Saturday, December 21, 2024
Homeತಂತ್ರಜ್ಞಾನಸ್ಥಳೀಯ ಕಂಪನಿಗಳ ಬಗ್ಗೆ ಅಧ್ಯಯನ ನಡೆಸಿ ಡಾ ಮಂಜುನಾಥ

ಸ್ಥಳೀಯ ಕಂಪನಿಗಳ ಬಗ್ಗೆ ಅಧ್ಯಯನ ನಡೆಸಿ ಡಾ ಮಂಜುನಾಥ

ದಾವಣಗೆರೆ: ಸಾಮಾನ್ಯವಾಗಿ ಬಿ.ಕಾಂ ವಿದ್ಯಾರ್ಥಿಗಳು ಕಂಪನಿಗಳ ವಿಷಯದಲ್ಲಿ ಹತ್ತಿರದಿಂದ ಅಧ್ಯಯನ ಮಾಡುವಂತೆ ಕಾಣುವುದಿಲ್ಲ. ಆದರೆ, ವಾಣಿಜ್ಯ ಕ್ಷೇತ್ರದಲ್ಲಿ ಅಧ್ಯಯನಕ್ಕೆ ಹೋಗುವಾಗ ಆರ್ಥಿಕ ಸಾಧನೆ, ಮಾರುಕಟ್ಟೆ ತಂತ್ರಗಳು, ಗ್ರಾಹಕ ಚಲನಗಳನ್ನು ಅರ್ಥಮಾಡಿಕೊಳ್ಳುವುದು ಅತಿದೊಡ್ಡ ಮಹತ್ವವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ, ಕಂಪನಿಗಳ ವಿಶ್ಲೇಷಣೆ ಒಂದು ಮುಖ್ಯ ಆಯಾಮವಾಗಿ ಹೊರಹೊಮ್ಮುತ್ತದೆ ಎಂದು ಡಾ ಮಂಜುನಾಥ್ ಹೇಳಿದರು

ಅವರು ಇಂದು
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಣಿಜ್ಯ ವಿಭಾಗ ಹಾಗೂ IQAC ಸಮಿತಿ ಸಹಯೋಗದಲ್ಲಿ ಅಂತಿಮ ವರ್ಷ ಬಿ.ಕಾಂ ವಿದ್ಯಾರ್ಥಿಗಳಿಗಾಗಿ “ಕಂಪನಿಗಳ ವಿಶ್ಲೇಷಣೆ” ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು

ಅವರು ವಿದ್ಯಾರ್ಥಿಗಳಿಗೆ ಕಂಪನಿಗಳ ಕಾರ್ಯನಿರ್ವಹಣೆ, ಆರ್ಥಿಕ ನಿರ್ವಹಣೆ ಮತ್ತು ವಿಶ್ಲೇಷಣೆಯ ಕುರಿತು ಸಂಭಾಷಣೆ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಬಿ.ಸಿ. ತಹಸೀಲ್ದಾರ್ ಅವರು ವಹಿಸಿಕೊಂಡಿದ್ದು,
ಕಾರ್ಯಕ್ರಮದಲ್ಲಿ IQAC ಸಂಯೋಜಕರಾದ ಪ್ರೊ. ಡಾ. ಗುರುರಾಜ ಜೇ.ಪಿ., ಗೆಜೆಟೆಡ್ ಮ್ಯಾನೇಜರ್ ಶ್ರೀಮತಿ ಗೀತಾದೇವಿ ಟಿ., ವಾಣಿಜ್ಯ ವಿಭಾಗದ ವಿಭಾಗ ಮುಖ್ಯಸ್ಥೆ ಡಾ. ಸುನಿತಾ ಕೆ.ಬಿ. ಪ್ರೊ ರೇಖಾ ಪ್ರೊ ಶಂಕ್ರೇಯ್ಯ ಪ್ರೊ ಸಿದ್ದಮ್ಮ ಅವರು ಉಪಸ್ಥಿತರಿದ್ದರು.

ಈ ತರಬೇತಿ ಕಾರ್ಯಕ್ರಮದ ಮೂಲಕ ಅಂತಿಮ ವರ್ಷ ಬಿ.ಕಾಂ ವಿದ್ಯಾರ್ಥಿಗಳಿಗೆ ಕಂಪನಿಗಳ ಬಗೆಗಿನ ಆಳವಾದ ತಿಳಿವಳಿಕೆ ಹಾಗೂ ಪ್ರಾಯೋಗಿಕ ಜ್ಞಾನವನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments