ವಿಜಯಪುರ : ನಗರದ ವಿದ್ಯಾವರ್ಧಕ ಸಂಘದ ಬನ್ಸಿಲಾಲ ವಿಠ್ಠಲದಾಸ ದರಬಾರ ಪದವಿ ಮಹಾವಿದ್ಯಾಲಯ ವಿಜಯಪುರ. ಹಾಗೂ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ, ಬೆಳಗಾವಿ ಇವರ ಅಡಿಯಲ್ಲಿ 2023-2024 ನೇ ಸಾಲಿನ “ರಾಷ್ಟ್ರೀಯ ಸೇವಾ ಯೋಜನೆ ” ವಾರ್ಷಿಕ ವಿಶೇಷ ಶಿಬಿರವನ್ನು ನಗರದ ತೋರವಿ ರಸ್ತೆಯ ಹೊರವಲಯದಲ್ಲಿರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ದಿನಾಂಕ :25/06/ 2024 ರಿಂದ ದಿನಾಂಕ :01/07/2024 ರ ವರೆಗೆ ಸುಮಾರು 7 ದಿನಗಳ ಕಾಲ ಈ ವಾರ್ಷಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರು ಹಾಕುವುದರ ಮೂಲಕ ಮಾಡಿದರು. ನಂತರ
ಶ್ರೀ ರಾಜು ಕಪಾಲಿ ಎನ್ ಎಸ್ ಎಸ್ ಕಾರ್ಯಕ್ರಮದ ಅಧಿಕಾರಿಗಳು ದರಬಾರ ಮಹಾವಿದ್ಯಾಲಯ ಅವರು ಪ್ರಾಸ್ತಾವಿಕ ನುಡಿ ಮಾತನಾಡಿ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವ್ಯಕ್ಯೆತೆ ಹಾಗೂ ಸಹ ಬಾಳ್ವೆ ಬೆಳೆಯುತ್ತದೇ ಇದರಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ಹಾಗೂ ನಿಸ್ವಾರ್ಥ ಸೇವೆ ಸಮಾಧಾನ ಸಮಾಜದ ವಿವಿಧ ಸಮಸ್ಯೆಗಳು ಸ್ಪಂದಿಸುವ ವ್ಯಕ್ತಿತ್ವ ವನ್ನು ರೂಪಿಸಿಕೊಳ್ಳಲು ಸಹಾಯ ವಾಗುತ್ತದೇ ಎಂದು ಪ್ರಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಶ್ರಮದ ಡಾ. ನರೇಶಾನಂದ ಸ್ವಾಮೀಜಿಗಳು ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ಜೀವನದ ಪ್ರತಿಯೊಂದು ಹಂತದಲ್ಲಿ ನಾವು ಸೇವೆಯನ್ನು ಮಾಡಬೇಕು ಸಮಾಜದಲ್ಲಿನ ಇತರ ವ್ಯಕ್ತಿಗಳಿಗಿಂತ ನಾವು ಭಿನ್ನರಾಗಿ ಮತ್ತೊಬರಿಗೆ ಆದರ್ಶವಾಗಿ ನಮ್ಮ ಬದುಕನು ಸವಿಸಬೇಕು ಎಂದು ಶಿಬಿರಾರ್ಥಿಗಳಿಗೆ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೇ ವಹಿಸಿದ ಡಾ. ಆರ್ ಜಿ ಮಂಗಲಗಿ ಉಪಾಧ್ಯಕ್ಷರು ವಿದ್ಯಾವರ್ಧಕ ಸಂಘ ಇವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸಮಾಜದಲ್ಲಿನ ಜನರಿಗೆ ಆದರ್ಶ ವ್ಯಕ್ತಿಗಳಾಗಿ ಬದುಕ ಬೇಕು ಎಂದು ಮಾತನಾಡಿದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಎನ್ ಎಸ್ ಎಸ್ ಜಿಲ್ಲಾ ನೋಡಲ್ ಅಧಿಕಾರೀಗಳಾದ ಡಾ. ಪ್ರಕಾಶ ರಾಠೋಡ ಅವರು ಮಾತನಾಡಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಜಿಲ್ಲೆಯ ಎಲ್ಲ ಮಹಾವಿದ್ಯಾಲಯಗಳಲ್ಲಿ ದರಬಾರ ಮಹಾವಿದ್ಯಾಲಯವು ಎಲ್ಲದರಲ್ಲೂ ಪ್ರಥಮ ಸ್ಥಾನದಲ್ಲಿ , ಕಾರಣ ವಿದ್ಯಾರ್ಥಿಗಳು ಹಾಗೂ ಎಲ್ಲ ಉಪನ್ಯಾಸಕರು ಅತ್ಯಂತ ಉತ್ಸಾಹ ತುಂಬಿದ ವ್ಯಕ್ತಿಗಳಿಗಿದ್ದಾರೆ ಎಂದು ಮಾತನಾಡಿದರು. ಮತ್ತು ದರಬಾರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜೀ ಎಚ್ ಮಣ್ಣೂರ ಅವರು ಮಾತನಾಡಿ ನಮ್ಮ ಮಹಾವಿದ್ಯಾಲಯದಲ್ಲಿ ಕಳೆದ 23 ವರ್ಷಗಳಿಂದ ನಾವು ಈ ರೀತಿಯ ಶಿಬಿರಗಳನ್ನು ನಡೆಸುತ್ತಿದ್ದೇವೆ, ಇಂತಹ ಶಿಬಿರದಲ್ಲಿ ಭಾಗವಹಿಸಿ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ್ತ ಸ್ಥಾನದಲ್ಲಿ ಇದ್ದಾರೆ, ಈ ರಾಷ್ಟೀಯ ಸೇವಾ ಯೋಜನೆಯಿಂದ ನಮ್ಮ ಮಹಾವಿದ್ಯಾಲಯಕ್ಕೆ ಅನೇಕ ಪ್ರಶಸ್ತಿಗಳು ದೊರಕಿವೆ ಮುಂದಿನ ದಿನಗಳಲ್ಲಿ ನೀವು ಕೂಡ ನಮ್ಮ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಮಾತನಾಡಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ರಾಷ್ಟೀಯ ಸೇವಾ ಯೋಜನೆ ಸಹಾಯಕ ಕಾರ್ಯಕ್ರಮಾಧಿಕಾರಿಗಳಾದ ಕುಮಾರಿ,ಸುನೀತಾ ಅವರಸಂಗ ಅವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಸುಭಾಸಗೌಡ ಪಾಟೀಲ,ಮತ್ತು ಬಸವರಾಜ ಕುಂಬಾರ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.