ದಾವಣಗೆರೆ – ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ ಎಂದು ಅಖಿಲ ಭಾರತ ದಲಿತ ಆಂದೋಲನ ದಾವಣಗೆರೆ ಜಿಲ್ಲಾ ಸಮಿತಿಯ ಅಧ್ಯಕ್ಷ ನರೇಗಾ ರಂಗನಾಥ್ ಖಂಡಿಸಿದ್ದಾರೆ.
ಅಖಿಲ ಭಾರತ ದಲಿತ ಆಂದೋಲನ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ನರೇಗಾ ರಂಗನಾಥ್ ಸರ್ವರಿಗೂ ಒಳ್ಳೆಯದನ್ನೇ ಬಯಸುವ ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳದ ಮನುವಾದಿ ಮನಸ್ಥಿತಿಯ ವಕೀಲನೊಬ್ಬ ಸುಪ್ರೀಂ ಕೋರ್ಟ್ ನ ಒಬ್ಬ ದಲಿತ ನ್ಯಾಯಮೂರ್ತಿಗಳ ಮೇಲೆ ಅಸಹನೆಯಿಂದ ಶೂ ಎಸೆದಿರುವುದನ್ನು ಒಪ್ಪಲಾಗುವುದಿಲ್ಲ ಇಂತಹ ಮನುವಾದಿ ಮನಸ್ಥಿತಿಯ ವಕೀಲನನ್ನು ಕೂಡಲೇ ಬಂಧಿಸಿ ಕಾನೂನು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಕುರಿತು ಎ ಐ ಡಿ ಆರ್ ಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆರನಹಳ್ಳಿ ರಾಜು ಮಾತನಾಡಿದರು.
ಎನ್ ಟಿ ಸುರೇಶ್, ತಿಪ್ಪೇಸ್ವಾಮಿ ಬಿ ಎಚ್, ಜೆ ರಂಗನಾಥ್, ದಾದಾಪೀರ್, ಮೈಲಾರಿ ಎಸ್, ರಂಗನಾಥ, ಮಂಜುನಾಥ, ಹುಲಿಗೆಮ್ಮ, ನಾಗಮ್ಮ, ಕಾಂತಮ್ಮ, ಪರಶುರಾಮ ಎನ್, ವಿಜಯಕುಮಾರ್, ಪ್ರಕಾಶ್ ಏ ಆರ್, ತಿಮ್ಮಾರೆಡ್ಡಿ, ಸಂಜು, ಪರಮೇಶಿ ಅಕ್ಕಿ, ಕರಿಯಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ನಂತರ ದಾವಣಗೆರೆ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಸಂವಿಧಾನಕ್ಕೆ ಮಾಡಿದ ಅಪಚಾರAIDRM ಖಂಡನೆ.
RELATED ARTICLES

