ದಾವಣಗೆರೆ:, ಸೆಪ್ಟೆಂಬರ್,24 ರಂದು ಟಾಸ್ಕ್ ಫೋರ್ಸ್ ಸಭೆ ನಡೆಸಿದ ಜಿಲ್ಲಾಧಿಕಾರಿಯವರು ಸೆಪ್ಟೆಂಬರ್,15 ರಿಂದ ಅಕ್ಟೋಬರ್,31 ವರೆಗೆ ಭತ್ತ ಖರೀದಿಗಾಗಿ ರೈತರ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಠರಾವು ಮಾಡಿದ್ದಾರೆ. ಆದರೆ ಇಂದು ಅಕ್ಟೋಬರ್,6 ರವರೆಗೆ ಒಬ್ಬ ರೈತನ ನೋಂದಣಿ ಮಾಡಿಕೊಂಡಿಲ್ಲ. ಎಪಿಎಂಸಿ ಯಾರ್ಡ್ ಮೂಲೆಯಲ್ಲಿ ಶೌಚಾಲಯದಂತಹ ಸಣ್ಣ ರೂಮ್ ನಲ್ಲಿ ಖರೀದಿ ನೋಂದಣಿಗಾಗಿ ಕಚೇರಿ ತೆರೆದಿದ್ದು, ಅದರ ಮೇಲೆ ಬ್ಯಾನರ್ ಮಾತ್ರ ಹಾಕಲಾಗಿದೆ. ಆದರೆ ಅದರ ಬೀಗ ತೆಗೆದಿಲ್ಲ. ಅಂದರೆ ಸೆಪ್ಟೆಂಬರ್,15 ರಿಂದ ಇವತ್ತಿನವರೆಗೂ ಕದ ತೆಗೆದಿಲ್ಲ. ನೋಂದಣಿಗೆ ಬಂದ ರೈತರು ಬಂದು ಕದ ಬಂದ್ ಆಗಿರುವುದನ್ನು ನೋಡಿ ಹಿಂದುರುಗುತ್ತಿದ್ದಾರೆ. ಇದು ರೈತರಿಗೆ ಜಿಲ್ಲಾಧಿಕಾರಿ ಮಾಡುತ್ತಿರುವ ಮೋಸ, ವಂಚನೆ, ಶೋಷಣೆ. ಇಂತಹ ರೈತ ವಿರೋಧಿ ಸರ್ಕಾರ ನಮಗೆ ಬೇಕಾ ಎಂದು ಯೋಚಿಸಬೇಕಾಗಿದೆ ಎಂದು ರೈತಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಅಭಿಪ್ರಾಯ ಪಟ್ಟಿದ್ದಾರೆ.