Tuesday, June 23, 2026
Homeಸಾರ್ವಜನಿಕ ಧ್ವನಿವಿದ್ಯುತ್ ಖಾಸಗೀಕರಣ ವಿರೋಧಿಸಿ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಕರ್ನಾಟಕ ಬೃಷ್ಟಾಚಾರ ನಿರ್ಮೂಲನಾ ರೈತ...

ವಿದ್ಯುತ್ ಖಾಸಗೀಕರಣ ವಿರೋಧಿಸಿ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಕರ್ನಾಟಕ ಬೃಷ್ಟಾಚಾರ ನಿರ್ಮೂಲನಾ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸರ್ಕಾರಕ್ಕೆ ಮನವಿ




ಬಾಗಲಕೋಟೆ:“ಟಾಟಾ ಪವರ್ ಕಂಪನಿ ಲಿಮಿಟೆಡ್” ಮುಂಬಯಿರವರು ವಿದ್ಯುತ್ ವಿತರಣೆ ಮಾಡಲು ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಪರವಾನಗಿಗಾಗಿ ಸಲ್ಲಿಸಲಾದ ಅರ್ಜಿಗೆ ರಾಜ್ಯ ಸರ್ಕಾರದಿಂದ ಅನುಮತಿ ನೀಡಬಾರದೆಂದು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಅಖಿಲ ಕರ್ನಾಟಕ ಬೃಷ್ಟಾಚಾರ ನಿರ್ಮೂಲನಾ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದವರು ಮಾನ್ಯ 1) ಸನ್ಮಾನ್ಯ ಗೌರವಾನ್ವಿತ ರಾಜ್ಯಪಾಲರು, ಕರ್ನಾಟಕ ಸರಕಾರ, ರಾಜಭವನ, ಬೆಂಗಳೂರು ರವರಿಗೆ,ಹಾಗೂ 2) ಸನ್ಮಾನ್ಯಶ್ರೀ ಡಿ. ಕೆ. ಶಿವಕುಮಾರ ರವರು ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ, ವಿದಾನಸೌಧ, ಬೆಂಗಳೂರು ರವರಿಗೆ,ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಹಾಗೂ ಸೆಸ್ಕ್ ವ್ಯಾಪ್ತಿಯ ಹೆಚ್ಚು ಆದಾಯವುಳ್ಳ 19 ಜಿಲ್ಲೆಗಳಲ್ಲಿ ಸಮನಾಂತರವಾಗಿ ಖಾಸಗಿ ಸಂಸ್ಥೆಯಾದ “ಮುಂಬಯಿಯ ಟಾಟಾ ಪವರ್ ಕಂಪನಿ ಲಿಮಿಟೆಡ್” ನಮ್ಮ ರೈತರಿಗೆ ವಿದ್ಯುತ್ ಪಡೆದುಕೊಳ್ಳಲು ಪರವಾನಗಿ (ಲೈಸೆನ್ಸ್) ಯನ್ನು ಕೋರಿ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದವರಿಗೆ ಖಾಸಗೀಕರಣ ಮಾಡಬಾರದೆಂದು ಸರಕಾರದ ಆಧೀನದಲ್ಲಿ ನಡೆಸಿಕೊಂಡು ಹೋಗಬೇಕು. ಆದಲ್ಲದೇ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೃಷ್ಣಾ ನದಿ ನೀರಿನ ದಡದಲ್ಲಿ ರೈತರು ನದಿಯ ಮುಖಾಂತರ ನಮ್ಮ ರೈತರ ಜಮೀನುಗಳಲ್ಲಿ ಪಂಪ್‌ಸೆಟ್ ಮುಖಾಂತರ ನೀರು ಬರುತ್ತಿದ್ದು, ಇದಕ್ಕೆ ಮುಂದಿನ ದಿನಮಾನಗಳಲ್ಲಿ ಸರಕಾರವು ಟಾಟಾ ಕಂಪನಿಗೆ ಮಾರಾಟ ಅಥವಾ ಖಾಸಗೀಕರಣ ಮಾಡಿದರೆ ರೈತರು ಉಳುಮೆ ಮಾಡಿ ದೇಶಕ್ಕೆ ಅನ್ನ ಹಾಕುವ ರೈತರ ಬಾಯಿಯಲ್ಲಿ ಮಣ್ಣು ಹಾಕಿದಂತಾಗುತ್ತದೆ.
ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರೈತರ ಜಮೀನುಗಳಿಗೆ ಹೋಗಲು ಸರಿಯಾದಂತಹ ರಸ್ತೆ ಕೂಡಾ ಇರುವುದಿಲ್ಲ. ಆದಕಾರಣ ಜಿಲೆಯಲ್ಲಿ ಬರುವ ಕೃಷ್ಣಾ ಮೇಲ್ದಂಡೆ ಯೋಜನೆ ನವನಗರ, ಬಾಗಲಕೋಟೆ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿರುವ ಭೂಮಿಗಳಿಗೆ ಸರಿಯಾದಂತಹ ಪರಿಹಾರ ಧನವನ್ನು ಕೊಟ್ಟಿರುವದಿಲ್ಲ. ಆದಷ್ಟು ಬೇಗನೆ ನಮ್ಮ ರೈತರಿಗೆ ಪರಿಹಾರ ಧನವನ್ನು ಕೊಡಬೇಕು ಹಾಗೂ ಜಿಲ್ಲೆಯ ಸರಕಾರಿ ಶಾಲೆಗಳು ಶಿಥಿಲಗೊಂಡು ಬೀಳುವಂತಹ ಸ್ಥಿತಿಯಲ್ಲಿದ್ದರೂ ಜಿಲ್ಲೆಯಲ್ಲಿ ಬರುವ ತಾಲೂಕುಗಳ ದಂಡಾಧಿಕಾರಿಗಳಾಗಲೀ ಶಿಕ್ಷಣಾಧಿಕಾರಿಗಳಾಗಲೀ ಯಾವ ಶಾಲೆಗಳಿಗೂ ಕೂಡಾ ಭೇಟಿ ನೀಡಿರುವುದಿಲ್ಲ. ಶಿಥಿಲಗೊಂಡ ಶಾಲೆಯಲ್ಲಿ ಕಲಿಯುವ ಮಕ್ಕಳ ಕಟ್ಟಡವು ಕುಸಿದುಬಿದ್ದರೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ ಭವನ ನವನಗರ ಬಾಗಲಕೋಟೆ ಇವರೇ ನೇರ ಹೊಣೆ ಆಗುತ್ತಾರೆ ಎಂದು ನಾಗರಾಜ ತಂದೆ: ಭೀಮಪ್ಪ ಹೂಗಾರ ರಾಜ್ಯ ಉಪಾಧ್ಯಕ್ಷರು ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ಘಟಕ, ಬೆಂಗಳೂರು ಇವರು ಮನವಿ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments