Saturday, December 21, 2024
Homeಸಾರ್ವಜನಿಕ ಧ್ವನಿಕರ್ನಾಟಕದ ಹಾಲುಮತ ಸಮಾಜದ ಬಂಧುಗಳೆಲ್ಲ ಈ ಕಡೆ ಗಮನ ಕೊಟ್ಟು ಈ ಮಾಹಿತಿಯನ್ನು ಓದಿ ತಿಳಿದು...

ಕರ್ನಾಟಕದ ಹಾಲುಮತ ಸಮಾಜದ ಬಂಧುಗಳೆಲ್ಲ ಈ ಕಡೆ ಗಮನ ಕೊಟ್ಟು ಈ ಮಾಹಿತಿಯನ್ನು ಓದಿ ತಿಳಿದು ಕೊಳ್ಳಬೇಕು.

1990 ರಿಂದ  ಕುರುಬರಿಂದ ಕುರುಬರಿಗಾಗಿ ಕಾಗಿನೆಲೆಯಲ್ಲಿ ಕನಕ ಗುರು ಪೀಠ ರಚನೆಯಾಗಿದ್ದು, 1992ರಲ್ಲಿ ಕರ್ನಾಟಕ ರಾಜ್ಯ ಎಸ್. ಬಂಗಾರಪ್ಪನವರನ್ನು, ಸಿದ್ದರಾಮಯ್ಯನವರು, H.M. ರೇವಣ್ಣರವರು, H. ವಿಶ್ವನಾಥರವರು ಹಾಗೂ ಕರ್ನಾಟಕದ ಹಾಲುಮತ ಸಮಾಜದ ಇತರೆ ಗಣ್ಯರು, ಮುಖಂಡರು ಮತ್ತು ಮಹಾರಾಷ್ಟ್ರದ ಶರದ್ ಪವರ್ ನಂತಹ ಎಲ್ಲ ಗಣ್ಯ ವ್ಯಕ್ತಿಗಳ ಮತ್ತು  ಲಕ್ಷಾಂತರ ಹಾಲುಮತ ಸಮಾಜದ ಬಂಧುಗಳೆಲ್ಲ  ಸೇರಿ ಬ್ರಹ್ಮಲೀನ ಶ್ರೀ ಬೀರೇಂದ್ರ ತಾರಾಕನಾಂದ ಪುರಿ ಸ್ವಾಮಿಯನ್ನು ಈ  ಕಾಗಿನಲೆ ಪೀಠದ ಪೀಠಾದಿಪತಿಯನ್ನಾಗಿ ಮಾಡಿ. ಪಟ್ಟಾಭಿಷೇಕ ಮಾಡುವುದರ ಮೂಲಕ ಕುರುಬರ ಕನಕ ಗುರು ಪೀಠವನ್ನು ಸ್ಥಾಪನೆ ಮಾಡಲಾಯಿತು.

ಆದರೆ  ಈ ಪೀಠಾ  ಮಾಡಿದ್ದು  ನಮ್ಮ ಹಾಲುಮತ ಸಮಾಜದ ಆಚಾರ-ವಿಚಾರ  ಬೆಳಸಬೇಕು, ಪರಂಪರೆಯನ್ನು ಉಳಿಸಬೇಕು ಎನ್ನುವ ಉದ್ದೇಶದಿಂದಲೇ ಹೊರತು ಸಮಾಜದಲ್ಲಿ ಜಗಳ ಹಚ್ಚುವುದಕ್ಕೆಲ್ಲ  ಪೀಠಾಧಿಪತಿಯಾದವರಿಗೆ ಈ ಸಂಸ್ಕಾರಗಳು ಸರಿಯಾಗಿ ಗೊತ್ತಿಲ್ಲ ಅಂದ ಮೇಲೆ ನಮಗೆ ಹೇಳಿಕೊಡುವರು ಯಾರು. 

ಈ ಕನಕ ಗುರು ಪೀಠ ರಚನೆಯಾಗಿ ಕಾರ್ಯರೂಪಕ್ಕೆ ಬರುವುದಕ್ಕೆ ಕಾರಣವಾದವರಲ್ಲಿ  ಒಬ್ಬ ವ್ಯಕ್ತಿಯಾದ ದಿ. ಕೆ. ಮಲ್ಲಪ್ಪನವರೊಂದಿಗೆ ಇದ್ದ ನನ್ನ ಒಡನಾಟದಿಂದ ಕೆಲವು ವಿಚಾರ ಮತ್ತು ಮಾಹಿತಿಯನ್ನು ನಿಮಗೆ ತಿಳಿಯ ಬಯಸುತ್ತೇನೆ.

ಈ ಕಾಗಿನೆಲೆಯಲ್ಲಿ  ಕನಕ ಗುರು ಪೀಠವಾದ ನಂತರ ಈ ಮೇಲೆ ಹೇಳಿದ ಎಲ್ಲ ಮುಖಂಡರು ಸೇರಿಕೊಂಡು ಇಡೀ ಕರ್ನಾಟಕದ ತುಂಬ  ಈ ಪೀಠವನ್ನು ನಾಲ್ಕು ಶಾಖಾ ಮಠದ ವಿಭಾಗವನ್ನಾಗಿ ಮಾಡಿ,  ಮೂಲ ಕಾಗಿನೆಲೆ ಕನಕ ಗುರುಪೀಠಕ್ಕೆ  5ವರ್ಷಕ್ಕೊಮ್ಮೆ ಒಬ್ಬ ಪೀಠಾದಿಪತಿಯನ್ನಾಗಿ ಬದಲಾವಣೆ ಮಾಡಬೇಕು ಎನ್ನುವ ಒಡಂಬಡಿಕೆಯನ್ನು ರಚನೆ ಮಾಡಿ, ಇದರ ಮೂಲ ಒಪ್ಪಿಗೆಯಂತೆ ಪರ್ಯಾಯ ಪೀಠಾದಿಪತಿಯನ್ನು ಮಾಡುವುದಕ್ಕೆ ಮುಂದುವರಿಯಲಾಯಿತು. 

1. ಬೆಳಗಾವಿ ವಿಭಾಗ, ಕಾಗಿನಲೆ ಮಠದವನ್ನು ಸೇರಿ. 
2. ಮೈಸೂರು ವಿಭಾಗ.
3. ಬೆಂಗಳೂರು ವಿಭಾಗ.
4. ಗುಲ್ಬರ್ಗ ವಿಭಾಗ.

ಈ ನಾಲ್ಕು ವಿಭಾಗಗಳನ್ನು ಮಾಡಿಕೊಂಡು, ಈ ಶಾಖಾ ಮಠದ ವಿಭಾಗಗಳಿಗೆ, ಪೂರ್ವ ಮಠದಲ್ಲಿ ಇರುವ (ಹಾಲುಮತ ಗುರು ಪರಂಪರೆಯ ಮನೆತನಗಳಲ್ಲಿ  ಪ್ರೌಢವಸ್ಥೆಯಲ್ಲಿ ಇರುವ ಹುಡುಗರನ್ನು) ವಟುಗಳನ್ನು  ಆಯ್ಕೆ ಮಾಡುವ ಸಲುವಾಗಿ, ದಾವಣಗೆರೆಯ ದಿ. ಕೆ. ಮಲ್ಲಪ್ಪನವರ ಜೊತೆಗೆ ನಮ್ಮ ದಾವಣಗೆರೆ ಜಿಲ್ಲೆಯ ಹಿರಿಯರ 
ಗುಂಪು ಒಂದು ವಟುಗಳ ಹುಡುಕಾಟದಲ್ಲಿ ಮದ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಗಂಗನರಸಿ, ನಾಗೇನಹಳ್ಳಿ, ಹರಿಹರ ನಗರ, ದಾವಣಗೆರೆಯ ತಾಲ್ಲೂಕಿನ ದೊಡ್ಡಬಾತಿ, ರುದ್ರನಟ್ಟಿ, ಜಗಳೂರು ತಾಲ್ಲೂಕಿನ ಬಿಳಿಚೋಡು, ಇವರ ಸಂಬಂಧಿಸಿದ ಮನೆಯಲ್ಲಿ ವಟುಗಳನ್ನು ಕೇಳಿದಾಗ ಇವರುಗಳು ಕಾಗಿನಲೆ ಕನಕ ಗುರುಪೀಠದ ಮಠಕ್ಕೆ ಮಕ್ಕಳನನು ನೀಡಲು ನಿರಾಕರಿಸಿದರು. 

ನಂತರ ಈಗೆ ದಾವಣಗೆರೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣಕ್ಕೆ ಪ್ರತಿ ದಿನ ಸಂಜೆ ಸಮಯದಲ್ಲಿ ದಿ. ಕೆ. ಮಲ್ಲಪ್ಪನವರು ಮತ್ತು ಹಾಲುಮತ ಸಮಾಜದವರು ಸೇರುತ್ತಿದ್ದರು, ಈ ಸಮಯದಲ್ಲಿ  ಶ್ರೀಯುತ ಮಾಳಪ್ಪ ಎನ್ನುವ ಶಿಕ್ಷಕರು, ಇವರು ಶಿಕ್ಷಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪರಿಚಯ  ಕೆ. ಮಲ್ಲಪ್ಪನವರಿಗೆಯಾಯಿತು, ಇವರಿಬ್ಬರ ಪರಿಶ್ರಮದಿಂದ  ಮತ್ತು ಪತ್ರ ವ್ಯವಹಾರ ಹಾಗೂ ಬೇಟಿಯ ಮುಖಾಂತರ,
1. ನಿರಂಜನಯ್ಯನವರು ಶ್ರೀ ನಿರಂಜನಾಂದ ಪುರಿ ಸ್ವಾಮಿಯಾದರು. ಬೆಳಗಾವಿ ವಿಭಾಗ. 
 
ಹಾಗೂ ಸಮಾಜದ ಮುಖಂಡರ ಸಹಾಯದಿಂದ, 
2. ಶ್ರೀ ಈಶ್ವರನಾಂದ ಪುರಿ ಸ್ವಾಮಿಯ, ಬೆಂಗಳೂರು ವಿಭಾಗ.

3. ಶ್ರೀ ಶಿವನಾಂದ ಪುರಿ ಸ್ವಾಮಿ, ಮೈಸೂರು ವಿಭಾಗ.

4.ಶ್ರೀ ಸಿದ್ದರಾಮನಾಂದ ಪುರಿ ಸ್ವಾಮಿ. ಗುಲ್ಬರ್ಗ ವಿಭಾಗ. 

ಶ್ರೀ ಬೀರೇಂದ್ರ ತಾರಾಕನಾಂದ ಪುರಿ ಸ್ವಾಮಿಯವರು ಬ್ರಹ್ಮಲೀನವಾದ/ಕೈಲಾಸವಾಸಿಯಾದ ನಂತರ,   ಈ ಕಾಗಿನಲೆ ಕನಕ ಗುರು ಪೀಠದ ಪೀಠಾದಿಪತಿಯಾಗಿ  ಹಾಗೂ ಬೆಳಗಾವಿ ವಿಭಾಗ ಗುರುಗಳಾಗಿ  ಶ್ರೀ ನಿರಂಜನಾಂದ ಪುರಿ ಸ್ವಾಮಿಯನ್ನು ಪೀಠಾದಿಪತಿಯಾಗಿ  ಮಾಡಿದರು, 

ಇವರು  ಈ ಕಾಗಿನಲೆ ಮಠದ ಆಡಳಿತದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಿರುವವರು ಮತ್ತು  ಈ ಮಠ ಯಾವ  ಉದ್ದೇಶಕ್ಕಾಗಿ ಮಾಡಿದ್ದಾರೆ ಎನ್ನುವುದನ್ನ ಮರೆತು ತಮಗೆ ಬೇಕಾದ ಐಷಾರಾಮಿ ಜೀವನನಡೆಸುವ ಜಾಗವನ್ನು ಉಡುಕುತ್ತಾ, ಹೊರಟಿದ್ದಾರೆ.

ಈ ಮೂಲ  ಮಠದಲ್ಲಿ ಯಾವ ರೀತಿ ಶಿಕ್ಷಣ ಮತ್ತು ಆಚಾರ-ವಿಚಾರ, ಸಂಸ್ಕಾರ ನಡೆಯುತ್ತಿದೆ  ಎಂದು ಕೇಳುವವರು ಯಾರು ಇಲ್ಲ. 

ಈ ಮಠ ಮಾಡಿದ ಹಾಲುಮತ ಸಮಾಜದ ಹಿರಿಯರು ಹಾಗೂ ರಾಜಕೀಯ ವ್ಯಕ್ತಿಗಳು  ಎಲ್ಲಿದೀರಾ ?   

ನಿಮ್ಮ ಸ್ವಾರ್ಥಕ್ಕಾಗಿ ಮಠಗಳಿಗೆ ಭೇಟಿ ನೀಡಿ, ಸ್ವಾಮಿಗಳಿಗೆ ಹಣ ನೀಡಿ, ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳವ ಮನಸ್ಥಿತಿಯವರು ನೀವು, ಕುರುಬರ ಮಠಗಳ ಬಗ್ಗೆಲ್ಲ ನೀವುಗುಳು ಯೋಚನೆ ಮಾಡಿದ್ದೀರಾ. ಯಾವ ಸ್ವಾಮೀಜಿಯವರ ಪರಿಸ್ಥಿತಿ ಹೇಗಿದೆ, ಯಾವ ಸ್ವಾಮೀಜಿಯ  ಏನೇನು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಎನ್ನುವ ವಿಷಯ. 

ನಾನು ಕಾಗಿನಲೆ ಮಠಕ್ಕೆ ಸುಮಾರು ಸರಿ ಭೇಟಿ ನೀಡಿದ್ದೇನೆ.

1. ಈ ಕಾಗಿನಲೆ ಪೀಠದ ಮಠದ ಈಗಿನ ಪರಿಸ್ಥಿತಿ ಯಜಮಾನ ಇಲ್ಲದ ಮನೆ ಇದ್ದಂತೆ ಇದೆ.

ಇಲ್ಲಿ ಶಿವಮೊಗ್ಗದ ಜಡೇ ದೇವರ ಮಠಕ್ಕೆ  ಸ್ವಾಮೀಜಿಯನ್ನು  ನೇಮಕ ಮಾಡಿದ ಸ್ವಾಮೀಜಿಯನ್ನು  ಈ ಕಾಗಿನಲೆ ಪೀಠದ ಮಠದ ನೋಡಿಕೊಳ್ಳುಲು ಬಿಟ್ಟಿದ್ದಾರೆ, ಅವರು ಯಾವಾಗಲೂ ಮೊಬೈಲನ್ನು ನೋಡಿಕೊಂಡು ಕೂತಿರುತ್ತಾನೆ, ದೊಡ್ಡ ಸ್ವಾಮೀಜಿಯ ಎಲ್ಲಿ ಎಂದು ಕೇಳಿದರೆ, ಸ್ವಾಮೀಜಿಯವರು ಮೈಲಾರದಲ್ಲಿ ಶಾಲೆ ಕಟ್ಟುಸುತ್ತಿದ್ದಾರೆ ಎಂದು ಹೇಳುತ್ತಾರೆ. 

ಈ ಕಾಗಿನಲೆ ಪೀಠದ ಮಠದಲ್ಲಿ ಪೂಜೆ ಮಾಡುವವರು ಮತ್ತು ಬಂದ ಭಕ್ತರನ್ನು ಕೇಳುವವರು- ವಿಚಾರ ಮಾಡುವವರು ಯಾರು ಇಲ್ಲದಂತಾಗಿದೆ.

ಇಲ್ಲಿ ಓದುತ್ತಿರುವ ಕೆಲವು ಹುಡುಗರಿಂದ ಈ ಮಠದಲ್ಲಿ ಪೂಜೆ ಮೂಡಿಸುತ್ತಿದ್ದಾರೆ. 

ಈ ಕನಕ ಗುರು ಪೀಠದ ಮೂಲ ಬೈಲಾದಲ್ಲಿ ಇದ್ದ ಉದ್ದೇಶ ಮತ್ತು ನಿಬಂಧನೆಗಳು ಶ್ರೀ ನಿರಂಜನಾಂದ ಪುರಿ ಸ್ವಾಮೀಜಿಯಿಂದ ತಿದ್ದುಪಡಿ ಅಗಿರುವ ಬದಲಾವಣೆ ಏನು ? ಈ ಪರ್ಯಾಯವಾಗಿ  ಮಾಡಬೇಕಾಗಿದ್ದ  ಈ ಪೀಠದ ಪೀಠಾದಿಪತಿಗಳ ಮಾಹಿತಿ ಎಲ್ಲಿ ಹೋಯಿತು ?

ಶ್ರೀ ನಿರಂಜನಾಂದ ಪುರಿ ಸ್ವಾಮಿಯವರು ಯಾಕೆ ಈ ಕಾಗಿನಲೆಯ ಮೂಲ ಕನಕ ಗುರುಪೀಠದ ಮಠವನ್ನು ಬಿಟ್ಟು ಬೇರೆ ಶಾಖ ಮಠದಲ್ಲಿ ಇರುತ್ತಾರೆ, ಇವರು ಈ ಮೂಲ ಮಠದಲ್ಲಿ ಇದ್ದು ಕಾಯಕ ಮಾಡಬೇಕು ಮತ್ತು ಇಲ್ಲೆ ಇರಬೇಕು ಎನ್ನುವುದ ಕೋಟಿ ಭಕ್ತರ ಅಶಯ ಮತ್ತು ನಿರ್ಧಾರ. 

2. ಈ ಕಾಗಿನಲೆ ಪೀಠದ ಮಠದ ಸಮಿತಿಯ ಆಡಳಿತ ಮಂಡಳಿಯಲ್ಲಿ  ಯಾರು ಯಾರು ಮತ್ತು ಎಷ್ಟು ಜನ ಇದ್ದಾರೆ ? ಇದರ ವಸ್ತುವಾರಿ ಯಾರ ಕೈಯಲ್ಲಿ ಇದೆ. ಇದಕ್ಕೆ ಆಡಳಿತ ಆಧಿಕಾರಿ ಯಾರು ? ಅವರು ಹೇಗೇ ಕಾರ್ಯ ನಿರ್ವಹಿಸುತ್ತಿದ್ದಾರೆ ಇದನ್ನು ಕೇಳುವವರು ಯಾರು. 

ಇಲ್ಲಿಯ ಶಾಲೆಯ ಆಡಳಿತ ಮತ್ತು ವಸತಿ ಶಾಲೆಯ ಹಾಗೂ ಮಠದ ವ್ಯವಹಾರ ಮಾಡುವುದನ್ನು ನೋಡಿಕೊಳ್ಳುವವರು ಯಾರು ? 

ಈ ಮಠಕ್ಕೆ ಬಂದ ಹಣದ ಮತ್ತು ಆಸ್ತಿಯ ಹಾಗೂ ಹಣದ ಖರ್ಚು ಮಾಡಿರುವ ಬಗ್ಗೆ ಲೆಕ್ಕ ಕೊಡುವವರು ಯಾರು ? ಈ ಮಠಕ್ಕೆ ಬಂದಿರುವ ಒಟ್ಟು ಆಸ್ತಿ ಎಷ್ಟು  ?  ಈ ಆಸ್ತಿಗಳೆಲ್ಲ ಯಾರ ಹೆಸರಿನಲ್ಲಿ ಇವೇ ?

ಈ ಮೂಲ ಕನಕ ಗುರು ಪೀಠದ ಆಸ್ತಿಯನ್ನು ಶ್ರೀ ನಿರಂಜನಾಂದ ಪುರಿ ಸ್ವಾಮಿಯವರು ಯಾರ ಹತ್ತಿರ ಆಡ ಇಟ್ಟಿದ್ದಾರೆ ಎನ್ನುವ ವಿಷಯ ಹೊರ ಬರಬೇಕು.

3. ಶ್ರೀ ನಿರಂಜನಾಂದ ಪುರಿ ಸ್ವಾಮಿಯವರು ಈ ಕಾಗಿನಲೆ ಮೂಲ ಪೀಠದ ಮಠವನ್ನು ಬಿಟ್ಟು ಬಂದು ಈ  ಬಳ್ಳೂಡಿಯ ಶಾಖಾ ಮಠವನ್ನು ಯಾಕೆ ನಿರ್ಮಾಣ ಮಾಡಿದರು ಮತ್ತು ಈ  ಸ್ವಾಮಿಯವರು ಯಾಕೆ  ಇಲ್ಲಿ  ನೆಲೆಸಿದ್ದಾರೆ. 

ಈ ಸ್ವಾಮೀಜಿಯನ್ನು ಬೇಟಿ ಮಾಡಲು ಮಠಕ್ಕೆ ಹೋದರೆ ತಮಗೆ ಬೇಕಾದವರಿಗೆ ಮತ್ತು ಅವರ ಜೊತೆಗಿರುವ ಚಿಲಾಗಳು ಕರೆದುಕೊಂಡು ಬಂದವರಿಗೆ ಅವಕಾಶ  ನೀಡುವುದು ಹಾಗೂ ಬೇಡವಾದವರನ್ನು ಕಾಯಿಸುವುದು ಇವರ ಗುಣವಾಗಿದೆ.

ಇವರನ್ನು + ಅವರನ್ನೂ ಈ ಮಠದ ಒಳಗೆ ಬಿಡಬೇಡಿ ಹಾಗೂ ನಮ್ಮ ಮಠದ ಒಳಗೆ ನೀವು ಬರಬೇಡಿ ಎಂದು ಹೇಳಿದ್ದಾರೆ. ಈ ಮಠಗಳು ಏನು  ಇವರು ಅಪ್ಪನ ಎಂದು ಕೇಳುತ್ತಿದ್ದಾರೆ ಲಕ್ಷಾಂತರ ಹಾಲುಮತ ಸಮಾಜದ ಭಕ್ತರು.

ಈ ಮಠದ ನಿರ್ಮಾಣದ ಸಮಯದಲ್ಲಿ ಭಕ್ತರೊಬ್ಬರು 5 ಲಕ್ಷ ಹಣ ನೀಡಿದವರ ಮಗ ಅಮೇರಿಕಾದಿಂದ ಬಂದು ಕಾಲಿಗೆ ನಮಸ್ಕಾರಿಸಿದಾಗ ಸೌಜನ್ಯತೆಗೊ ಅವರನ್ನು ಯಾರು ಎಂದು  ಮಾತನಾಡಿಸುವ ಸಂಸ್ಕಾರ ಇಲ್ಲ ಈ ಸ್ವಾಮೀಜಿಗೆ ಎನ್ನುವ  ಮತ್ತು ತಮ್ಮ ಹತ್ತಿರ ಇರುವ ಚಿಲಗಳ ಕುಟುಂಬದವರು ಮತ್ತು ಹಣ ಕೊಡುವವರು ಬಂದರೆ  ಅವರ ಬಗ್ಗೆ ತುಂಬ ಕಾಳಜಿ ವಹಿಸುತ್ತಾರೆ, ಅವರು ಕರದರೆ ಹೆಣ್ಣು ಮಕ್ಕಳ ಪುಷ್ಪವತಿ ಕಾರ್ಯಕ್ರಮಕ್ಕೆ ಹೋಗುತ್ತಾರೆ. ನಮ್ಮಂತ ಬಡವರು ಕರೆದರೆ ಕೆಟ್ಟ ಪದಗಳಿಂದ ಬೈಯುವುದು, ಹೊಡೆಯುವುದು ಮಾಡುತ್ತಾರೆ ಎನ್ನುವ ಕೂಗು ತುಂಬ ಭಕ್ತರಿಂದ ಕೇಳಿ ಬರುತ್ತಿದೆ.  

ಇದರ ವಿಷಯವಾಗಿ ಬೆಂಗಳೂರಿನ ಮೌರ್ಯ ಹೋಟೆಲ್ನಲ್ಲಿ H ವಿಶ್ವನಾಥರವರ  ಹತ್ತಿರ ಶ್ರೀ ನಿರಂಜನಾಂದ ಪುರಿ ಸ್ವಾಮಿಯ ಬೇಡಿಕೊಂಡಿರುವ/ಮಾತನಾಡಿದ ಮಾತುಗಳೇನು H ವಿಶ್ವನಾಥರವರೇ ಕರ್ನಾಟಕದ ಹಾಲುಮತ ಸಮಾಜದವರಿಗೆ ಬಹಿರಂಗವಾಗಿ ಹೇಳಬೇಕು.

4. ಈ ಬಳ್ಳೂಡಿ ಶಾಖಾ ಮಠಕ್ಕೆ ಬಂದ ಮೇಲೆ ಈ ಸ್ವಾಮೀಜಿಯ ವರು ಎಷ್ಟು ಜನರನ್ನು ಹೊಡೆದಿದ್ದಾರೆ ಮತ್ತು ಹೊಡೆಸಿದ್ದಾರೆ. ಯಾಕೆ ಹೊಡೆಸಿದ್ದಾರೆ ಎನ್ನುವ ವಿಷಯವನ್ನು ಅವರೇ ಹೇಳಬೇಕು.

5. ಈ ಬಳ್ಳೂಡಿ ಮಠದಲ್ಲಿರುವ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮಾಹಿತಿಯ ಏನು ? ಈ ಕಟ್ಟಡವನ್ನು  ಯಾರು ಯಾರಿಗೆ ಬಾಡಿಗೆಗೆ ಕೊಟ್ಟಿದ್ದಾರೆ,  ಇದರಿಂದ ನಮ್ಮ ಸಮಾಜದ ಬಡ ಮಕ್ಕಳಿಗೆ ಸಿಗುವ ಶಿಕ್ಷಣವೇನು? ಇಲ್ಲಿ ಮಾಡಿರುವ ಸ್ಕೂಲ್ ಫೀಜ್  ಎಷ್ಟು ? ಇದರ ಆಡಳಿತ ಯಾರ ಕೈಯಲ್ಲಿದೆ ಮತ್ತು ಯಾರ ಅಧೀನದಲ್ಲಿ ಇದೆ  ಇದರ ಸಂಪೂರ್ಣ ಮಾಹಿತಿ ಹೇಳಬೇಕು.

6. ಹರಿಹರ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಬೇಟಿ ನೀಡಿದ್ದೇವೆ, ಈ ಗ್ರಾಮಗಳಲ್ಲಿರುವ ಹಾಲುಮತ ಸಮಾಜದ ಜನರು ಈ ವಿಚಾರದ ಸತ್ಯವನ್ನು  ತುಂಬ ಚೆನ್ನಾಗಿ ಹೇಳುತ್ತಾರೆ. ಈ ಮೇಲಿನ ಮತ್ತು ಈ ಕೇಳಗಿನ ಸತ್ಯವನ್ನು.

ಈ ಸ್ವಾಮೀಜಿಯನ್ನು ಬೈಯಲು ನಮಗೆ ಪದಗಳು ಸಿಗುತ್ತಿಲ್ಲ. ಆದರೆ ನಾವೆಲ್ಲ ಈ ಮಠ ಕಟ್ಟಲು ಹಣ ಧಾನ ಮಾಡಿರುವುದು ನಮ್ಮ ಸಮಾಜದ ಬಡ ಮಕ್ಕಳಿಗೆಲ್ಲ  ಶಿಕ್ಷಣ ಸಿಗಲಿ ಎನ್ನುವ ಉದ್ದೇಶದಿಂದಲೇ ಹೊರತು ಈ ಸ್ವಾಮೀಜಿಗೆ ಐಷಾರಾಮಿ ಜೀವನ ಮಾಡುತ್ತಾ ತಮ್ಮ ಅಕ್ಕ ಪಕ್ಕದಲ್ಲಿರುವ ಚೀಲಾಗಳನ್ನು ಶ್ರೀಮಂತರನ್ನಾಗಿ ಮಾಡುವುದಕ್ಕೆಲ್ಲ. ಈ ಸ್ವಾಮೀಜಿಯ ಅಕ್ಕ-ಪಕ್ಕದಲ್ಲಿರುವವರು ದೀಡಿರನೇ ಶ್ರೀಮಂತರಾಗಿದ್ದು ಹೇಗೆ  ?

ಈ ಸ್ವಾಮೀಜಿಯವರು ಹೋಮ+ಹವನ+ಪೂಜೆ ಅಂತ  ಲಕ್ಷ ಲಕ್ಷ ಹಣವನ್ನು ಈ ಬ್ರಹ್ಮಾಣರಿಗೆ ಕೊಟ್ಟು ಹಾಳು ಮಾಡಿದ್ದಾರೆ. ಈ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ  ಬಳಸಬಹುದಿತ್ತು, ನಾವುಗಳು ಈ ಬಳ್ಳೂಡಿ ಮಠಕ್ಕೆ ಹೋಗಿ ನಮ್ಮ ಕುರುಬರ ಬಡ ಮಕ್ಕಳಿಗೆಲ್ಲ  ಫೀಜ್ ಕಮ್ಮಿ ಮಾಡುಲು ಕೇಳಿದರೆ ನನಗೂ ಮತ್ತು ಈ ಶಾಲೆಗೂ ಯಾವ ಸಂಬಂಧ ಇಲ್ಲ, ಅ ಶಾಲೆಯವರನ್ನೇ ನೀವೇ ಕೇಳಿಕೊಳ್ಳಿ ಎಂದು ಹೇಳುತ್ತಾರೆ.

ಈ ಶಾಲೆಯರನ್ನು ನಾವು ಏಕೇ ಕೇಳಬೇಕು ? ನಾವೆಲ್ಲ ಈ ಮಠ ಕಟ್ಟಲು ಹಣ ನೀಡಿದ್ದೇವೆ ಹೊರತು ವ್ಯವಹಾರ ಮಾಡುವುದಕ್ಕಲ್ಲ ,  ಸರ್ಕಾರದ ಅನುದಾನದಲ್ಲಿ  ಕಟ್ಟಡ ನಿರ್ಮಾಣವಾಗಿದೆ, ಈ ಮಠಕ್ಕೆ ಧಾನಿಗಳು ಬಸ್ಸುಗಳನ್ನು ಕೊಡಿಸಿದ್ದಾರೆ, ಇಷ್ಟೆಲ್ಲ  ಇದ್ದ ಮೇಲೆ  ನಾವು ಏಕೆ ಯಾರೋ ಕಳ್ಳ ಖದಿಮರನ್ನು ಕೇಳಬೇಕು. ನಾವುಗಳು ಅವರನ್ನು ಕೇಳುವುದಾದರೆ  ನೀವು ಈ ಮಠ ಬಿಟ್ಟು ತೊಲಗಿ ಮೂಲ ಕಾಗಿನಲೆ ಪೀಠದ ಮಠಕ್ಕೆ ಹೋಗಿ ಸ್ವಾಮೀಜಿಯವರೇ ಎನ್ನುವುದರ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 


7. ಈ ಸ್ವಾಮೀಜಿಯವರು ಹರಿಹರ ತಾಲ್ಲೂಕಿನಲ್ಲಿ ಹಾಲುಮತ ಸಮಾಜದವರಿಗೆ ಮಾಡಿರುವ ಮೋಸ-ವಂಚನೆ-ಪಾಪದ ಕೆಲಸವೇಷ್ಟು  ಮತ್ತು  ಎಷ್ಟು ಜನ ಅಣ್ಣ- ತಮ್ಮಂದಿರ ಮದ್ಯ ಜಗಳ ಮತ್ತು ದ್ವೇಷ+ಅಸೂಯೆ ತಂದಿಟ್ಟಿದ್ದಾರೆ ಕೇಳಿ. 

8. S.T. ಹೋರಾಟದ ಪಾದಯಾತ್ರೆಯಲ್ಲಿ ಸಮಯದಲ್ಲಿ ಈ ಸ್ವಾಮೀಜಿಯ ವರಿಗೆ ಬಂದ ಹಣ ವೇಷ್ಟು ? ಇದರ ಲೆಕ್ಕ ಕೊಡುವವರು ಯಾರು ಯಾರು  ?  ಇವರ ಅಕ್ಕ-ಪಕ್ಕದಲ್ಲಿ  ಇದ್ದವರು, ದಿಢೀರನೆ ಲಕ್ಷಾಪತಿಗಳಾಗಿದ್ದಾರೆ, ಇವರೆಲ್ಲ ಶ್ರೀಮಂತರಾಗಿದ್ದು  ಹೇಗೆ ? 

ಈ S.T. ಹೋರಾಟದ ಬೆಂಗಳೂರಿನಲ್ಲಿ ನಡೆದ ಅಂತಿಮ ಮತ್ತು ಇತರೆ ಸಭೆಯಲ್ಲಿ  ಶ್ರೀಯುತ ಸಿದ್ದರಾಮಯ್ಯನವರ ಬಗ್ಗೆಲ್ಲ ತುಂಬ ಅಗುರವಾಗಿ ಮಾತನಾಡಿ, ಈವಾಗ ತುಂಬ ಚೆನ್ನಾಗಿ ನಾಜುಕಾಗಿ ಹೈ ಡ್ರಾಮ ಮಾಡುತ್ತಿದ್ದಾರೆ.

9. ಈ ಮೈಲಾರದಲ್ಲಿರುವ ಈ ಕಾಗಿನಲೆ ಪೀಠದ ಮಠದ ಈ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಯಾರು ಯಾರು ಇದ್ದಾರೆ ಮತ್ತು ಈ ಶಿಕ್ಷಣ ಸಂಸ್ಥೆಯ ವಸತಿಯುತ ಶಾಲೆಯ ಜವಾಬ್ದಾರಿಯನ್ನು ಯಾರಿಗೆ ನೀಡಿದ್ದಾರೆ ?

10. ಮೊನ್ನೆ 2023ರ ವಿಧಾನ ಸಭೆಯ ಹರಿಹರ  ಕ್ಷೇತ್ರದ MLA ಎಸ್. ರಾಮಪ್ಪನಿಗೆ ಟಿಕೆಟ್ ತಪ್ಪಿಸಿ, ಈ  ಚುನಾವಣೆಯಲ್ಲಿ  ಸ್ವಾಮೀಜಿ ಮಾಡಿದ ಮೋಸ-ವಂಚನೆ-ಪಾಪದ ಕೆಲಸ ದಿಂದ ಇವತ್ತು  ನಮ್ಮ ಹರಿಹರ  ತಾಲ್ಲೂಕಿನ ಕುರುಬರ ಸಮಾಜದ ಒಗ್ಗಟ್ಟು ಹಾಳಾಯಿತು, ನಮ್ಮ  ಸಮಾಜದ ಅಭ್ಯರ್ಥಿಯು ಸೊತು ಈ MLA ಸ್ಥಾನವೊ ನಮ್ಮನ್ನು ಕೈ ಬಿಟ್ಟು ಹೋಯಿತು. 
 
11. ಹರಿಹರ ವಿಧಾನ ಸಭೆಯ ಕ್ಷೇತ್ರದಲ್ಲಿ ನಾನು ಟಿಕೇಟ ಕೋಡಿಸಿರುವ ಕಾಂಗ್ರೆಸ್ಸಿನ ಅಭ್ಯರ್ಥಿ ಶ್ರೀನಿವಾಸ N H ಸೊತರೆ ನಾನು ಬಳ್ಳೂಡಿ ಮಠ ಬಿಡುತ್ತೇನೆ ಎಂದು ಹೇಳಿದ್ದರಂತೆ, ಅದಕ್ಕಾಗಿ ನಾವು ಕಾಯುತ್ತಿದ್ದೇವೆ, ಈ ಸ್ವಾಮೀಜಿಯು ಈ ಬಳ್ಳೂಡಿ ಮಠವನ್ನು ಬಿಟ್ಟು ಕಾಗಿನಲೆ ಪೀಠದ ಮೂಲ  ಮಠಕ್ಕೆ ಯಾವಾಗ ಹೋಗುತ್ತಾರೆ ಎಂದು . 

12. ಶ್ರೀ ನಿರಂಜನಾಂದ ಪುರಿ ಸ್ವಾಮಿಯಗಳು ಈ ಕಾಗಿನಲೆ ಕನಕ ಗುರು ಪೀಠದ  ಪೀಠಾದಿಪತಿಯಾಗಿನಿಂದ ಈ ಮಠಕ್ಕೆ ಕರ್ನಾಟಕದಾದ್ಯಂತ ಎಷ್ಟು ಆಸ್ತಿ ಮತ್ತು ಹಣ ಬಂದಿದೆ, ಈ  ಆಸ್ತಿಯ ಯಾರ ಹೆಸರಿಗೆ ಇದೆ ಮತ್ತು  ಭಕ್ತರಿಂದ ಬಂದಿರುವ ಒಟ್ಟು ಹಣದ ಲೆಕ್ಕ ಕೊಡುವವರು ಯಾರು  ?

13. ಈವಾಗ ಈ ಸ್ವಾಮೀಜಿಯವರು ಈ ಎರಡು ಮಠದ ಸ್ಥಾನವನ್ನು ಬಿಟ್ಟು, ಐಷಾರಾಮಿ ಜೀವನ ಮಾಡಲು ಬೆಂಗಳೂರಿನ ಕಡೆಗೆ  ಪಲಾಯನ ಮಾಡುತ್ತಿದ್ದಾರೆ. ಎಂದು 
ಶ್ರೀ ಪರಮೇಶ್ವರಪ್ಪ ಜೀ. 
ಹಾಲುಮತ ಸಮಾಜದ ಹಿರಿಯರು, ವಾಸನ ಗ್ರಾಮ, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ. 
ಪೋನ: +91 94489 12733.ಇವರು ಸುಧೀರ್ಘವಾಗಿ ಬರೆದು ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments