ಜಗಳೂರು:ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೋಕಿನ ಸಂಗೇನಹಳ್ಳಿ ಗೇಟ್ ಬಳಿ ಜರುಗಿದೆ
ಇನ್ನೂ ಘಟನೆಯಲ್ಲಿ ಭರತ್ ಬಾಯ್ ಎಂಬ ಬರೋಡಾ ಮೂಲದ ಚಾಲಕ ಎಂದು ತಿಳಿದು ಬಂದಿದೆ. ಬರೋಡಾದಿಂದ ಕೋಳಿ ಫುಡ್ ಮತ್ತು ಕಬ್ಬಿಣದ ಸರಳುಗಳನ್ನ ಲೋಡ್ ಮಾಡಿಕೊಂಡು ಮಂಡ್ಯ ಜಿಲ್ಲೆಗೆ ಹೋಗುತ್ತಿದ್ದು ಲಾರಿ
ಬೊಗಳೇರಹಟ್ಟಿ ಹಾಗೂ ಸಂಗೇನಹಳ್ಳಿ ಮಾರ್ಗದ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ಲಾರಿ ಸಂಪೂರ್ಣ ಜಖಂ ಗೊಂಡಿದ್ದು . ಲಾರಿಯಲ್ಲಿದ್ದ ಕೋಳಿ ಫುಡ್ ಪಾಕೆಟ್ ಗಳು ಒಡೆದು ಹೋಗಿವೆ.
ಇನ್ನೂ ಘಟನ ಸ್ಥಳಕ್ಕೆ ತುರುವನೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರೇರಣೆ ದಾಖಲಿಸಿಕೊಂಡಿದ್ದಾರೆ.