ದಾವಣಗೆರೆ:ಹರಿಹರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿತರಾದ ವಿನಯ್ ಕುಮಾರ್ ಜಿ.ಬಿ.ಇವರು ಗುರುವಾರ ಗ್ರಾಮವಾಸ್ತವ್ಯಕ್ಕೆ ಆಗಮಿಸಿದಾಗ ಗ್ರಾಮದವರು ಅದ್ದೂರಿ ಯಾಗಿ ಗ್ರಾಮದ ಮಹಿಳೆಯರು ಕುಂಭಮೇಳ ಡೊಳ್ಳು ಕುಣಿತದೊಂದಿಗೆ ಸ್ವಾಗತ ಮಾಡಿ ಗ್ರಾಮ ವಾಸ್ತವ್ಯಕ್ಕೆ ಬರಮಾಡಿಕೊಂಡರು
.ಮಲೆಬೆನ್ನೂರು ಹೋಬಳಿ ಕೊಪ್ಪ ಗ್ರಾಮದ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ವಿನಯ್ ಕುಮಾರ್ ಈಗಾಗಲೇ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಪ್ರಚಾರ ಮಾಡುತ್ತಿದ್ದಾರೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯತಿದ್ದು ವಿನಯ್ ಕುಮಾರ್ ರಂತಹ ಜನಸೇವಕರು ಅವಶ್ಯಕವಾಗಿ ಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಮೂವತ್ತು ವರ್ಷಗಳಿಂದ ನಮ್ಮಿಂದ ಆಯ್ಕೆಯಾದ ಸಂಸದರು ಒಮ್ಮಯೂ ನಮ್ಮಂತಹ ಕುಗ್ರಾಮಗಳಿಗೆ ಭೇಟಿ ನೀಡಿ ನಮ್ಮ ಕುಂದು ಕೊರತೆಗಳು ಸ್ಪಂದಿಸಿಲ್ಲ .ವಿನಯ್ ಕುಮಾರ್ ಇಂದು ನಮ್ಮ ಗ್ರಾಮಕ್ಕೆ ಬಂದು ಇಲ್ಲೆ ವಾಸ್ತವ್ಯ ಮಾಡುತ್ತಿರುವುದು ಅವರಲ್ಲಿರುವ ಕಾಯಕನಿಷ್ಠೆ ಕಾಣುತ್ತದೆ ಎಂದರು