Saturday, December 21, 2024
Homeರಾಜಕೀಯಅಹಿಂದ ವರ್ಗದ ಭವಿಷ್ಯದ ನಾಯಕ ಶ್ರೀ ಜಿಬಿ.ವಿನಯ್ ಕುಮಾರ್ ರವರಿಗೊಂದು ಬಹಿರಂಗ ಸಲಹೆ.

ಅಹಿಂದ ವರ್ಗದ ಭವಿಷ್ಯದ ನಾಯಕ ಶ್ರೀ ಜಿಬಿ.ವಿನಯ್ ಕುಮಾರ್ ರವರಿಗೊಂದು ಬಹಿರಂಗ ಸಲಹೆ.


ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಸುಮಾರು ಒಂದುವರ್ಷದಿಂದೀಚೆಗೆ ಬಹು ಚರ್ಚೆಯಲ್ಲಿರುವ ಹೆಸರೆಂದರೆ ಇನ್ಸೈಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕರಾದ ಜಿ.ಬಿ.ವಿನಯ್ ಕುಮಾರ್ ರವರು.
ಜಿ.ಬಿ.ವಿನಯ್ ಕುಮಾರ್ ಸೋಷಿತ ಸಮುದಾಯದ ನೊಂದು ಬೆಂದು ಅನೇಕ ಏಳುಬೀಳುಗಳೊಂದಿಗೆ ಬದುಕುಸಾಗಿಸಿ ಅನೇಕ ಕಷ್ಟ,ನಷ್ಟ,ನೋವು,ನಲಿವುಗಳ ಅನುಭವಗಳೊಂದಿಗೆ ಬೆಳೆದ ವಿದ್ಯಾವಂತ,ವಿಚಾರವಂತ,ಪ್ರಜ್ಞಾವಂತ ಮತ್ತು ಜನಪರ,ಪ್ರಗತಿಪರ,ಅಭಿವೃದ್ಧಿ ಪರ ಚಿಂತಕ ಅಷ್ಟೇಅಲ್ಲಾ ಸಮಾಜದಲ್ಲಿಯ ಅನೇಕ ಅಂಕುಡೊಂಕುಗಳನ್ನು ಸಾದ್ಯವಾದಷ್ಟು ಸರಿಪಡಿಸಬೇಕು ಹಾಗೂ ಬಡವ,ಕೂಲಿಕಾರ,ಅಸಹಾಯಕರ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಉನ್ನತ ಮಟ್ಟದ ಅಧಿಕಾಸ್ಥಾನದಲ್ಲಿ ನೋಡಬೇಕೆಂಬ ಹಂಬಲ ಮತ್ತು ಆಕಾಂಕ್ಷೆಯನ್ನುಹೊತ್ತು ಐಎಎಸ್ ನಂಥ ಉನ್ನತ ಶಿಕ್ಷಣವನ್ನು ನೀಡಿ ದಲಿತ,ಹಿಂದುಳಿದ,ಅಲ್ಪಸಂಖ್ಯಾತ ಹಾಗೂ ಜಾತಿ,ವರ್ಗ ರಹಿತವಾಗಿ ಎಲ್ಲಾ ಬಡವರ ಮಕ್ಕಳು ಶಿಕ್ಷಣ ವಂತರನ್ನಾಗಿಸಲು ಪಣ ತೊಟ್ಟಿರುವ ವಿನಯ್ ಕುಮಾರ್ ದೊಂದೇ ಕಣಸು ಸಮಾಜ ಬದಲಾಗಬೇಕು ಗೌರವಯುತವಾಗಿ ಬದುಕಬೇಕು ಉತ್ತಮ ಬದುಕು ಕಟ್ಟಿಕೊಳ್ಳುವ ಶಿಕ್ಷಣ ಉದ್ಯೋಗ ಪಡೆಯಬೇಕು.ರೈತಾಪಿವರ್ಗಕ್ಕೆ ಕಾಲಕಾಲಕ್ಕೆ ಸಹಾಧನ,ವ್ಯವಸಾಯದ ಉಕಕರಣಗಳು ಹಾಗೂ ಬಿತ್ತನಿಯ ಬೀಜ,ಗೊಬ್ಬರ,ರಾಸಾಯಣಿಕ ಔಷಧಗಳು ಮನೆಬಾಗಿಲಿಗೆ ಅಧಿಕಾರಿಗಳು ತಲುಪಿಸಬೇಕೆನ್ನುವುದಾಗಿದೆ.
ಇಂಥ ಹತ್ತು ಹಲವಾರು ಸಾಮಾಜಿಕ ಕಳಕಳಿಯ ಸುಧಾರಣೆಯ ಕಣಸು ಹೊತ್ತು ತನ್ನ ಬಾಲ್ಯದ ದಿಗಳನ್ನು ಕಳೆದ ದಾವಣಗೆರೆಗೆ ಬಂದು ಸಮಾಜಪರವಾದ ಕೆಲಸದಲ್ಲಿ ತೊಡಗಿಕೊಂಡರು.ಅವರ ಸಮೀಪದ ಸಹವರ್ತಿಗಳು ಈತನ ಚಲನವಲನ ಹಾಗೂ ಸಾಮಾಜಿಕ ಸುಧಾರಣೆಯ ತುಡಿತವನ್ನು ಕಂಡು ಅವರ ಕೆಲಸಕಾರ್ಯಗಳಿಗೆ ಬೆಂಬಲಿಸ ತೊಡಗಿದರು.ಇದರಿಂದ ಇನ್ನಷ್ಟು ಉತ್ಸಾಹಿಕನಾಗಿ ವಿನಯ್ ಕುಮಾರ್ ತನ್ನ ಬಡತನದ ದಿನಗಳನ್ನು ನೆನಪಿಸಿಕೊಂಡು ಜನರು ತನ್ನನ್ನು ಹೊಡುಕಿಕೊಂಡು ಬರುವುದು ಬೇಡ ತಾನೇ ಜನರಬಳಿಗೆ ಹೋಗಿ ಅವರ ನೈಜ ಸ್ಥಿತಿಗತಿಗಳನ್ನು ಕಂಡು ಸಾಧ್ಯವಾಷ್ಟು ಮಟ್ಟಿಗೆ ಸಹಾಯ ಸಹಕಾರ ಮತ್ತು ಸರ್ಕಾರದ ಸವಲಭ್ಯಗಳನ್ನು ಕೊಡಿಸಲು ಅನುಕೂಲವಾಗುತ್ತದೆಂದು ಜಿಲ್ಲೆಯ ನೂರಾರು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಜನರ ಸಮಸ್ಯೆಗಳಿ ಸ್ಪಂದಿಸಿ ಜನಮನ ಗೆಲ್ಲುವತ್ತಧಾಪುಗಾಲು ಹಾಕಿದರು.
ಇವರ ಗ್ರಾಮವಾಸ್ತವ್ಯ,ಗ್ರಾಮ ಭೇಟಿ ನಂತರ ಪ್ರತಿಗ್ರಾಮಗಳಿಗೆ ಪಾದಯಾತ್ರೆ ಜಿಲ್ಲೆಯ ಜನರ ಮನತಟ್ಟಿದ್ದು ಅಷ್ಟೇ ಅಲ್ಲದೆ ರಾಜ್ಯದಾದ್ಯಂತ ವಿನಯ್ ಕುಮಾರ್ ರವರಿಗಿರುವ ಸಮಾಜಪರ ಮಿಡಿಯುವ ಮನದ ಕುರಿತು ಸುದ್ದಿ ಮಾಧ್ಯಮಗಳೂ ಸೇರಿದಂತೆ ಜನರ ಮನಮುಟ್ಟಿದವು.ವಿನಯ್ ಕುಮಾರ್ ತಮ್ಮ ಸಹಾಯ ಹಸ್ತ ಚಾಚಲು ಪ್ರತಿಭಾವಂತ ವಿದ್ಯಾರ್ಥಿಗಳಿಗೆ,ಕ್ರೀಡಾಪಟುಗಳಿಗೆ,ಸಾಂಸ್ಕೃತಿಕ ಸಂಘಸಂಸ್ಥೆಗಳಿಗೆ,ವಿಕಲಚೇತನರಿಗೆ ಹಾಗೂ ಲಾರಿ,ಅಟೋ ಚಾಲಕರುಗಳಿಗೆ ಸಮವಸ್ತ್ರ,ಉಪಕರಣ,ರಹಾಯಸಹಕಾರ ಮಾಡಲಾರಂಭಿಸಿದರು.
ಇದೇ ಸಂದರ್ಭದಲ್ಲಿ ಲೋಕ ಸಭೆ ಚುನಾವಣೆಯು ಹತ್ತಿರ ಬರಲಾರಂಭಿಸಿತು.ಆಗಲೇ ಸುರುವಾಯ್ತು ರಾಜಕಾರಣಿಗಳ ಒಳ ಸುಳಿವು ಮತ್ತು ಜನಪದದಂತೆ ಜನರ ಪರವಿರೋಧದ ಮಾತುಗಳು. ಕೆಲವರ ಬಾಯಲ್ಲಿ ಯೋ ಆತ ರಾಜಕೀಯದ ಮೇಲೆ ಕಣ್ಣಿಟ್ಟು ಜನರನ್ನು ಓಲೈಸಿ ಕೊಳ್ಳುತ್ತಿದ್ದಾನೆ.ಎಂದು ಆತ ಸಿದ್ದರಾಮಯ್ಯನವರ ಹಿಂಬಾಲಕ ಈ ಬಾರಿ ಕಾಂಗ್ರೆಸ್ ನಿಂದ ದಾವಣಗೆರೆಯ ಲೋಕಸಭೆಗೆ ಸ್ಪರ್ಧೆ ಮಾಡ್ತಾರೆ ಎಂಬ ಊಹಾಪೂಗಳ ಮಾತುಗಳು ಕೇಳತೊಡಗಿದವು ಇವು ಎಷ್ಟರ ಮಟ್ಟಿಗೆ ಪ್ರಚಾರವಾವುಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯನರಿಗೆ,ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರಿಗೆ ರಾಜ್ಯದ ಬಹುತೇಕ ಕಾಂಗ್ರೆಸ್ ನಾಯಕರ ಕಿವಿಗೆ ತಲುಪಿದವು ಅಷ್ಟೇಅಲ್ಲದೆ ದೇಹಲಿಯ ನಾಯಕರ ಕಿವಿಯತಲುಪುವವರೆಗೆ ಜೋರಾಗಿ ಕೇಳಿದವು.
ಈ ವಿನಯ್ ಕುಮಾರ್ ಅಹಿಂದ ಪರ,ವಿದ್ಯಾರ್ಥಿ ಯುವಜನಪರ,ವಿಕಲಚೇತನ,ಕ್ರೀಡಾಪಟುಗಳ ವಿಕಲಚೇತನರ ದೀನದಲಿತರ ಪರಕೆಲಸಮಾಡುತ್ತಾ ನಿನ್ನೆ ಬಂದವ ನಮಗೇ ಎದುರಾಗಿ ನಮಗೆ ರಾಜಕೀಯ ಹಿನ್ನಡೆಮಾಡುತ್ತಾನೆಂದು ಅಸೂವೆ ಹುಟ್ಟಿಸಿಕಡ ಬಹುತೇಕ ಜಿಲ್ಲೆಯ ಕಾಂಗ್ರೆಸ್ ನಾಯಕರು ವಿನಯ್ ಕುಮಾರ್ ವಿರುದ್ಧವಾಗಿ ಮಾತನಾಡಲಾರಂಭಿಸಿದ್ದೂ ಅಲ್ಲದೆ ಶತಾಯ ಗತಾಯ ಆತನಿಗೆ ರಾಜಕೀಯವಾಗಿ ಬೆಳೆಯಲು ಬಿಡಬಾರದು ಒಂದುವೇಳೆ ರಾಜಕೀಯವಾಗಿ ಆತನಿಗೆ ಬೆಂಬಲಿಸಿದರೆ ನಾವು ಆತನ ಹಬಾಲಕರಾಗಬೇಕಾಗುತ್ತದೆಂದು ಉಹಿಸಿ ಆತನಿಗೆ ಯಾವುದೇ ಕಾರಣಕ್ಕೂ ಟಿಕೇಟ್ ಕೊಡಿಸಬಾರದೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇರ ಕಿವಿಕಚ್ಚಿ ಗಪ್ ಚುಪ್ ಕುಳಿತ ಹಿರಿಯರಾಜಕಾರಣಿಯೊಬ್ಬರ ಪಿತೂರಿಂದ ವಿನಯ್ ಕುಮಾರ್ಗೆ ಟಿಕೇಟ್ ತಪ್ಪಿಸಲಾಯಿತು.ಅಲ್ಲಿಯ ವರೆಗೆ ವಿನಯ್ ಕುಮಾರ್ ಜೊತೆಗೆ ನಿಂತು ಅವರ ಎಲ್ಲಾ ಜನಪರ ಕೆಲಸಕಾರ್ಯಗಳಿಗೆ ಕೈಜೋಡಿಸಿ ಉತ್ತಮ ಪ್ರಚಾರ ಮಾಡಿದ ವಿನಯ್ ಕುಮಾರ್ ರವರ ನೈಜ ಹಾಗೂ ಹಿತೈಸಿಗಳನ್ನು ಬದಿಗೊತ್ತಿ ಹೈಜಾಕ್ ಮಾಡಿ ಬಂದು ವಕ್ಕರಿಸಿದ ಡೋಂಗಿ,ಸ್ವಾರ್ಥ,ಅಸೂವೆ,ಆಶಾವಾದಿಗಳು ವಿನಯ್ ಅಂಗಳಕ್ಕೆ ಧುಮಿಕಿ ವಿನಯ್ ಕುಮಾರ್ ರವರನ್ನು ಜಿಲ್ಲೆಯ ರಾಜಕೀಯ ಕಳನಾಯಕನನ್ನಾಗಿಸುವಂತೆ ಬಿಂಬಿಸಿ ವಿನಯ್ ಕುಮಾರ್ಗೆ ಜೈಕಾರ ಹಾಕಲಾರಂಭಿಸಿದರು.ಡೋಂಗಿ ಜೈಕಾರಗಳ ಮದ್ಯ ನೈಜ ಜೈಕಾರ ವಿನಯ್ ಕುಮಾರ್ಗೆ ಕೇಳಿಸದಾಯಿತು.
ಹಾಗೆನೆ ವಿನಯ್ ಕುಮಾರ್ ಮುಂದೆ ಹೊಗಳಿಹಿಂದೆ ಆಡಿಕೊಳ್ಳುವವರ ಕಪಿ ಮುಷ್ಠಿಯಲ್ಲಿ ವಿನಯ್ ಕುಮಾರ್ ಸಿಲುಕಿ ಅವರ ತಾಳಕ್ಕೆ ಇವರು ಹೆಜ್ಜೆಹಾಕಲಾರಂಭಿಸಿದರು.ಹಾಗೂ ಹೀಗೂ ಏನೋ ಪಕ್ಷೇತರ ಸ್ಪರ್ಧೆ ಮಾಡಿ ಸೋತರೂ ಕೂಡಾ ಜನಮನ ಒಲಿಸಿಕೊಂಡರು. ಅವರ ಪ್ರಸ್ತುತ ನಡಿಗೆಯನ್ನು ರಾಜ್ಯದ ಹಲವಾರು ಜಿಲ್ಲೆಗಳಿಗೆ ವಿಸ್ತರಿಸಿಕೊಳ್ಳಲು ಹೊರಟಿದ್ದಾರೆ ಸಂತಸದ ವಿಷಯ.ಆದರೆ ಅದರ ಕಾರ್ಯವೈಖರಿ ಬದಲಾಗಬೇಕಿದೆ.ಯಾವುದೋ ಸಂಘ,ಸಂಸ್ಥೆ, ವ್ಯಕ್ತಿಗಳ ಅನತಿಯಂತೆ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳದೆ ತಾವು ನಂಬಿರುವ ಸಿದ್ಧಾಂತ ಮತ್ತು ಧೇಯೋದ್ದೇಶಗಳಿಗನುಗುಣವಾಗಿ ತಾವು ಮೊದಲು ಪಡೆದ ರಾಜಕೀಯ ಪಕ್ದ ಸದಸ್ಯತ್ವವನ್ನು ಉಳಿಸಿಕೊಂಡು ಆ ಪಕ್ಷದ ಅಡಿಯಲ್ಲಿ ಕಾರ್ಯಚಟುವಟಿಕೆಗಳನ್ನು ಮಾಡುವತ್ತ ಬದಲಾಯಿಸಿಕೊಳ್ಳಬೇಕೆಂದು ನನ್ನ ವಯಕ್ತಿಕ ಅನಿಸಿಕೆ.ಪಕ್ಷದಲ್ಲಿ ಈಗ ತಾತ್ಕಾಲಿಕವಾಗಿ ಹಿನ್ನಡೆಯಾಗಿರಬಹುದು ಮುಂದೆ ಭವಿಷ್ಯವಿದೆ.ತಮ್ಮ ಗಮನಕ್ಕೆ ತರಬಯಸುತ್ತೇನೆ ಮೊದಲು ತಾವು ಪಕ್ಷದ ಹೆಸರಲ್ಲಿ ಪ್ರವಾಸಮಾಡುವಾಗ ಸಿಕ್ಕ ಜನಬೆಂಬಲವನ್ನು ಜ್ಞಾಪಿಸಿಕೊಳ್ರಿ. ವಯಕ್ತಿಕ ಮತ್ತು ಸಂಘಸಂಸ್ಥೆಗಳ ಜೊತೆ ಇರುವುದರಜೊತೆಜೊತೆಯಾಗಿ ಪಕ್ಷದಲ್ಲಿ ಗುರುತಿಸಿಕೊಂಡು ಕಾರ್ಯಚಟುವಟಿಕೆಗಳು ರಾಜಕೀಯ ಬೆಳವಣಿಗೆಗೆ ರಹದಾರಿಯಾಗುತ್ತದೆ.ಮನೆಗೆ ಬೇಡವಾದವನು ಊರಿಗೊಬ್ಬ ಉಡಾಳ ಇದ್ದೇಇರ್ತಾನಂತೆ ಆತನಿಂದ ತನಗೂ ಸೇರಿದಂತೆ ಯಾರಿಗೂ ಒಳಿತಾಗಲ್ವಂತೆ ಅಂಥೊಬ್ಬಿಬ್ಬರನ್ನು ನಂಬಿ ದುಡುಕುವುದಕಿಂತ ಎಲ್ಲರಡೊಡಗೂಡಿ ಈಜುವುದೇ ಒಂದು ಉತ್ಸಾಹದಾಯಕ ಕೆಲಸ.
ಆದ್ದರಿಂದ ನನ್ನ ವಯಕ್ತಿಕ ಸಲಹೆ ಏನಂದರೆ ಎಲ್ಲರೊಳಗೊಬ್ಬ ನೀನಾಗು ಪಕ್ಷದೊಳಗೆ ನುಗ್ಗಿ ಪಕ್ಷದ ಕೆಲಸಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿರಿ,ಪಕ್ಷದ ಹೆಸರಲ್ಲಿ ಕಾರ್ಯಕ್ರಮಗಳನ್ನು ರೂಪಿಸಿರಿ,ಪಕ್ಷ ಮುಖಂಡರುಗಳನ್ನೂ ಅಹ್ವಾನಿಸಿರಿ ಬರುವುದು ಬಿಡುವುದು ಅವರ ವಯಕ್ತಿಕ ವಿಚಾರ ಆದರೆ ಪಕ್ಷ ಮುಖ್ಯ.ತಮಗೆ ಸ್ಥಳಿಯವಾಗಿ ಅಲ್ಲದಿದ್ದರೂ ರಾಜ್ಯದ ಮುಖಂಡರ ನಿರಂತರ ಸಂಪರ್ಕದೊಂದಿಗೆ ಕಾರ್ಯಗಳನ್ನು ನಿರ್ವಹಿಸಿರಿ.
ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಿದ್ದೀರಿ ಅದನ್ನ ಉಳಿಸಿಕೊಳ್ರಿ.ಪಕ್ಷ ಅದು ಇದು ಎಂದು ನಾನು ಹೆಸರಿಸಲ್ಲಾ ತಮಗೆ ಸ್ವಾತಂತ್ರವಾಗಿ ಸಹಕಾರ ನೀಡುವ ಯಾವುದರಲ್ಲಾದರೂ ಇರಬಹುದು ಒಟ್ಟಾರೆ ನನ್ನ ಸಲಹೆ ಪಕ್ಷ ಮುಖ್ಯ. ಹಿಂಡನಗಲಿದ ಕುರಿ ತೋಳದಬಾಯಿಗೆ ಎಂದು ನಮ್ಮ ಹಿರಿಕರ ಹಿತ ನುಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments