Homeರಾಜಕೀಯಮೋದಿ ಕರ್ನಾಟಕಕ್ಕೆ ಬಂದಿದ್ದು ಕೇವಲ 7.5 ಕಿ.ಮೀ ಉದ್ದದ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆಗಾಗಿಯಷ್ಟೇ ಅಲ್ಲ.

ಮೋದಿ ಕರ್ನಾಟಕಕ್ಕೆ ಬಂದಿದ್ದು ಕೇವಲ 7.5 ಕಿ.ಮೀ ಉದ್ದದ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆಗಾಗಿಯಷ್ಟೇ ಅಲ್ಲ.

  1. ದಾವಣಗೆರೆ:ನಮ್ಮ ಮೆಟ್ರೋ ಪಿಂಕ್ ಲೈನ್: 7.5 ಕಿ.ಮೀ ಎತ್ತರದ ಮಾರ್ಗದ ಉದ್ಘಾಟನೆ. ಯೋಜನಾ ವೆಚ್ಚ ₹3,470 ಕೋಟಿ.
  2. COSMOS – ಮೈಸೂರು ತಾರಾಲಯ: ಭಾರತದ ಮೊದಲ LED ಡೋಮ್ ಹೊಂದಿರುವ ತಾರಾಲಯದ ಉದ್ಘಾಟನೆ. ಅಂದಾಜು ವೆಚ್ಚ ₹91 ಕೋಟಿ.
  3. ಕೊಪ್ಪಳ-II ಮತ್ತು ಗದಗ-II ನವೀಕರಿಸಬಹುದಾದ ಇಂಧನ ವಲಯಗಳ (ಹಂತ-II) ವಿದ್ಯುತ್ ಪ್ರಸರಣ ಯೋಜನೆ ಉದ್ಘಾಟನೆ. ವೆಚ್ಚ ₹4,450 ಕೋಟಿ.
  4. ಬೀದರ್ ಸೌರಶಕ್ತಿ ವಲಯದ ವಿದ್ಯುತ್ ಪ್ರಸರಣ ಯೋಜನೆ ಉದ್ಘಾಟನೆ. ವೆಚ್ಚ ₹1,370 ಕೋಟಿ.
  5. ದಾವಣಗೆರೆ/ಚಿತ್ರದುರ್ಗ ಮತ್ತು ಬಳ್ಳಾರಿ ನವೀಕರಿಸಬಹುದಾದ ಇಂಧನ ವಲಯಗಳ ವಿದ್ಯುತ್ ಪ್ರಸರಣ ಯೋಜನೆಗೆ ಶಂಕುಸ್ಥಾಪನೆ. ವೆಚ್ಚ ₹3,450 ಕೋಟಿಗೂ ಅಧಿಕ.
  6. ದಾವಣಗೆರೆ ಮತ್ತು ಬಳ್ಳಾರಿಯ ವಿದ್ಯುತ್ ಪ್ರಸರಣ ವ್ಯವಸ್ಥೆ ಬಲವರ್ಧನೆ ಯೋಜನೆಗೆ ಶಂಕುಸ್ಥಾಪನೆ. ವೆಚ್ಚ ₹1,100 ಕೋಟಿಗೂ ಅಧಿಕ.
  7. ಮಂಗಳೂರಿನಲ್ಲಿ ಭೂಗತ LPG ಸಂಗ್ರಹಣಾ ಗುಹೆಯ ಉದ್ಘಾಟನೆ. 80,000 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿರುವ ಭಾರತದ ಅತಿದೊಡ್ಡ ಸಂಗ್ರಹಣಾ ಘಟಕ. ವೆಚ್ಚ ₹850 ಕೋಟಿಗೂ ಅಧಿಕ.
  8. MRPL ದೇವನಗೊಂಡಿ ಮಾರ್ಕೆಟಿಂಗ್ ಟರ್ಮಿನಲ್ ಲೋಕಾರ್ಪಣೆ. ವೆಚ್ಚ ₹330 ಕೋಟಿ.
  9. ಬೆಂಗಳೂರಿನ ಹರಳಕುಂಟೆಯಲ್ಲಿ GAIL ಸಂಕುಚಿತ ಜೈವಿಕ ಅನಿಲ (CBG) ಘಟಕಕ್ಕೆ ಶಂಕುಸ್ಥಾಪನೆ. ವೆಚ್ಚ ₹123 ಕೋಟಿ.
  10. ಅಮೃತ್ ಭಾರತ್ ರೈಲ್ವೆ ನಿಲ್ದಾಣಗಳ ಉದ್ಘಾಟನೆ:
  • ಚಾಮರಾಜನಗರ – ₹22 ಕೋಟಿ
  • ಚಿಕ್ಕಮಗಳೂರು – ₹22 ಕೋಟಿ
  • ಸಕಲೇಶಪುರ – ₹19 ಕೋಟಿ
  • ಸುಬ್ರಹ್ಮಣ್ಯ ರೋಡ್ – ₹24 ಕೋಟಿ
  1. ಬಾಗಲಕೋಟೆ–ವಂಡಾಲ್ 45 ಕಿ.ಮೀ ರೈಲು ಮಾರ್ಗದ ದ್ವಿಪಥ ಕಾಮಗಾರಿಯ ಲೋಕಾರ್ಪಣೆ. ವೆಚ್ಚ ₹294 ಕೋಟಿ.
  2. ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದ 55 ಕಿ.ಮೀ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿಯ ಲೋಕಾರ್ಪಣೆ. ವೆಚ್ಚ ₹100 ಕೋಟಿ.
  3. ಬೆಂಗಳೂರು–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ.

ಇಷ್ಟೆಲ್ಲಾ ಮಹತ್ವದ ಯೋಜನೆಗಳು ಒಂದೇ ಭೇಟಿಯಲ್ಲಿ ಉದ್ಘಾಟನೆ, ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಗೊಂಡಿವೆ.(ಶಂಕರಗೌಡ ಬಿರಾದಾರ್)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments