ದಾವಣಗೆರೆ: ಬೆಂಗಳೂರಿನ ಕೋರಮಂಗಲದ ಒಳ ಕ್ರೀಡಾಂಗಣದಲ್ಲಿ ಜ.೧೯ರಂದು ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ಸರ್ಕಾರದ ನೆಹರು ಯುವ ಕೇಂದ್ರ ಆಯುಷ್ ಇಲಾಖೆಗಳ ಸಹಯೋಗದಲ್ಲಿ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಎಸ್‌ಜಿಎಸ್ ಅಂತಾರಾಷ್ಟಿಯ ಯೋಗಾಸನ ಫೌಂಡೇಶನ್ ಕಾಲೇಜು ಅಂಡ್ ರಿಸರ್ಚ್ ಸೆಂಟರ್ ಜಂಟಿಯಾಗಿ ಯೋಗಾಸನ ಕ್ರೀಡಾಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಂತಾರಾಷ್ಟೀಯ ಯೋಗಾಸನ ಸಂಯೋಜಕ ಡಾ.ನಿರಂಜನ್‌ಮೂರ್ತಿ ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಯೋಗಾಸನ ಕ್ರೀಡಾಪಟುಗಳನ್ನು ೨೦೨೫ರ ಪ್ರಸಕ್ತ ವರ್ಷದಲ್ಲಿ ಮಲೇಶಿಯಾ, ಸಿಂಗಾಪುರ್ ಮತ್ತು ಇಂಡೋನೇಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟಿಯ ಯೋಗಾಸನ ಕ್ರೀಡಾ ಸ್ಪರ್ಗಧಿಳಿಗೆ ಆಯ್ಕೆ ಮಾಡಲಾಗುತ್ತದೆ.
ಆಸಕ್ತರು ಜ.೧೫ರಂದು ಸಂಜೆ ೫ ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕು. ಯೋಗಾಸನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಯೋಗಾಸನ ಗುರುತಿಸಿ ‘ಯೋಗ ಕಲಾಚೈತನ್ಯ’ ಹಾಗೂ ‘ಯೋಗ ವಸಿಷ್ಠ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆಸಕ್ತರು ತಮ್ಮ ಪೂರ್ಣ ಮಾಹಿತಿಯೊಂದಿಗೆ ಜ.೧೫ರ ಒಳಗಾಗಿ (೯೦೩೫೫೫೧೫೬೮) ದೂರವಾಣಿ ವಾಟ್ಸಪ್ ಅಥವಾ ಮೇಲ್‌ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ದಾವಣಗೆರೆ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ, ಯೋಗಾಚಾರ್ಯ ಡಾ.ಎನ್‌ಪರಶುರಾಮ್ (೯೦೩೫೫೫೧೫೬೮) ದೂರವಾಣಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.