Saturday, December 21, 2024
Homeರಾಜಕೀಯಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಚರಿತ್ರಾರ್ಹವಾಗಿದೆ ; ಹೆಚ್.ಆಂಜನೇಯ

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಚರಿತ್ರಾರ್ಹವಾಗಿದೆ ; ಹೆಚ್.ಆಂಜನೇಯ

ಇತ್ತೀಚೆಗೆ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರ ಗೆಲುವು ಚರಿತ್ರೆಯನ್ನು ನಿರ್ಮಾಣ ಮಾಡಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಅವರು ತಿಳಿಸಿದರು.

ಪಟ್ಟಣದ ಶ್ರೀ ಗಣಪತಿ ಕಲ್ಯಾಣ ಮಂಟಪ ದಲ್ಲಿ ಆಯೋಜಿಸಿದ್ದ “ನೂತನ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಅವರಿಗೆ ಸನ್ಮಾನ ಮತ್ತು ಲೋಕಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರಿಂದ ಮತದಾರರಿಗೆ ಕೃತಜ್ಞತಾ ಸಲ್ಲಿಕೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಆಂಜನೇಯ ಅವರು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಸೋಲುಗಳಿಂದ ನಿರಾಸೆಯಲ್ಲಿದ್ದ ಜಿಲ್ಲೆಯ ಕಾಂಗ್ರೆಸ್ಸಿಗರಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಗೆಲುವು ನವಚೈತನ್ಯವನ್ನು ಮೂಡಿಸಿದಂತಾಗಿದ್ದು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟು ಡಿ.ಟಿ.ಶ್ರೀನಿವಾಸ್ ಅವರಿಗೆ ಮೊದಲ ಮತ್ತು ಎರಡನೇ ಪ್ರಾಶಸ್ತ್ಯದ ಮತ ಚಲಾಯಿಸಿ ಚರಿತ್ರಾರ್ಹವಾದ ಗೆಲುವಿಗೆ ಕಾರಣಕರ್ತರಾದ ಎಲ್ಲ ಶಿಕ್ಷಕರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಚಂದ್ರಪ್ಪ ಅವರ ಸೋಲು ನಿಜಕ್ಕೂ ಆಘಾತ ಮೂಡಿಸಿತ್ತು. ಊಹಿಸಲಾಗದ ಸೋಲಾಗುವುದರೊಂದಿಗೆ ಎಲ್ಲರಿಗೂ ತುಂಬಾ ಬೇಸರವಾಗಿತ್ತು. ನಾನು ಸೋತಿದ್ದೆ. ಚಂದ್ರಪ್ಪನವರೂ ಸೋತದ್ದು ತೀವ್ರ ನಿರಾಸೆಯ ಭಾವವನ್ನು ಮೂಡಿಸಿತ್ತು. ಇಂತಹ ಸಂದರ್ಭದಲ್ಲಿ ಲಭಿಸಿದ ಈ ಚರಿತ್ರಾರ್ಹವಾದ ಗೆಲುವು ಎಲ್ಲ ಕಾರ್ಯಕರ್ತ ಮುಖಂಡರಲ್ಲಿ ಹೊಸ ಚೈತನ್ಯದ ಚಿಲುಮೆಯನ್ನು ಮೂಡಿಸಿದಂತಾಗಿದೆ.

ಈ ಗೆಲುವಿನಲ್ಲಿ ಜಿಲ್ಲಾ ಸಚಿವರು ಸೇರಿದಂತೆ ಎಲ್ಲಾ ಕ್ಷೇತ್ರಗಳ ಶಾಸಕರು, ಮುಖಂಡರು, ಕಾರ್ಯಕರ್ತರು, ಶಿಕ್ಷಕರ ಕೊಡುಗೆ ಅಪಾರವಾಗಿದೆ. ವಿಶೇಷವಾಗಿ ಶ್ರೀನಿವಾಸ್ ಗೆಲುವಿನಲ್ಲಿ ಅವರ ಒಲವಿನ ಧರ್ಮಪತ್ನಿ ಮಾಜಿ ಸಚಿವ‌ ಕೃಷ್ಣಪ್ಪ ಅವರ ಮಗಳು, ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಅವರ ಕೊಡುಗೆಯೂ ಅಪಾರವಾಗಿದ್ದು ಅವರಿಗೂ ಕೃತಜ್ಞತೆಗಳನ್ನು ತಿಳಿಸಿದರು.

ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಅವರ ತಂದೆ ಕೃಷ್ಣಪ್ಪ ಅವರು ಶಾಸಕ, ಸಚಿವರಾಗಿ ಅಪಾರ ಜನಸೇವೆ ಮಾಡಿದ್ದರು. ಹಲವಾರು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಮೂಲಕ ಸದಾ ಸಮಾಜ ಸೇವೆಯಲ್ಲಿದ್ದವರು. ಇಂತಹ ಕುಟುಂಬದ ಮಗಳು ಮತ್ತು ಅಳಿಯರಿಂದ ಜನರಿಗೆ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಮತ್ತಷ್ಟು ಉತ್ತಮ ಸೇವೆ ಲಭಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಡಿ.ಟಿ. ಶ್ರೀನಿವಾಸ್ ಅವರು ಕೂಡ ಉತ್ತಮ ಅಧಿಕಾರಿಯಾಗಿ, ಜನಸೇವಕರಾಗಿ, ಹಲವು ಪದವಿ ಪಡೆದಿರುವ ವ್ಯಕ್ತಿಯಾಗಿದ್ದು ಕಾಂಗ್ರೆಸ್ ಪಕ್ಷದಿಂದ ಉತ್ತಮ ಆಯ್ಕೆಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಕೂಡ ಅವರ ಗೆಲುವಿಗೆ ಸಹಕಾರಿಯಾಯಿತು. ಈ ಕಾರಣದಿಂದಲೇ ಅವರಿಗೆ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಬೆಂಬಲಿಸಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾದವ ಸಮುದಾಯದ ಜನರಿದ್ದು, ಈ ಇಬ್ಬರೂ ಕೂಡ ಆ ಸಮುದಾಯದ ಪ್ರತಿನಿಧಿಗಳಾಗಿ ಸಮರ್ಥವಾಗಿ ಸಮುದಾಯವನ್ನು ಮುನ್ನಡೆಸುವ ಸಾಮರ್ಥ್ಯ ಉಳ್ಳವರಾಗಿದ್ದು ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

ಮುಂದುವರಿದ ಮಾತನಾಡಿದ ಮಾಜಿ ಸಚಿವರು ಹಲವು ವರ್ಷಗಳಿಂದ ಗೆಲುವು ಸಾಧಿಸುತ್ತಲೇ ಬಂದಿದ್ದ ಬಿಜೆಪಿ ಶಾಸಕರು ಶಿಕ್ಷಕರ ಕ್ಷೇತ್ರದಲ್ಲಿ ಯಾವುದೇ ರೀತಿಯ ಗಣನೀಯವಾದ ಸುಧಾರಣೆಗಳನ್ನು ಮಾಡಿರಲಿಲ್ಲ. ಸಾಕಷ್ಟು ಸಮಸ್ಯೆಗಳು ಇಂದಿಗೂ ಜೀವಂತವಾಗಿರುವುದು ವಿಷಾದದ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ತಿಳಿಸಿದರು.

ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ತುಂಬ ವರ್ಷಗಳಿಂದ ಕೆಲಸ ಮಾಡಿದವರನ್ನು ಖಾಯಂಗೊಳಿಸಬೇಕು. ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು, ಓಪಿಎಸ್ ಸಮಸ್ಯೆ, ಶಿಕ್ಷಕರ ನೇಮಕಾತಿ ಮುಂತಾದ ಹಲವು ವಿಷಯಗಳ ಬಗ್ಗೆ ಮುಂದಿನ ದಿನಗಳಲ್ಲಿ ನೂತನ ವಿಧಾನ ಪರಿಷತ್ ಸದಸ್ಯರು ಮತ್ತು ನಮ್ಮ ಕಾಂಗ್ರೆಸ್ ಸರ್ಕಾರ ಬೆಳಕು ಚೆಲ್ಲುವ ಪ್ರಯತ್ನ ಮಾಡಲಿದೆ ಎಂದು ತಿಳಿಸಿದರು.

ಈ ವೇಳೆ ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ಮಾಜಿ ಸಂಸದ ಶ್ರೀ ಬಿಎನ್.ಚಂದ್ರಪ್ಪ, ಮಾಜಿ ಜಿ. ಪಂ ಅಧ್ಯಕ್ಷ ಪಿ ಆರ್ ಶಿವಕುಮಾರ್ ಶಿವಪುರ, ಮಾಜಿ ಜಿ.ಪಂ ಉಪಾಧ್ಯಕ್ಷ ಶ್ರೀ ಬಿ ಗಂಗಾಧರ್, ಮಾಜಿ ಜಿ.ಪಂ ಸದಸ್ಯ ಶ್ರೀ ನರಸಿಂಹಮೂರ್ತಿ,ಹೊಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಚ್ ಟಿ.ಹನುಮಂತಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಜರ್ ಉಲ್ಲಾ ಖಾನ್,ಕೆಪಿಸಿಸಿ ಒಬಿಸಿ ವಿಭಾಗದ ಉಪಾಧ್ಯಕ್ಷ ಶ್ರೀ ಕಿರಣ್ ಕುಮಾರ್, ಕಾಂಗ್ರೆಸ್ ಮುಖಂಡರು, ಹೊಳಲ್ಕೆರೆ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಕಾಟಿಹಳ್ಳಿ ಶಿವಕುಮಾರ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಚ್ ಡಿ ರಂಗಯ್ಯ ಕಾಂಗ್ರೆಸ್ ಮುಖಂಡರಾದ ಶ್ರೀ ಕೆ ಸಿ ರಮೇಶ್, ಶ್ರೀ ಸೈಯದ್ ಸಜೀಲ್, ಸುರೇಶ್ ಪಾಡಿಗಟ್ಟೆ, ಶ್ರೀ ಚಿತ್ತಪ್ಪ ಯಾದವ್ ಸೇರಿದಂತೆ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments