Homeಕ್ರೀಡೆಮಡಿಕೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಗೆ ತಾಲ್ಲೂಕು ಪತ್ರಕರ್ತರ ಹೆಸರು ನೀಡಲು ಕೋರಿಕೆ

ಮಡಿಕೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಗೆ ತಾಲ್ಲೂಕು ಪತ್ರಕರ್ತರ ಹೆಸರು ನೀಡಲು ಕೋರಿಕೆ

ದಾವಣಗೆರೆ-

ನವೆಂಬರ್ 2 ಮತ್ತು 3 ರಂದು ಮಡಿಕೇರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ಭಾಗವಹಿಸಲು ದಾವಣಗೆರೆ ಜಿಲ್ಲಾ ತಂಡವನ್ನು ಕಳುಹಿಸಬೇಕಿದೆ.
ಹರಿಹರ,ಹೊನ್ನಾಳಿ, ನ್ಯಾಮತಿ,ಚನ್ನಗಿರಿ,ಜಗಳೂರು ಹಾಗೂ ದಾವಣಗೆರೆ ತಾಲ್ಲೂಕಿನಲ್ಲಿ ಕರ್ನಾಟಕ ಕಾರ್ಯ ನಿರತಪತ್ರಕರ್ತರ ಸಂಘದ ಸದಸ್ಯತ್ವ ಹೊಂದಿರುವವರು ಈ ಪಂದ್ಯದಲ್ಲಿ ಭಾಗವಹಿಸಲು ಆಸಕ್ತಿ ಇರುವ ಕ್ರಿಕೆಟ್ ಆಡಲು‌ ಬಲ್ಲ ಪತ್ರಕರ್ತರಿದ್ದರೆ ಕೂಡಲೇ ತಾಲೂಕು ಅಧ್ಯಕ್ಷರುಗಳು ಅಹರ್ಯತೆವುಳ್ಳ ಕ್ರಿಕೆಟ್ ಆಟಗಾರರಹೆಸರುಗಳನ್ನು ಕಳಿಸಬೇಕು.ಅಂಥ ಕ್ರಿಕೆಟ್ ಪಟುಗಳಿದ್ದರೆ ಆಯಾ ತಾಲೂಕು ಅಧ್ಯಕ್ಷರ ಮುಖಾಂತರ ಹೆಸರುಗಳನ್ನು ಜಿಲ್ಲಾ ಸಮಿತಿಗೆ ಕಳಿಸಬೇಕು (ಸದಸ್ಯತ್ವ ಹೊಂದಿದವರು ಮಾತ್ರ) ಹೆಸರು ನೀಡುವುದರ ಮೂಲಕ ದಾವಣಗೆರೆಯಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಬೇಕು. ಅವರ ಆಟದ ವೀಕ್ಷಣೆಯ ನಂತರ ಅಂತಿಮ‌15 ಜನರ ಜಿಲ್ಲಾ ತಂಡವನ್ನು ರಚಿಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.)ದಾವಣಗೆರೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬದರಿನಾಥ್ ಎನ್.ವಿ.ರವರು ವಿನಂತಿಸಿದ್ದಾರೆ.



RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments