ವಿಜಯಪುರ;ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಜಾತ್ರಾಮಹೋತ್ಸವ ಹಾಗೂ ಸಮುದಾಯ ಭವನ ಉದ್ಘಾಟನಾ ಸಮಾರಂಭ ವನ್ನು ಚಿತ್ರದುರ್ಗದ ಸಂಸದರಾದ ಮಾಜಿ ಸಚಿವ ಶ್ರೀ ಗೋವಿಂದ ಕಾರಜೋಳರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು,ಯುವಕ ಯುವತಿಯರು,ಮಹಿಳೆಯರು ಮತ್ತು ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ತರು ನೆಂಟರಿಷ್ಟರು ಜಾತ್ರಾಮಹೋತ್ಸದಲ್ಲಿ ಭಾಗವಹಿಸಿ ಶ್ರೀ ಬೀರೇಶ್ವರ ಕೃಪೆಗೆ ಪಾತ್ರರಾದರು.
ಈ ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಶ್ರೀ ಸೋಮನಾಥ ಕಳ್ಳಿಮನಿಯವರು ಈ ಜಾತ್ರಾ ಮಹೋತ್ಸವ ಹಾಗೂ ಬೀರಲಿಂಗೇಶ್ವರ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಯುವಜನತೆ ಶಿಕ್ಷಣ,ಉದ್ಯೋಗ ಮತ್ತು ಕ್ರೀಡೆ ಗಳತ್ತ ಹೆಚ್ಚು ಗಮನಹರಿಸಿ ರಾಜ್ಯ ರಾಷ್ಟ್ರ ಮಟ್ಟದವರೆಗೆ ಬೆಳೆಯಬೇಕೆಂದು ಕರೆ ಕೊಟ್ಟರು.

