ದಾವಣಗೆರೆ:ಎಸ್.ಐ.ಆರ್ ವಿರೋಧಿಸಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ದಾವಣಗೆರೆ ರವರು ಸೇರಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಕೇಂದ್ರ ಸರ್ಕಾರದ ವಿರೋಧಿ ನಿಲುವನ್ನು ಖಂಡಿಸಿ ಪ್ರತಿ¨s Àಟನೆ ಮಾಡಿದ ಬಗ್ಗೆ. ಎಸ್.ಐ.ಆರ್ ವಿರೋಧಿಸಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ದಾವಣಗೆರೆ . ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಸೇರಿ ಕೇಂದ್ರ ಸರ್ಕಾರದ ವಿರೋಧಿ ನಿಲುವನ್ನು ಖಂಡಿಸಿ ಪ್ರತಿ¨s Àಟನೆ ಮಾಡಲಾಯಿತು. ಎಲ್ಲಾ ಸಂಘಟನೆಯ ಮುಖಂಡರು ಹಾಗೂ ಪಕ್ಷದ ಮುಖಂಡರುಗಳು ಎಸ್.ಐ.ಆರ್ ಅನ್ನು ವಿರೋಧಿಸಿ ಚುನಾವಣಾ ಆಯೋಗದ ನೀತಿಯನ್ನು ಖಂಡಿಸಲಾಯಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಎಲ್ಲಾ ಪಕ್ಷದ ಮತ್ತು ಸಂಘಟನೆಗಳ ಮುಖಂಡರು ಮಾತನಾಡಿದರು. ತದನಂತರ ಅಪರ ಜಿಲ್ಲಾಧಿಕಾರಿಗಳಾದ ಶೀಲವಂತ್ ಶಿವಕುಮಾರ್ ರವರಿಗೆ ಸರ್ಕಾರ ತೆಗೆದುಕೊಳ್ಳಬೇಕಾದ ಕೆಲವು ನಿಲುವುಗಳನ್ನು ಸಂಚಾಲಕರಾದ ಅನೀಸ್ ಪಾಷರವರು ಓದಿ ನಂತರ ಮುಖ್ಯ ಮಂತ್ರಿಗಳಿಗೆ ಕಳುಹಿಸಿಕೊಡಲು ಮನವಿಯನ್ನು ಮಾಡಿದರು. ಈ ಸಂದರ್ಭದಲ್ಲಿ ಸಂಚಾಲಕರಾದ ಅನೀಸ್ ಪಾಷ, ದಾದಪೀರ್ ನವಿಲೇಹಾಳ್, ರವಿ ನಾರಾಯಣ್, ಜಸ್ಟಿನ್ ಜೈ ಕುಮಾರ್, ದಿನೇಶ್ ಕೆ ಶೆಟ್ಟಿ, ಅಪ್ಸರ್ ಕೊಡ್ಲಿಪೇಟೆ, ಹೆಚ್.ಸಿ ಮಲ್ಲಪ್ಪ, ಇಸ್ಮಾಯಿಲ್ ಡೊಡ್ಮನಿ, ತಾಹಿರ್, ಹಾಲಪ್ಪ, ಅಯೂಬ್ ಪೈಲ್ವಾನ್, ಅನಿತಾ ಬಾಯಿ, ಸಲ್ಮಾ ಮಲ್ಲಿಕಾರ್ಜುನ್, ಗಿರೀಶ್, ಪ್ರಕಾಶ, ಮಂಜುನಾಥ, ಆಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.
ಎಸ್.ಐ.ಆರ್ ವಿರೋಧಿಸಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ
RELATED ARTICLES

