ಮೈಸೂರು: ರಾಜ್ಯದ ಮುಖ್ಯ ಮಂತ್ರಿ ಡಿಕೆ.ಶಿವುಕುಮಾರ್ ಆಡಳಿತದತ್ತ ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಅವರು ಅಧಿಕಾರದ ಅಹಂ ಸ್ವಲ್ಪ ನೆತ್ತಿಗೇರಿದಂತೆ ಭಾಸವಾಗುತ್ತಿದೆ.ಅವರ ನಡೆಯಲ್ಲಿ ನುಡಿಯಲ್ಲಿ ಈ ಅಂಶ ಗಮನಿಸುತಿದ್ದ ಜನರಿಗೆ ಈಗ ಮೈಸೂರು ದಸರಾ ಸಮಯದಲ್ಲಿ ಮೂರುನಾಲ್ಕು ವಿಷಯಗಳಲ್ಲಿ ಎದ್ದು ಕಾಣಸಿಗುತ್ತದೆ.ಮೊದಲನೆಯದಾಗಿ ಮೈಸೂರು ದಸರಾ ಸ್ವಾಗತ ಕಮಾನುಗಳಲ್ಲಿ ತಮ್ಮ ಪೊಟೊ ಹಾಕಿಸಿದ್ದು.ಎರಡನೆಯದಾಗಿ ಮೈಸೂರುದಸರಾ ಉತ್ಸವದ ಹಲವಾರು ಪೋಸ್ಟರ್ ಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಮುಜರಾಯಿ ಸಚಿವರ ಪೊಟೊ

ಹಾಕಿಸದೆ ಇರುವುದು,ಮೂರನೆಯದಾಗಿ ತನ್ನ ಪತ್ನಿಯನ್ನು ಪ್ರೊಟೊಕಾಲ್ ಉಲ್ಲಂಗಿಸಿ ಸರ್ಕಾರಿ ಕಾರ್ಯಕ್ರಮದ ವೇದಿಕೆಗೆ ಕರೆದೊಯ್ದದ್ದು,

ನಾಕ್ಕನೆಯದಾಗಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚಣೆ ಸಂದರ್ಭದಲ್ಲಿ ಪತ್ನಿಯನ್ನು ಕರೆದೊಯ್ದದ್ದು ಮತ್ತು ಐದನೆಯದಾಗಿ ತನ್ನ ಜೊತೆಗೆ ಬಂದ ದಲಿತ ವರ್ಗದ ಸಚಿವರುಗಳಾದ

ಶಿವರಾಜ್ ತಂಗಡಗಿ,ನರೇಂದ್ರ ಸ್ವಾಮಿ ಹಾಗೂ ಬಸವಂತಪ್ಪನವರನ್ನು ಪೊಲೀಸ್ ಅಧಿಕಾರಿ ತಡೆದು ನಿಲ್ಲಿಸಿ ಅವಮಾನಿಸಿದ್ದವುಗಳು ಹೆಚ್ಚುಜನರ ಗಮನಸೆಳೆದವುಗಳು.ಸಾರ್ವಜನಿಕರ ಗಮನ ಸೆಳೆಯದ ಇನ್ನೂ ಅದೆಷ್ಟು ಇಂಥ ಘಟನೆಗಳಿಂದ ಶಾಸಕರು,ಸಚಿವರು,ಹಿರಿಯರಾಜಕಾರಣಿಗಳು ಈ ಅಹಂಕಾರದವರ್ತನೆಯಿಂದ ಮನನೋಯಿಸಿಕೊಂಡಿದ್ದಾರೋ ತಿಳಿಯದು.
ಅಧಿಕಾರ,ಐಶ್ವರ್ಯ,ಅಹಂಕಾರ ಯಾವಕ್ಷಣದಲ್ಲಾದರೂ ಮಣ್ಣುಪಾಲಾಗಬಹುದು.ಆದರೆ ಜನಮಾನಸದಲ್ಲಿ ಇರುವ ಶಾಸ್ವತ ಸರ್ವರನ್ನೂ ಗೌರವಿಸುವ ಗುಣ ಎಲ್ಲಾ ಐಶ್ವರ್ಯಕ್ಕೂ ಮಿಗಿಲೆಂಬುದನ್ನು ದುರಹಂಕಾರದ ನಡೆಯನ್ನು ತಿದ್ದಿಕೊಳ್ಳಬೇಕು ಎಂದು ಜನಾಕ್ರೋಶದ ಮಾತುಗಳಾಗಿವೆ.

