆ 13676 ಬೇಡ (ಬುಡಗ) ಜಂಗಮ ಸಮುದಾಯದವರು ವಾಸಿಸುತ್ತಿರುವ ಬಗ್ಗೆ ದಾಖಲೆ ಇದೆ.
Karnataka Backward Classes Commission Report Volume-II-1975 6 ವರದಿಯಲ್ಲಿ 1972 ರಲ್ಲಿ ಬೀದರ, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳಲ್ಲಿ ವಾಸಿಸಿರುವ ಬೇಡ (ಬುಡುಗ) ಜಂಗಮ ಪರಿಶಿಷ್ಟ ಜಾತಿಯ ಒಟ್ಟು ಜನ ಸಂಖ್ಯೆ 6667 ವಿದ್ದುದರ ಹೇಳುತ್ತದೆ.
ಬೀದರ, ಗುಲಬರ್ಗಾ ಮತ್ತು ರಾಯಚೂರ ಈ ಮೂರು ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ವಿಧಿಸಲಾಗಿದ್ದ ಜಿಲ್ಲಾ The Schedule Castes and Schedule Tribes orders (Amendment) Act 1976 1976 ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಿದರ The Gazettee of India Part-II ಭಾಗ- VII ರ ಕರ್ನಾಟಕ ರಾಜ್ಯದ ಪಟ್ಟಿಯಲ್ಲಿ ಬೇಡ ಜಂಗಮ, ಬುಡಗ ಜಂಗಮ ಕ್ರಮ ಸಂಖ್ಯೆ 19 ರಲ್ಲಿ ಇರುತ್ತದೆ.
ಕರ್ನಾಟಕ ರಾಜ್ಯ ಸರಕಾರ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶನಾಲಯದ ಮೂಲಕ ಮುಖ್ಯ ಸಂಪಾದಕರು ಕರ್ನಾಟಕ ಗೆಜೆಟಿಯರ ರವರನ್ನು ಬೀದರ, ಗುಲಬರ್ಗಾ ಮತ್ತು ರಾಯಚೂರ ಜಿಲ್ಲೆಗಳಲ್ಲಿ ಬೇಡ ಜಂಗಮ, ಬುಡುಗೆ ಜಂಗಮ ಜಾತಿಯ ಸಮೀಕ್ಷೆ ನಡೆಸಿ ವಿವರವಾದ ಮಾಹಿತಿಯನ್ನು 1988 ರಲ್ಲಿ ಕೋರಿದ್ದರ ಪ್ರಕಾರ ರಾಜ್ಯ ಸರಕಾರದ ಅಂಗ ಸಂಸ್ಥೆಯಾದ ಕರ್ನಾಟಕ ಗೆಜೆಟಿಯರ ರವರ ಅಧಿಕಾರಿಗಳರವರಿಂದ ಬೇಡ ಜಂಗಮ ಜಾತಿಯ ಅಧ್ಯಯನ ವರದಿಯನ್ನು ದಿನಾಂಕ:28-08-1989 ರಂದು ಸರಕಾರಕ್ಕೆ ಸಲ್ಲಿಸಿರುತ್ತಾರೆ. ಸದರಿ ವರದಿಯಲ್ಲಿ ಊರಿನಲ್ಲಿ ಜಂಗಮ, ಅಯ್ಯನವರು, ಸ್ವಾಮಿಯವರು, ಎಂದು ಕರೆಯಲ್ಪಡುವವರನ್ನು ಬೇಡಜಂಗಮರೆAದು ಗುರುತಿಸುವವುದಲ್ಲದೆ ಅವರ ಗುಣಲಕ್ಷಣಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದು ಸದರಿ ವರದಿಯನ್ನು ಸಮಾಜ ಕಲ್ಯಾಣ ಇಲಾಖೆ ನಿರ್ದೇಶನಾಲಯವು ಸಂಬAಧಪಟ್ಟ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದು, ಸದರಿ ವರದಿಯಲ್ಲಿ ಬೇಡ ಜಂಗಮರ ಬಗ್ಗೆ ಒದಗಿಸಲಾಗಿರುವ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
ಅಲ್ಲದೆ ಈ ಮೇಲಿನ ಎಲ್ಲಾ ದಾಖಲಗಳನ್ನು ಅನುಸರಿಸಿ ಸಮಾಜ ಕಲ್ಯಾಣ ಇಲಾಖೆಯು ಈ ಕೆಳಗಿನ ಸುತ್ತೋಲೆಗಳನ್ನು ಹೋರಡಿಸಿದ್ದು ಇದೆ.

  1. ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ:ಸ.ಕ.ನಿ.ಉ ಮತ್ತು ತ-2 ಸಿ.ಆರ್. 107/93-94 ದಿನಾಂಕ:29-11-1993.
  2. ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ: SWಐ 328 Sಂಆ 95 ದಿನಾಂಕ 05.10.1995.
  3. ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ:ಸ.ಕ.ನಿ.ಉ ಮತ್ತು ತ-2 ಸಿ.ಆರ್. 153/2001-02 ದಿನಾಂಕ:27-03-2002.
  4. ಸಮಾಜ ಕಲ್ಯಾಣ ಆಯುಕ್ತರ ಕಛೇರಿ ಪತ್ರ ಸಂಖ್ಯೆ:ಸಕನಿ.ಉ ಮತ್ತು ಸಿಆರ್ 12/05-06 ದಿನಾಂಕ:20-03-2007.
  5. ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ:ಸ.ಕ.ನಿ.ಉ ಮತ್ತು ತ-2 ಸಿ.ಆರ್. 39/2007-08 ದಿನಾಂಕ:08-03-2010.
  6. ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ:ಸ.ಕ.ನಿ.ಉ ಮತ್ತು ತ-2 ಸಿ.ಆರ್. 39/2007-08 ದಿನಾಂಕ:22-02-2011.
  7. ಸರ್ಕಾರದ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ:ಸ.ಕ.ಇ247ಎಸ್ಎಡಿ 2016 ದಿನಾಂಕ:30-11-2016.
  8. ಸರ್ಕಾರದ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ:ಸ.ಕ.ಇ247ಎಸ್ಎಡಿ 2016 ದಿನಾಂಕ:21-12-2016.
  9. ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ:ಸಕಇ 40ಎಸ್ಎಡಿ 2010 ದಿ.21.03.2018.
  10. ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ:ಸಕಇ 41ಎಸ್ಎಡಿ 2022 ದಿ.02.07.2022.
    ಸದರಿ ಸುತ್ತೋಲೆಗಳ ನಿರ್ದೇಶನದಂತೆ ಮತ್ತು ದಾಖಲುಗಳಂತೆ ಹಾಗೂ ಮಾನ್ಯ ಕರ್ನಾಟಕ ಸರ್ವೋಚ್ಛ ನ್ಯಾಯಾಲಯದ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಕಟ್ಟು ನಿಟ್ಟಾಗಿ ಕ್ರಮಜರುಗಿಸಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಮಾನ್ಯ ಸಹಾಯಕ ಆಯುಕ್ತರಿಗೆ ಹಾಗೂ ಮಾನ್ಯ ತಹಶೀಲ್ದಾರರವರುಗಳಿಗೆ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ನಿಯಮಗಳ ಅನುಸಾರ ಕ್ರಮ ಜರುಗಿಸಲು ಆದೇಶಗಳನ್ನು ಮಾಡಿದ್ದಿರುತ್ತದೆ.
    ಇವೆಲ್ಲ ಸರಕಾರದ ದಾಖಲೆಗಳಿದ್ದರೂ ವೀರಶೈವ ಲಿಂಗಾಯತ ಪಂತದಲ್ಲಿ ಬರುವ ಜಂಗಮರು ಬೇಡ ಜಂಗಮರು ಎಂದು ಸುಳ್ಳು ಹೇಳಿ ದಲಿತರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ, ಸುಳ್ಳ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾಆರಿಗಳ ವಿರುದ್ದ ಸರ್ಕಾರವು ಕಠಿಣ ಕ್ರಮ ಜರುಗಿಸಬೇಕು, ಹಾಗೂ ಸುರ್ಳಲ ಜಾತಿ ಪ್ರಮಾಣ ಪತ್ರ ಪಡೆದವರ ಮೇಲೆ ಕ್ರಮ ಜರುಗಿಸಬೇಕು ಎಂದು ಮೊದಲಿನಿಂದಲೂ ಸುಳ್ಳು ಪ್ರತಿಪಾದಿಸುತ್ತಾ ಸಂವಿಧಾನ ಬದ್ಧ ಹಕ್ಕನ್ನು ಪಡೆಯುವಲ್ಲಿ ಕಳೆದ 70ವಷರಗಳಿಂದ ಹೇಳಿಕೆಯನ್ನು ನೀಡುತ್ತಾ ಬೇಡಜಂಗಮರಿಗೆ ಜಾತಿ ಪ್ರಮಾಣ ಪತ್ರ ಸಿಗದಂತೆ ಮತ್ತು ಅಧಿಕಾರಿ ವರ್ಗದವರು ಕೊಡದಂತೆ ಮಾಡಿರುವುದನ್ನು ಬೇಡಜಂಗಮ ಸಮಾಜ ಎಂದು ಸಹಿಸುವುದಿಲ್ಲ ಈ ರೀತಿಯ ನೀಲುವನ್ನು ಸರ್ಕಾರ ಕೈಗೊಂಡಲ್ಲಿ ನಮ್ಮ ಸತ್ಯ ಪ್ರತಿಪಾದನೆಯ ಹಾದಿಯಲ್ಲಿ ನಮ್ಮ ಹಕ್ಕು ಪಡೆಯುವಲ್ಲಿ ಹೋರಾಟ ಕ್ಕಿಳಿಯಬೇಕಾಗುತ್ತದೆ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತವೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments