ಕುರುಬ ಸಮಾಜದಲ್ಲಿ ಹುಟ್ಟಿರುವ ನಾನು, ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಗಮನಿಸುತ್ತಾ, ಎಲ್ಲಾ ಸಮುದಾಯಗಳು ಮುಂದೆ, ಮುಂದೆ ಹೋಗ್ತಾ ಇದ್ದರೂ ನಮ್ಮ ಸಮಾಜ ಮಾತ್ರ ಯಾಕೆ *ಹಿಂದ್ ಹಿಂದಕ್ಕೆ ಹೋಗ್ತಾ ಇದೆ ಎಂಬುದನ್ನು ಗಮನಿಸುವಾಗ ಅರಿವಿಗೆ ಬರುತ್ತಿರುವುದು* ಲಿಂಗಾಯತರು ನಮ್ಮಷ್ಟೇ ಜನಸಂಖ್ಯೆ ಹೊಂದಿದ್ದಾರೆ. ಒಕ್ಕಲಿಗರು ನಮಗಿಂತ ಕಡಿಮೆ ಜನಸಂಖ್ಯೆ ಹೊಂದಿದ್ದಾರೆ ಆದರೂ ಆ ಎರಡು ಸಮುದಾಯಗಳು ಅಭಿವೃದ್ಧಿಯಲ್ಲಿ ನಾಗಾಲೋಟದಲ್ಲಿ ಓಡ್ತಾ ಇದ್ದಾರೆ. *ಆ ಸಮುದಾಯಗಳಲ್ಲಿ ಅವರವರ ಮಠಗಳನ್ನು ಗೌರವಿಸುತ್ತಾರೆ ಜವಾನನಿಂದ ಹಿಡಿದು ಐಎಎಸ್ ಅಧಿಕಾರಿಯವರೆವಿಗೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಮಠದ ಜೊತೆ ಇರ್ತಾನೆ. ಅಭಿವೃದ್ಧಿಗೆ ಪೂರಕವಾಗಿರ್ತಾನೆ ಜೊತೆಗೆ ಪಕ್ಷಾತೀತವಾಗಿ ರಾಜಕಾರಣಿಗಳು ಮಠದ ಸಂಪರ್ಕದಲ್ಲಿದ್ದು ಯಾವುದೇ ಸರ್ಕಾರಗಳು ಅಧಿಕಾರದಲ್ಲಿ ಇದ್ದರೂ ಸಹ ಆಯಾ ಸಮುದಾಯಗಳಿಗೆ ಅನುಕೂಲವಾಗುವಂತೆ ಸಹಕಾರಿಗಳಾಗಿರುತ್ತಾರೆ* ಆಯಾ ಮಠಗಳ ಅಭಿವೃದ್ಧಿಗೆ ನಿರ್ವಹಣೆಗೆ ಆದಾಯ ಬರುವ ಹಾಗೆ ಸಂಪನ್ಮೂಲ ಮಾಡಿಕೊಟ್ಟಿರುತ್ತಾರೆ. *ನಮ್ಮ ಸಮುದಾಯದ ಮಠ ಆಗಿದ್ದು 1992 ರಲ್ಲಿ ಕುರುಬರೇ ಇಲ್ಲದ ಕಾಗಿನೆಲೆಯಲ್ಲಿ ಬೀರೇಂದ್ರ ಕೇಶವ ತಾರಕನಂದಪುರಿಗಳು ಜಗದ್ಗುರುಗಳಾಗಿದ್ದರು. ಸರ್ಕಾರದಿಂದ ಕಾಗಿನೆಲೆ ಪ್ರಾಧಿಕಾರ ಘೋಷಣೆಯಾದ ನಂತರ ಕಾಗಿನೆಲೆ ಮಠವೂ ಸಹ ಕಟ್ಟಡಗಳು ನಿರ್ಮಾಣಗೊಂಡವು. ದೊಡ್ಡ ಗುರುಗಳ ನಂತರ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಜವಾಬ್ದಾರಿ ಹೊತ್ತ ನಂತರ, ಕಾಗಿನೆಲೆಯಿಂದಾಚೆಗೂ ಒಂದಿಂಚೂ ಮಠದ ಜಾಗವೇ ಇರದಿದ್ದ ಹರಿಹರ ತಾಲ್ಲೂಕಿನಲ್ಲಿ ಹೈವೇ ರಸ್ತೆ ಪಕ್ಕದಲ್ಲಿ 10 ಎಕರೆಯಲ್ಲಿ 210 ದಿನಗಳಲ್ಲಿ ಮಠ ಕಟ್ಟಿ, ಶಾಲೆ, ಕಾಲೇಜು, ಐಎಎಸ್, ತರಬೇತಿ ಕೇಂದ್ರಗಳು ಪ್ರಾರಂಭವಾಗಿವೆ* ದಾವಣಗೆರೆ ಜಿಲ್ಲೆಯಲ್ಲಿ ಕುರುಬ ಸಮುದಾಯಕ್ಕೆ *ಮಠ, ಶಾಲೆ, ಕಾಲೇಜು ಇವುಗಳು ಆಸ್ತಿಗಳಾದವು* ನಂತರದ್ದು ವಿಜಯನಗರ ಜಿಲ್ಲೆಯ *ಮೈಲಾರದಲ್ಲಿ ಜಾಗ ಖರೀದಿ ಮಾಡಿ ಅಲ್ಲೊಂದು ಮಠ ಕಟ್ಟಿ, ಅಲ್ಲಿಯೂ ಸಹ ವಸತಿ ಶಾಲೆ ಪ್ರಾರಂಭ ಮಾಡಿದ್ದಾರೆ. ಇದು ಸಹ ಕುರುಬ ಸನುದಾಯಕ್ಕೆ ಆಸ್ತಿಯಾಗಿದೆ* ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಸಂಚಾರಿ ಕುರುಬರಿಗಾಗಿ ಶಾಲೆ, *ಕಾಗಿನೆಲೆಯಲ್ಲಿ ಶಾಲೆ, ಹಕ್ಕ ಬುಕ್ಕ ಕಾಲೇಜು* ಹಿರೇಕೆರೂರಿನಲ್ಲಿ *ಕಾಲೇಜು* ಇವುಗಳು ಕುರುಬ ಸಮಯದಾಯದ ಆಸ್ತಿಗಳಾಗಿವೆ. *ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ 46 ಎಕರೆ ಭೂಮಿ ಖರೀದಿ ಮಾಡಿ ಅಲ್ಲಿ ವಸತಿ ಶಾಲೆ ಅಥವಾ ಮೆಡಿಕಲ್ ಕಾಲೇಜು / ಆಯುರ್ವೇದ ಕಾಲೇಜು ಆರಂಭಿಸಲು ಚಿಂತಿಸಲಾಗುತ್ತಿದೆ ಎಂಬುದು ಜಗದ್ಗುರುಗಳು ಸಭೆಗಳಲ್ಲಿ ಹೇಳಿಕೊಂಡಿರುವುದನ್ನು ಕೇಳಿಸಿಕೊಂಡಿದ್ದೇವೆ* ಈ ಆಸ್ತಿಗಳ ಜೊತೆ ಹಾವೇರಿ ಯಲ್ಲಿ ಆಯುರ್ವೇದ ಸಸ್ಯತೋಟ ಮಾಡಲು ತುಂಗಾಭದ್ರ ನದಿ ಪಕ್ಕದಲ್ಲಿ ಯೋಚಿಸಲಾಗುತ್ತಿದೆ ಎಂಬುದು ಕೇಳಿಬರುತ್ತಿದೆ. *ಬೆಂಗಳೂರಿನಲ್ಲಿ ಒಕ್ಕಲಿಗರ ಬಿಜಿಎಸ್, ಲಿಂಗಾಯತರ ಜೆಎಸ್ಎಸ್ ಮಠಗಳು, ಶಿಕ್ಷಣ ಸಂಸ್ಥೆಗಳು ಬೆಂಗಳೂರಿನಲ್ಲಿದ್ದು ಆಯಾ ಜಾತಿಗಳ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತಿವೆ. ಕಾಗಿನೆಲೆ ಕನಕ ಗುರುಪೀಠ ಬೆಂಗಳೂರಿನ ಹೊರವಲಯ ಕೇತೋಹಳ್ಳಿಯಲ್ಲಿ ಶಾಖಾಮಠ ಕಟ್ಟಲು ಭೂಮಿಪೂಜೆ ನೆರವೇರಿಸಲು ಮಾನ್ಯ ಮುಖ್ಯಮಂತ್ರಿಗಳಿಂದ ಶುಭಾರಂಭ ಮಾಡಲಾಗುತ್ತಿದೆ. ಮುಂದುವರೆದು ಸುತ್ತಮುತ್ತಲು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿರುವಂತಿದೆ* *ಯಾವುದೇ ಸರ್ಕಾರಗಳು ಆಡಳಿತದಲ್ಲಿದ್ದರೂ ಅನುದಾನ ತಂದು ಕುರುಬ ಸಮುದಾಯಕ್ಕೆ ಆಸ್ತಿಗಳನ್ನು ವೃದ್ಧಿಸಿಕೊಂಡು ಹೋಗುತ್ತಿದ್ದಾರೆ. ಜಗದ್ಗುರುಗಳು ಮತ್ತು ಶಾಖಾಮಠಗಳ ಪರಮಪೂಜ್ಯರುಗಳ ಅವಿರತ ಶ್ರಮದಿಂದಾಗಿ ಶೂನ್ಯದಿಂದ ನೂರಾರು ಕೋಟಿ ಆಸ್ತಿ ಕುರುಬ ಸಮುದಾಯಕ್ಕೆ ಆಗುತ್ತಿದೆ. ಯಾರಿಗಾಗಿ ಸಮಾಜಕ್ಕಾಗಿ ತಾನೇ ? ಒಬ್ಬ ವ್ಯಕ್ತಿಯನ್ನು ಒಂದಿಡೀ ಸಮಾಜದ ಜವಾಬ್ದಾರಿ ನೀಡಿ, ಗುರುಪೀಠದಲ್ಲಿ ಕೂರಿಸಿದಾಗ, ತನ್ನ ಕರ್ತವ್ಯವನ್ನು ನಿಭಾಯಿಸುತ್ತಾ, ಬೇರೆ ಸಮುದಾಯಗಳಿಗೆ ನಮ್ಮ ಕುರುಬ ಸಮುದಾಯವು ಸಹ ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ಜಗತ್ತಿಗೆ ತೋರಿಸುವಂತಹ ಕಾರ್ಯಗಳನ್ನು ಮಾಡುತ್ತಿರುವ ಶ್ರೀಮಠಗಳಿಗೆ ಕುರುಬ ಸಮುದಾಯದಲ್ಲಿ ಹುಟ್ಟಿರುವ ನಾವುಗಳು (ಪ್ರತಿಯೊಬ್ಬ ಕುರುಬ) ಯಾವ ರೀತಿ ಸಹಕಾರಿಗಳಾಗಿದ್ದೇವೆ ? ಆರ್ಥಿಕ ಸಹಕಾರ ಎಷ್ಟು ನೀಡಿದ್ದೇವೆ ? ಕನಕ ಗುರುಪೀಠಗಳ ಆಸ್ತಿಗಳು ಪ್ರತಿಯೊಬ್ಬ ಕುರುಬರಿಗೆ ಸೇರಿರುವಂತಹದ್ದಾಗಿರುತ್ತದೆ. ಆಸ್ತಿಗಳು ಕ್ರೂಢೀಕರಿಸುತ್ತಿರುವುದು. ಸಮಾಜದ ಹಿರಿಯರು ಹುಡುಕಿ ಮಠದ ಗುರುಗಳ ಸ್ಥಾನದಲ್ಲಿ ಕೂರಿಸಿರುವ ಜಗದ್ಗುರುಗಳು ಮತ್ತು ಶಾಖಾಮಠಗಳ ಪರಮಪೂಜ್ಯಗಳ ಶ್ರಮಗಳಿಂದ.. ನಾವು ನೀವೂಗಳು ಬೆಚ್ಚನೆಯ ಮನೆಯಲ್ಲಿ, ಕುಟುಂಬ ಸಮೇತರಾಗಿ ಬೇಕಾದ್ದನ್ನು ಉಂಡು ತಿಂದು, ನಮ್ಮ ನಮ್ಮ ಕುಟುಂಬ, ನಮ್ಮ ಮನೆ, ನಮ್ಮ ಆಸ್ತಿ, ಅದರಿಂದಾಚೆಗೆ ಮತ್ತಷ್ಟು ಆಸ್ತಿಗಳನ್ನು ಮಾಡಿಕೊಳ್ಳುತ್ತಾ ಇರುತ್ತೇವೆ* ನಾವುಗಳು ಯಾವತ್ತಾದರೂ ಯೋಚಿಸಿದ್ದೇವಾ ? *ನಮ್ಮ ಸಮಾಜಕ್ಕಾಗಿ ಹಗಲಿರುಳು ಶ್ರಮಿಸಿ,ಆಸ್ತಿ, ಶಿಕ್ಷಣ ಸಂಸ್ಥೆಗಳನ್ನು ಮಾಡುತ್ತಾ ಇತರೆ ಸಮುದಾಯಗಳ ಎದುರು ತಲೆ ಎತ್ತಿ ನಿಲ್ಲುವಂತೆ ಮಾಡಿರುವ ಕನಕ ಗುರುಪೀಠಗಳ ಜಗದ್ಗುರುಗಳ ಪರಮಪೂಜ್ಯಗಳ ಶ್ರಮಗಳ ಬಗ್ಗೆ* ನಮ್ಮ ಕನಕ ಗುರುಪೀಠಗಳು ಈಗ ತಾನೇ ಅಂಬೆಗಾಲಿಡುತ್ತಾ *ಒಂದೊಂದೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭ ಮಾಡುತ್ತಿವೆ. ಮುಂದೆ ಹತ್ತಾರು ಶಿಕ್ಷಣ ಸಂಸ್ಥೆಗಳು ಪ್ರಾರಂಭ ಮಾಡಿ, ಆಗ ಸಮಾಜದ ಮಕ್ಕಳಿಗೂ ಆರ್ಥಿಕ ದುರ್ಬಲರಿಗೂ ಕಡಿಮೆ ದರ ಅಥವಾ ಉಚಿತವಾಗಿ ಶಿಕ್ಷಣ ನೀಡುವಂತಹ ಸನ್ನಿವೇಶ ನಿರ್ಮಾಣವಾಗುವ ಶುಭ ದಿನ ನಮ್ಮ ಸಮುದಾಯದಲ್ಲೂ ಕಾಣುವಂತಾಗಲಿ ಎಂದು ಆಶಿಸೋಣ* ನಾವು ಯಾವತ್ತೂ ಅಂತರಾಳದಿಂದ ನಮ್ಮ ಸಮಾಜದ ಉನ್ನತಿಗಾಗಿ ಯೋಚಿಸಿ, ನೋಡುತ್ತೇವೋ ಆಗ ಎಲ್ಲವೂ ಒಳ್ಳೇಯದಾಗಿಯೇ ಕಾಣುತ್ತದೆ. *ನಮ್ಮ ಕುರುಬ ಸಮುದಾಯ ನಮಗೆ ಹೆಮ್ಮೆ, ನಮ್ಮ ಕನಕ ಗುರುಪೀಠಗಳು ನಮಗೆ ಹೆಮ್ಮೆ, ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜಗದ್ಗುರುಗಳು ಶಾಖಾಮಠಗಳ ಪರಮಪೂಜ್ಯರುಗಳ ಸಮಾಜಮುಖಿ ಕಾರ್ಯಗಳು ನಮಗೆ ಹೆಮ್ಮೆ* ಇಷ್ಟು ವರ್ಷಗಳ ಜೀವನದಲ್ಲಿ *ನಮ್ಮ ಕುರುಬ ಸಮಾಜಕ್ಕಾಗಿ ನಮ್ ಕೊಡುಗೆ ಏನು ? ನಾವು ಏನಾದರೂ ಸಮಾಜಕ್ಕಾಗಿ ಮಾಡಿರುವುದು ಇದೆಯಾ ? ಎಂಬುದನ್ನು ಒಮ್ಮೆ ನಮಗೇ ನಾವೇ ಪ್ರಶ್ನಿಸಿಕೊಂಡಾಗ.... ನಮಗೆ ಸತ್ಯ ದರ್ಶನವಾಗುತ್ತೆ* ಒಳ್ಳೇಯದ್ದನ್ನೇ ಬಯಸೋಣ.. ಕೆಟ್ಟದ್ದನ್ನು ಬಿಡೋಣ. - ರಾಜು ಮೌರ್ಯ ದಾವಣಗೆರೆ 9535630196
ನಾವು ಏನಾದರೂ ಸಮಾಜಕ್ಕಾಗಿ ಮಾಡಿರುವುದು ಇದೆಯಾ ? ಎಂಬುದನ್ನು ಒಮ್ಮೆ ನಮಗೇ ನಾವೇ ಪ್ರಶ್ನಿಸಿಕೊಂಡಾಗ…. ನಮಗೆ ಸತ್ಯ ದರ್ಶನವಾಗುತ್ತೆ
RELATED ARTICLES