ದಾವಣಗೆರೆ, ಡಿ. 13 : ಬಡ ಜನರ ಅನುಕೂಲಕ್ಕಾಗಿ ಪವರ್ ಗ್ರೀಡ್ ಕಾಪೆರ್Çರೇಷನ್ ಆಫ್ ಇಂಡಿಯಾ ಸಂಸ್ಥೆಯು ಚಿಗಟೇರಿ ಜಿಲ್ಲಾಸ್ಪತ್ರೆಗೆ ರೂ.3.35 ಕೋಟಿ ವೆಚ್ಚದಲ್ಲಿ ವಿವಿಧ ವೈದ್ಯಕೀಯ ಉಪಕರಣಗಳನ್ನು ನೀಡಿರುವುದು ಸಂತಸ ತಂದಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ. ವಿ ತಿಳಿಸಿದರು.
ಬುಧವಾರ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದ ಪವರ್ ಗ್ರೀಡ್ ಕಾಪೆರ್Çರೇಷನ್ ಆಫ್ ಇಂಡಿಯಾ ವತಿಯಿಂದ ಚಿಗಟೇರಿ ಜಿಲ್ಲಾಸ್ಪತ್ರೆಗೆ ಸಿ.ಎಸ್.ಆರ್ ಉಪಕ್ರಮದಡಿ ವೈದ್ಯಕೀಯ ಉಪಕರಣಗಳ ಹಸ್ತಾಂತರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾವಣಗೆರೆ ಸುತ್ತಮುತ್ತಲಿರುವ 5 ಜಿಲ್ಲೆಗಳಿಂದ ಒಳರೋಗಿ ಹಾಗೂ ಹೊರರೋಗಿ ವಿಭಾಗಕ್ಕೆ ಸಾರ್ವಜನಿಕರು ಬಂದು ಉತ್ತಮ ಚಿಕಿತ್ಸೆ ಪಡೆಯಲು ಪವರ್ ಗ್ರಿಡ್ ನವರತ್ನ ಕಂಪನಿಯಿಂದ ನೀಡಲಾದ ವೈದ್ಯಕೀಯ ಉಪಕರಣಗಳು ತುಂಬಾ ಸಹಕಾರಿಯಾಗಿದೆ. ಉತ್ತಮ ಚಿಕಿತ್ಸೆಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ಈ ಯಂತ್ರೋಪಕರಣಗಳನ್ನು ಚಿಗಟೇರಿ ಆಸ್ಪತ್ರೆಗೆ ನೀಡಿದೆ ಎಂದರು.
ಪವರ್ ಗ್ರೀಡ್ ಸಂಸ್ಥೆಯು ಬಡ ಜನರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ಹೊಸ ಅಲ್ಟ್ರಾ ಸೌಂಡ್ ಯಂತ್ರ, ಲೆಪೆÇ್ರೀಸ್ಕೋಪಿ, ಎಂಡೋಸ್ಕೋಪಿ, ಎಕ್ಸ್ ರೇ ಹಾಗೂ ರಕ್ತ ಭಂಡಾರಕ್ಕೆ ಬೇಕಾದಂತಹ ಸಾಮಗ್ರಿಗಳನ್ನು ನೀಡಿ, ರೋಗಿಗಳ ಚಿಕಿತ್ಸೆ ಮಟ್ಟವನ್ನು ಸುಧಾರಿಸಲು ಪವರ್ ಗ್ರೀಡ್ ಸಂಸ್ಥೆಯು ಉತ್ತಮ ಕಾರ್ಯ ನಿರ್ವಹಿಸಿದೆ ಎಂದು ಅವರು ಪ್ರಶಾಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ವಾರ್ಡ್‍ಗಳಿಗೆ ತೆರಳಿ ವಿವಿಧ ವೈದ್ಯಕೀಯ ಉಪಕರಣಗಳ ಗುಣಮಟ್ಟ ಪರಿಶೀಲಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್. ಷಣ್ಮುಖಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಾಧಿಕಾರಿ ಡಾ. ನಾಗೇಂದ್ರಪ್ಪ, ಪವರ್ ಗ್ರೀಡ್ ಕಾಪೆರ್Çರೇಷನ್ ಆಫ್ ಇಂಡಿಯಾದ ಡೆಪ್ಯೂಟಿ ಚೀಫ್ ಜನರಲ್ ಮ್ಯಾನೇಜರ್ ಮಿಥಿಲೇಶ್ ಕುಮಾರ್, ಹಿರಿಯೂರಿನ ಪವರ್ ಗ್ರೀಡ್ ಕಾಪೆರ್Çರೇಷನ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಹರೀಶ್ ನಾಯರ್ ಉಪಸ್ಥಿತರಿದ್ದರು