ವಿಜಯಪುರ:
ವಿಜಯಪುರ ಜಿಲ್ಲೆ ಹಳೆ ಕೊಲ್ಹಾರ ಸದ್ಯ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಡೆ ಆಗಿ ಇಲ್ಲಿನ ಜನರನ್ನು ಪುನರ್ವಸತಿ ಕೇಂದ್ರ ಹೊಸ ಕೊಲ್ಹಾರಕ್ಕೆ ಸ್ಥಳಾಂತರಿಸಲಾಗಿದೆ ಆದರೆ ಕ್ರಿ ಶ 1445 ರಲ್ಲಿ ಪ್ರೌಢ ದೇವರಾಯನ ಕಾಲದಲ್ಲಿದ್ದ ಅದೃಶ್ಯ ಕವಿಯ ಸಮಾಧಿ ಸ್ಮಾರಕ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಿ ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿದೆ
ಕೊಲ್ಹಾರ ಅದೃಶ್ಯ ಕವಿ ದೇಸಾಯಿ ಇತಿಹಾಸ
ಕೊಲ್ಹಾರ ವಿಜಯ ನಗರ ಅರಸರ ಕಾಲದಲ್ಲಿ ಪ್ರಮುಖ ಪರಗಣಾ ಕೇಂದ್ರ ವಾಗಿದ್ದರಿಂದ ಇಲ್ಲಿನ ದೇಸಗತಿಯನ್ನು
ಕ್ಷತ್ರೀಯ ವಂಶದ ಭೋಜನಾಯಕ ದೇಸಾಯಿ ಆಡಳಿತ ನಡೆಸುತ್ತಿದ್ದ ಕಾಲನಂತರ ಗಾಣಿಗ ವಂಶದ ಅದೃಶ್ಯ ಕವಿ ಈ ದೇಶಗತ್ತಿ ಮನೆತನವನ್ನು ಮುಂದುವರೆಸಿದ ಎಂದು ಕೆಲವು ದಾಖಲೆಗಳ ಮೂಲಕ ಉಲ್ಲೇಖದಲ್ಲಿ ತಿಳಿದು ಬರುತ್ತದೆ. 1525 ರಲ್ಲಿ ಅದೃಶ್ಯ ಕವಿ ರಚಿಸಲ್ಪಟ ಪ್ರೌಢ ದೇವರಾಯನ ಕಾವ್ಯದಲ್ಲಿ ಕೊಲ್ಹಾರಕ್ಕೆ ಮೊದಲು ತೊರೆಸಾಲ ಪರಗಣೆ ಕೊಲ್ಹಾಪುರ ಎಂದು ಕರೆಯಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ
ಅದೃಶ್ಯ ಕವಿ ದೇಸಾಯಿ ಕ್ಕಿಂತಲೂ ಮೊದಲು ಕೊಲ್ಹಾರವನ್ನು ಭೋಜನಾಯಕ ದೇಸಾಯಿ ಆಡಳಿತ ನಡೆಸುತ್ತಿದ್ದ ಕೊಲ್ಹಾರ ದೇಸಾಯಿ ಮನೆತನದ ಮುಂದೆ ಸಿಕ್ಕ ಈ ಒಂದು ಶಿಲಾಶಾಸನದಲ್ಲಿ ಕ್ರಿ ಶ 1223 ರಲ್ಲಿ ಯಾದವ ದೊರೆ ಸಿಂಗನ ಕಾಲದಾಗಿದೆ ಇದರಲ್ಲಿ ಕೊಲ್ಹಾರವನ್ನು ದಕ್ಷಿಣವಾರಣಾಸಿ ಹಾಗೂ ಸರ್ವನಮಸ ಅಗ್ರಹಾರ ಎಂದು ಉಲ್ಲೇಖಿಸಲಾಗಿದೆ
ಅಂದಿನ ಕಾಲದ ಅದೃಶ್ಯ ಕವಿ ದೇಸಾಯಿ ಸಮಾಧಿ ಸ್ಮಾರಕ ಸದ್ಯ ಕೃಷ್ಣಾ ನದಿಯಲ್ಲಿ ಮುಳುಗಿರುತದೆ ಇದು ಬೆಸಿಗೆಯಲ್ಲಿ ಕೃಷ್ಣಾ ನದಿ ನೀರು ಕಡಿಮೆ ಆದಾಗ ಮಾತ್ರ ಈ ಒಂದು ಐತಿಹಾಸಿಕ ಸಮಾಧಿ ಸ್ಮಾರಕ ಎಲ್ಲರಿಗೂ ನೋಡಲು ಸಿಗುತ್ತದೆ
ಇಂತ ಒಂದು ಐತಿಹಾಸಿಕ ಅದೃಶ್ಯ ಕವಿ ದೇಸಾಯಿ ಸಮಾಧಿಯ ಸ್ಮಾರಕ ಕೃಷ್ಣಾ ನದಿಯಲ್ಲಿ ಅಳುವಿನಂಚಿನಲ್ಲಿದೆ ಅದರ ಉಳಿವಿಗಾಗಿ ಊರಿನ ಹಿರಿಯರು ಯುವಕರು ರಾಜಕೀಯ ಜನ ಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ ಸಮಾಧಿಯ ಸ್ಮಾರಕವನ್ನು ಹೊಸ ಕೊಲ್ಹಾರಕ್ಕೆ ಸ್ಥಳಾಂತರ ಮಾಡಿ ಗಾಣಿಗ ವಂಶದ ದೇಸಾಯಿ ಮನೆತನದ ಮೂಲ ಪುರುಷನ ಐತಿಹಾಸಿಕ ಸಮಾಧಿ ಸ್ಮಾರಕವನ್ನು ನಾವು ನೀವು ಎಲ್ಲರೂ ಉಳಿಸಬೇಕಾಗಿದೆ(ಸಂಗ್ರಹ:ರವಿಕುಮಾರ್ ತುಪಗಪದ್ ಪೇಜ್)

