ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಟನೆಯಿಂದ ದಿನಾಂಕ: ೨೫-೦೭-೨೦೨೬,ರಂದು ಶನಿವಾರ ಪತ್ರಕಾ ದಿನಾಚರಣೆ ಮತ್ತು ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ನ್ಯಾಮತಿ ತಾಲೂಕ್ ಸಮಿತಿ ಸಂಚಾಲಕರಾದ ಶ್ರೀ ಎಂ.ಎಸ್.ಶಾಸ್ತ್ರೀ ಹೊಳಿಮಠ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ನ್ಯಾಮತಿತಾಲೂಕಿನ ಸುರಹೊನ್ನೆಯಲ್ಲಿ ನಡೆದ ಕರ್ನಾಟಕ ಕಾರ್ಯ ನಿರತಪತ್ರಕರ್ತರ ಸಂಘದಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆಯನ್ನು ಕರ್ನಾಟಕ ಕಾರ್ಯ ನಿರತಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾ ಸಮಿತಿ ಅಧ್ಯಕ್ಷರು ಹಾಗೂ ಜನತಾವಾಣಿ ಕನ್ನಡ ದಿನಪತ್ರಿಕೆಯ ಶ್ರೀ ಇ.ಎಂ.ಮಂಜುನಾಥ್ ರವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣದಲ್ಲಿ ಪ್ರಸ್ತಾಪವಾದ ಪ್ರಮುಖ ಅಂಶವೆಂದರೆ ನ್ಯಾಮತಿ ಗ್ರಾಮಪಂಚಾಯತಿಯಿಂದ ಹಿಡಿದು ಈಗ ತಾಲೂಕು ಆಗುವವರೆಗೆ ಇಲ್ಲಿ ಎಲ್ಲಾ ಅಭಿವೃದ್ಧಿ ಪರ ಹೋರಾಟಗಳಪರ ಪತ್ರಕರ್ತರು ಪ್ರತಿಯೊಂದನ್ನು ಅಚ್ಚುಕಟ್ಟಾಗಿ ವರದಿ ಮಾಡಿ ಸರ್ಕಾರದ ಮನಮುಟ್ಟುವವರೆಗೆ ಪ್ರಚಾರ ಮಾಡಿದ್ದಿದೆ.ಮೊದಲು ತಿಂಗಳಿಗೊಂದು ಸಲ ಕುಡಿಯುವ ನೀರಿಗೂ ಪರದಾಡುವ ವ್ಯವಸ್ಥೆ ಇತ್ತು ಈಗ ತಾಲೂಕಾಗಿದೆ ನೀರಿನ ಸಮಸ್ಯೆಯೂ ಅಷ್ಟೊದು ಇಲ್ಲಾ ಈ ತಾಲೂಕಿನ ಸರ್ವಾಂಗಿನ ಅಭಿವೃದ್ಧಿಗೆ ಶ್ರಮಿಸುತ್ತಿರುವವರಪರವಾಗಿ ಪತ್ರಕರ್ತರು ಸುದ್ದಿಮಾಡಿ ಜನರಿಗೆ ತಲುಪಿಸುತ್ತಿದ್ದರೂ ಸಹ ನ್ಯಾಮತಿ ತಾಲೂಕಿನಲ್ಲಿ ಪತ್ರಿಕಾ ಭವನ ಇಲ್ಲಾ ಪತ್ರಕರ್ತರು ಹಾದಿ,ಬೀದಿ,ಹೊಟೆಲ್ಗಳಲ್ಲಿ ಕುಳಿತು ವರದಿಮಾಡುವ ಪರಿಸ್ಥಿತಿ ಇಲ್ಲಿಯ ಪತ್ರಕರ್ತರಿಗಿದೆ ನಾವು ಸ್ವಂತಕ್ಕೆ ಏನೂ ಕೇಳುತ್ತಿಲ್ಲಾ ಪತ್ರಕರ್ತರ ಭವನಕ್ಕೆ ನಿವೇಶನ ಕೇಳುತಿದ್ದೇವೆ ಸ್ಥಳಿಯ ಶಾಸಕರು ಅಧಿಕಾರಿಗಳು ನಮ್ಮ ಮನವಿಗೆ ಗಮನಹರಿಸುತ್ತಿಲ್ಲವೆಂದು ತಮ್ಮ ನೊವನ್ನು ವ್ಯಕ್ತಪಡಿಸಿದ್ದು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಕೂಡಲೇ ಈ ಕುರಿತು ಕ್ರಮ ಜರುಗಿಸಿ ನ್ಯಾಮತಿ ನೂತನ ತಾಲೂಕಿಗೆ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಡಬೇಕೆಂದು ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ವ್ಯಕ್ತವಾಯಿತು.
ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಶ್ರೀ ಇ.ಎಂ.ಮಂಜುನಾಥ ರವರು ನ್ಯಾಮತಿ ತಾಲೂಕಿನ ಪತ್ರಕರ್ತರು ತಮ್ಮ ಸ್ವಂತಕ್ಕಲ್ಲಾ ಅವರು ಕೇಳುತ್ತಿರುವುದು ಪತ್ರಿಕಾ ಭವನಕ್ಕೆ ನಿವೇಶನ ಆದ್ದರಿಂದ ನಿಮ್ಮೊಂದಿಗೆ ನಾವು ಜಿಲ್ಲಾ ಸಮಿತಿಯವರು ಸಾತ್ ಕೊಡುತ್ತೇವೆ ತಾವು ತಮ್ಮ ನಿಯೋಗದೊಂದಿಗೆ ಬನ್ನಿ ಜಿಲ್ಲಾಮಿತಿಯವರೂ ಬರುತ್ತೇವೆ ಸ್ಥಳೀಯ ಶಾಸಕರನ್ನು ಭೇಟಿಯಾಗಿ ಮನವಿಕೊಟ್ಟು ಅಧಿಕಾರಿಗಳಿಗೂ ಮನವಿಕೊಡೋಣ ಮತ್ತು ಪತ್ರಕರ್ತರೂ ಸಂಕಷ್ಟ ದಲ್ಲಿದ್ದಾರೆ ಕೆಲವರು ಬಾಡಿಗೆಮನೆಗಳಲ್ಲಿ ವಾಸವಿದ್ದು ಬಾಡಿಗೆ ಕಟ್ಟಲೂ ಪರದಾಡುವಂಥ ಪರಿಸ್ಥಿತಿಯಲ್ಲಿ ಇದ್ದಾರೆ ಅಂಥವರಿಗೂ ಸ್ವಂತ ಮನೆಕಟ್ಟಿಸಿಕೊಳ್ಳಲು ನಿವೇಶನ ಕೊಡಬೇಕೆಂದು ಒತ್ತಾಯಿಸೋಣ ಎಂದು ಈ ಸಂಧರ್ಭದಲ್ಲಿ ಹೇಳಿದರು.ಇದೆ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಎನ್.ವಿ.ಬದ್ರಿನಾಥ್ ರವರು ಮಾತನಾಡಿ ನ್ಯಾಮತಿ ತಾಲೂಕಿನಲ್ಲಿ ಪತ್ರಕರ್ತರು ಕ್ವಾಂಟಿಟಿಯಾಗಿರದೆ ಕ್ವಾಲಿಟಿಯಾಗಿದ್ದಾರೆ ಮುಂದೆಯೂ ಕೂಡಾ ಪ್ರಾಮಾಣಿಕ,ಸತ್ಯನಿಷ್ಟ ,ನಿಷ್ಪಕ್ಷಪಾತ ನೈಜ ವರದಿಮಾಡುವ ಪತ್ರಕರ್ತರನ್ನು ಗುರುತಿಸಿ ಸದಸ್ಯತ್ವ ನೀಡಬೇಕೆಂದು ಹೇಳಿದರು.ಜಿಲ್ಲಾ ಖಜಾಂಚಿ ಜೆ.ಎಸ್.ವಿರೇಶ್ ಮಾತನಾಡಿ ಪತ್ರಕರ್ತರು ಎಲ್ಲರ ಸಮಸ್ಯೆಗಳನ್ನು ಆಲಿಸಿ ವರದಿಮಾಡಿ ನ್ಯಾಯ ಒದಗಿಸಲು ಶ್ರಮಿಸುತ್ತಾರೆ ದೀಪದ ಕೆಳಗೆ ಕತ್ತಲ ತರ ಪತ್ರಕರ್ತರ ಬದುಕು ಇದ್ದು ನಮ್ಮ ಸಮಸ್ಯೆ ಯಾರೂ ಅರ್ಥಮಾಡಿಕೊಳ್ಳುವುದಿಲ್ಲಾ ಎಂದು ವಿಷಾದ ವ್ಯಕ್ತಪಡಿಸಿದರು.ಜಿಲ್ಲಾ ಕಾರ್ಯದರ್ಶಿ ಸಿ.ವೇದಮೂರ್ತಿ,ರಾಷ್ಟ್ರೀಯ ಸಮಿತಿಸದಸ್ಯ ಎಸ್.ಕೆ.ಒಡೆಯರ್ ಮತ್ತು ಪತ್ರಿಕೆಗಳ ಜಾಹೀರಾತು ಪ್ರತಿನಿಧಿ ರುದ್ರೇಶ್ ಪತ್ರಿಕಾದಿನಾಚರಣೆ ಕುರಿತು ಮಾತನಾಡಿದರು.ಚಲನಚಿತ್ರ ನಟರಾದ ಶ್ರೀ ಶಿವಕುಮಾರ್ ಆರಾಧ್ಯ ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಚಲನಚಿತ್ರ ಮತ್ತು ಪತ್ರಿಕಾ ಮಾಧ್ಯಮವು ಜನರನ್ನು ಬೇಗ ತಲುಪುತ್ತವೆ ಹಾಗಾಗಿ ಈ ಎರಡೂ ಕ್ಷೇತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವತ್ತ ಹೆಚ್ಚು ಶ್ರಮಿಸಬೇಕೆಂದು ಹೇಳಿದರು ಇದೇ ಸಂದರ್ಭದಲ್ಲಿ ಅವರ ಆಪ್ತ ವಲಯದ ಚಲನಚಿತ್ರ ನಟರಾದ ಶ್ರೀ ಎನ್.ಎಸ್.ಶಂಕರ್ ರವರು ಇತ್ತೀಗೆ ನಿಧನರಾಗಿರುವುದನ್ನು ನೆಪಿಸಿಕೊಂಡರು. ವೇದಿಕೆಯಲ್ಲಿ ಶಂಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೃತರ ಆತ್ಮಶಾಂತಿಗಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಸುರಹೊನ್ನೆಯ ಪಿ.ಎಂ.ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಶ್ರೀ ಡಿ.ರಾಮಪ್ಪ ನವರು ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಅಚ್ಚುಕಟ್ಟಾಗಿ ನಿಭಾಯಿದರು.ಕಾರ್ಯಕ್ರಮದಲ್ಲಿ ಎಲ್ಲ ಅತಿಥಿಮಹೊದಯರನ್ನು ಸ್ವಾಗತಿಸಿ ಗೌರವ ಸಮರ್ಪಸಿ ಮಾತನಾಡಿದ ಅವರು ಪತ್ರಕರ್ತರು ಸಮಾಜದ ಅಂಕು ಡೊಂಕು ತಿದ್ದಲು ಶ್ರಮಿಸುತ್ತಾರೆ ತಮ್ಮ ನೋವನ್ನು ಯಾರಿಗೂ ತೋರ್ಪಡಿಸದೆ ನೋವುನುಂಗಿ ಇತರರ ನೋವುಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಪ್ರಮುಖರು ಹಾಗಾಗಿ ಪತ್ರಕರ್ತರು ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವಾಗ ನಾನು ಸಹಕರಿಸುತ್ತೇನೆ ಪತ್ರಕರ್ತರ ಜೊತೆ ಸದಾ ನಾನು ಇರುತ್ತೇನೆಂದು ಪತ್ರಕರ್ತರ ಕಾರ್ಯಕ್ರಮಗಳಿಗೆ ಉತ್ತೇಜಿಸುವ ಭರವಸೆ ನೀಡಿದರು.ಶಾಲಾಭಿವೃದ್ಧಿಸಮಿತಿ ಅಧ್ಯಕ್ಷರು ಹಾಗೂ ಶಾಲಾ ಸಹ ಶಿಕ್ಷಕರು,ವಿವಿಧ ಸಂಘಸಂಸ್ಥೆಗಳ ಮುಖಂಡರು,ಕನ್ನಡಪರ,ರೈತಪರ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಗೌರವ ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಶ್ರೀ ಹೆಚ್.ಎಮ್.ಸದಾಶಿವಯ್ಯ,ಬಿ.ಇ.ಷಣ್ಮುಖ,ಸ್ವಾಮಿ ಹೊಳಿಮಠ,ಜೆ.ಹಳದಪ್ಪ,ಶ್ರೀಮತಿ ವಿಶಾಲಾಕ್ಷಿ ಷಣ್ಮುಖ, ಶ್ರೀ ಕುಬೇರಪ್ಪ ನವರು ಸೇರಿದಂತೆ ಅನೇಕ ಹಿರಿಯ ಗಣ್ಯಮಾಣ್ಯರು ಉಪಸ್ಥಿತರಿದ್ದರು.

