ದಾವಣಗೆರೆ – ಭಾರತೀಯ ಮಹಿಳಾ ಒಕ್ಕೂಟದ NFIW ಐದನೇ ರಾಜ್ಯ ಸಮ್ಮೇಳನ ಡಿಸೆಂಬರ್ 2 ಮತ್ತು 3 ರಂದು ದಾವಣಗೆರೆಯಲ್ಲಿ ನಡೆಯುವುದು ಎಂದು NFIW ಜಿಲ್ಲಾಧ್ಯಕ್ಷರಾದ ಎಂ ಬಿ ಶಾರದಮ್ಮ ತಿಳಿಸಿದ್ದಾರೆ.
ಡಿಸೆಂಬರ್ 2 ಶನಿವಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಮಹಿಳೆಯರಿಂದ ಮಧ್ಯಾಹ್ನ 12 ಗಂಟೆಗೆ ಬೃಹತ್ ಮೆರವಣಿಗೆ ನಡೆಸಿ ನಂತರ ಜಯದೇವ ಸರ್ಕಲ್ ಹತ್ತಿರದ ನಾಟ್ಯಚಾರ್ಯ ಕುಲಕರ್ಣಿ ರಸ್ತೆಯಲ್ಲಿನ ಕಾಂ ಗೀತಾ ಮುಖರ್ಜಿ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಲಾಗುವುದು.
NFIW ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷರಾದ ಜ್ಯೋತಿ. ಎ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸುವರು, ಬಹಿರಂಗ ಸಭೆಯ ಉದ್ಘಾಟನೆಯನ್ನು NFIW ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕಾಂ ಅನಿ ರಾಜಾ ನವದೆಹಲಿ ನೆರವೇರಿಸಿ ಮಾತನಾಡುವರು.
ಮುಖ್ಯ ಅತಿಥಿಗಳಾಗಿ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಕಾವ್ಯಶ್ರೀ ಜಿ, ಸಿ ಪಿ ಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು , ಎ ಐ ಟಿ ಯು ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ ವಿಜಯ ಭಾಸ್ಕರ್, ಎ ಐ ಕೆ ಎಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ ಪಿವಿ ಲೋಕೇಶ್, ಸಿಪಿಐ ಜಿಲ್ಲಾ ಖಜಾಂಚಿ ಕಾಂ ಆನಂದರಾಜ್, ದಾವಣಗೆರೆ ಎ ಐ ಟಿ ಯು ಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್ ಜಿ ಉಮೇಶ್, ಅಂಗನವಾಡಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಜಯಮ್ಮ, ವಿದ್ಯಾರ್ಥಿ ಸಂಘಟನೆ ರಾಜ್ಯ ಅಧ್ಯಕ್ಷೆ ವೀಣಾ ಎಲ್ ವೈ,AIDRM ರಾಷ್ಟ್ರೀಯ ಮಂಡಳಿ ಸದಸ್ಯರಾದ ಮಹೇಶ್ ಕುಮಾರ್ ರಾಥೋಡ್ ಸೇರಿದಂತೆ ಇತರರು ಭಾಗವಹಿಸುವರು.ಎಂದು ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ
ಆವರಗೆರೆ ಚಂದ್ರು ತಿಳಿಸಿದ್ದಾರೆ.