2ನೆಯ ವಯಸ್ಸಿಗೆ ತಂದೆ ಕಳೆದುಕೊಂಡರೂ, ದ್ವಿತೀಯ ಪಿಯುಸಿಯಲ್ಲಿ ಎರೆಡೆರಡು ಬಾರಿ ಫೇಲ್ ಆದರೂ, ಇಡೀ ಶಿಕ್ಷಣವನ್ನು ಕನ್ನಡದಲ್ಲಿ ಪಡೆದರೂ ಐಎಎಸ್ ಪಾಸು ಮಾಡಿದ ಶಾಂತಪ್ಪ ಕುರುಬರ್!
ತಂದೆ ತೀರಿ ಹೋದ ಮೇಲೆ ಕೂಲಿ ಕೆಲಸ ಮಾಡಿಕೊಂಡು ತಾಯಿಗೆ ಆಸರೆ ಆಗಿ, ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ಎತ್ತರ ತಲುಪಿದ ಸಾಧಕರು ನೀವು.
ನಿಜಕ್ಕೂ ನೀವು ಅತ್ಯದ್ಬುತ ಸಾಧನೆ ಮಾಡಿದ್ದೀರಾ.
ನಮ್ಮ ಇಂದಿನ ಮಕ್ಕಳು 2-3 ಅಂಕ ಕಡಮೆ ಬಂದರೂ ಆತ್ಮಹತ್ಯೆ ದಾರಿ ತುಳಿಯುತ್ತಾರೆ. ಅವರಿಗೆ ನೀವು ಆದರ್ಶಪ್ರಾಯ ಆಗಿದ್ದೀರಿ.
ಇನ್ನು ಕನ್ನಡ ಮೀಡಿಯಂ ಓದಿದರೆ ಮುಂದೆ ಕಷ್ಟ ಎಂದು ಹುಸಿ ಸುಳ್ಳು ಹೇಳೋರ ಬಾಯಿ ಸಹ ಮುಚ್ಚಿಸಿದ್ದೀರಿ.
ಬ್ಯಾಂಕ್ ನೌಕರಿ ಸಿಕ್ತು, ಹಾಲಿ ಪಿಎಸ್ಐ ಆಗಿದ್ದೀರಿ. ಆದರೂ ತಾಯಿ ಆಸೆಯಂತೆ ನಾಲ್ಕು ಬಾರಿ ಐಎಎಸ್ ನಲ್ಲಿ ಫೇಲ್ ಆದರೂ ಕೊನೆಯ ಬಾರಿಗೆ ಕನಸು ನನಸು ಮಾಡಿದ ನೀವು ನಿಜಕ್ಕೂ ಛಲದಂಕ ಮಲ್ಲನೆ.
ಸ್ನೇಹಿತರೇ ಇವರ ಕುರಿತು ಹೆಚ್ಚು ಹೆಚ್ಚು ಶೇರ್ ಮಾಡಿ.
ಹ್ಞಾಂ ಇನ್ನೊಂದ್ ವಿಷಯ ಮರೆತಿದ್ದೆ. ಅದೇನೆಂದರೆ ಇವರು ಬೆಂಗಳೂರು ಪೊಲೀಸ್ ನಲ್ಲಿ ಕೆಲ್ಸ ಮಾಡುವಾಗ ತುಮಕೂರು ರಸ್ತೆ ಗುರುಗುಂಟೆ ಪಾಳ್ಯ ಬಳಿ ಬಸ್ ನಿಲ್ದಾಣದ ಪಕ್ಕ ಮಹಿಳೆಯರ ಕಷ್ಟ ನೋಡಲಾರದೆ ಸ್ವಂತ ಖರ್ಚಿನಲ್ಲಿ 10 ಸಂಚಾರಿ ಶೌಚಾಲಯ ಇರಿಸಿದ ಮಹನೀಯ ಇವರು.
ಇವರಿಗೊಂದು ಬಿಗ್ ಸಲ್ಯೂಟ್ ಸಾಮಾಜಿಕ ಜಾಲತಾಣದ ಅಭಿಮಾನಿಗಳು