ಗದಗ: ಅಶ್ವಿನಿ ಪ್ರಕಾಶನದ 5 ನೇಯ ಸಾಹಿತ್ಯ ಸಮ್ಮೇಳನ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು 71 ನೇ ಕನ್ನಡ ರಾಜ್ಯೋತ್ಸವ ಸಮಾರಂಭವು ದಿನಾಂಕ:೧೫-೧೧-೩೦೨೬,ರಂದು
ಡಾ. ವ್ಹಿ. ಬಿ. ಹಿರೇಮಠರ ಮಹಾವೇದಿಕೆ ಯಲ್ಲಿ ನಡೆಯಲಿದೆ
ಡಾ. ವ್ಹಿ. ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ (ರಿ.) ಗದಗ ಹಾಗೂ ಅಶ್ವಿನಿ ಪ್ರಕಾಶನ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಜ್ಞಾನಜ್ಯೋತಿ, ಶಿಕ್ಷಣಪ್ರೇಮಿ ಹಾಗೂ ಕನ್ನಡ ಸಾಹಿತ್ಯದ ಆರಾಧಕರಾದ ದಿವಂಗತ ಡಾ. ವ್ಹಿ. ಬಿ. ಹಿರೇಮಠ ಅವರ 14ನೇ ಪುಣ್ಯಸ್ಮರಣೆ ಹಾಗೂ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ 5ನೇಯ ಸಾಹಿತ್ಯ ಸಮ್ಮೇಳನ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ:15-11-2026 ರವಿವಾರದಂದು ಮಧ್ಯಾಹ್ನ 1 ಗಂಟೆಗೆ ಗದಗದ ಕಳಸಾಪೂರ ರಸ್ತೆಯಲ್ಲಿರುವ ನಿವೃತ್ತ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರನ್ನು ಗುರುತಿಸಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನಗೈದು ಹಾಗೂ ಗೌರವ ಸನ್ಮಾನ ನೆರವೇರಿಸಲಾಗುವುದು.
ಕಾರ್ಯಕ್ರಮದ ಸಾನಿಧ್ಯ ಮತ್ತು ಗಣ್ಯರ ಉಪಸ್ಥಿತಿ
ದಿವ್ಯ ಸಾನಿಧ್ಯವನ್ನು ತುಪ್ಪದ ಕುರಹಟ್ಟಿಯ ಭೂಸನೂಮಠದ ಪರಮಪೂಜ್ಯ ಡಾ. ವಾಗೀಶಪಂಡಿತಾರಾಧ್ಯ ಸ್ವಾಮಿಗಳು ವಹಿಸಲಿದ್ದಾರೆ.
ಸಾನಿಧ್ಯ ಪರಮ ಪೂಜ್ಯ ಡಾ. ವಿಶ್ವನಾಥಮಹಾ ಸ್ವಾಮಿಗಳು ಹಿರೇಮಠ ಬೂದಿಶ್ವರ ಮಠ ರೋಣ.ಇವರು ವಹಿಸಲಿದ್ದಾರೆ
ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಕಲ್ಲಯ್ಯಜ್ಜನವರು ನೇತೃತ್ವ ವಹಿಸಲಿದ್ದಾರೆ.
ವಿಧಾನ ಪರಿಷತ್ ಶಾಸಕರಾದ ಪ್ರೊ. ಎಸ್. ವ್ಹಿ. ಸಂಕನೂರ ಅವರು ಉದ್ಘಾಟಿಸಲಿದ್ದಾರೆ. ಗದಗದ ಮಾಜಿ ಶಾಸಕರಾದ ಶ್ರೀ ಡಿ. ಆರ್. ಪಾಟೀಲ ಅವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.
ಡಾ. ವ್ಹಿ. ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಡಾ. ವ್ಹಿ. ವ್ಹಿ. ಹಿರೇಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಶ್ರೀ ಜೆ. ಕೆ. ಜಮಾದಾರ, ಪತ್ರಕರ್ತರಾದ ಡಾ. ಅನಂತ ಕಾರ್ಕಳ, ಗದಗ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಬಸವರಾಜ ಮೇಟಿ, ನಿವೃತ್ತ ಉಪನ್ಯಾಸಕರಾದ ಪ್ರೊ. ವ್ಹಿ. ಎಂ. ಗುರುಮಠ ಹಾಗೂ ಶ್ರೀ ಇಮಾಮಸಾಬ್ ಮುಕ್ತಮಸಾಬ್ ಮೊರಬದ, ಸಾಯಿರಾ ಡವಲಫರ್, ಗದಗ ಇವರು ಉಪಸ್ಥಿತರಿರುವರು.
ಗ್ರಂಥಗಳ ಬಿಡುಗಡೆ ಹಾಗೂ ಕೃತಿ ಪರಿಚಯ
ಸಮಾರಂಭದಲ್ಲಿ ಅಶ್ವಿನಿ ಪ್ರಕಾಶನದ ವತಿಯಿಂದ ಎರಡು ಕೃತಿಗಳು ಪ್ರಕಟಗೊಂಡಿದ್ದು, ಪ್ರಥಮ ಕೃತಿಯ ಲೇಖಕರು:ಶ್ರೀಮತಿ ಡಾ. ವ್ಹಿ. ವ್ಹಿ. ಹಿರೇಮಠ ಅವರ ಗಾನ ಗಂಧರ್ವ ಶ್ರೀಗುರು ಪುಟ್ಟರಾಜ ಚರಿತಾಮೃತ ಗ್ರಂಥವನ್ನು ಬಿಡುಗಡೆಗೊಳಿಸಲಾಗುವುದು. ಈ ಕೃತಿಯನ್ನು ಪತ್ರಕರ್ತರಾದ ಡಾ. ಅನಂತ ಎಸ್.ಕಾರ್ಕಳರವರು ಪರಿಚಯಿಸಲಿದ್ದಾರೆ.
ದ್ವಿತೀಯ ಕೃತಿಯ ಲೇಖಕರಾದ ಶ್ರೀ ವೀರಯ್ಯ ಹೊಸಮಠರವರ ಚುಟುಕುನೊಂದಿಗೆ ಬದುಕು ಚುಟುಕು ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಲಾಗುವುದು. ಈ ಕೃತಿಯ ಪರಿಚಯವನ್ನು ಶ್ರೀಮತಿ ಶೋಭಾ ಬಸವರಾಜ ಮೇಟಿ ಅವರು ಪರಿಚಯಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಗೀತ ಗಾಯನ ಕಾರ್ಯಕ್ರಮ ಜರುಗಲಿದೆ.
ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ ಡಾ. ನಾರಾಯಣ ಹಿರೇಕೊಳಚಿ, ವಾಯಲಿನ್ ವಾದಕರು ಹಾಗೂ ಪ್ರಾಚಾರ್ಯರು, ಪಿ. ಪಿ. ಜಿ. ಸಂಗೀತ ಮಹಾವಿದ್ಯಾಲಯ, ಗದಗ… ಹಾರ್ಮೋನಿಯಂ ವಾದಕರು ಪಂ. ವ್ಹಿ. ಎಂ. ಪಟ್ಟದಕಲ್ಲ, ತಬಲಾವಾದಕರು.ಪಂ. ವಿ. ಕೆ. ಜ್ಯೋಶಿ ಹಾಗೂ ಪಂ. ವಾಯ್. ಆರ್. ಮೂಲಿಮನಿ ಅವರು ಭಾಗವಹಿಸಲಿದ್ದಾರೆ.
ಭಕ್ತಿ ಗೀತೆಗಳನ್ನು ಸಂಗೀತಗಾರರಾದ ಶ್ರೀ ವೀರಯ್ಯ ಹೊಸಮಠ ಅವರು ಪ್ರಸ್ತುತಪಡಿಸಲಿದ್ದಾರೆ. ಭರತನಾಟ್ಯವನ್ನು ವಿದುಷಿ ರಾಘವಿ ಜ್ಯೋತಿಶ್ರೀ, ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿ (ರಿ.), ಗದಗ ಇವರಿಂದ ಪ್ರದರ್ಶಿಸಲಾಗುವುದು. ಜೂನಿಯರ್ ರವಿಚಂದ್ರನ್ ಎಂದೇ ಪರಿಚಿತರಾದ ಶ್ರೀ ಚಿನ್ನು, ಕೊಪ್ಪಳ ಅವರ ವಿಶೇಷ ಮನರಂಜನಾ ಕಾರ್ಯಕ್ರಮವೂ ನಡೆಯಲಿದೆ.
ಸಭಾನಿರೂಪಣೆ: ಶ್ರೀ ವೀರಯ್ಯ ಹೊಸಮಠ ಹಾಗೂ ಶ್ರೀ ಮಹೇಶ ವಡ್ಡಿನ ಅವರು ನಿರ್ವಹಿಸಲಿದ್ದಾರೆ.
ಕನ್ನಡ ನಾಡು, ನುಡಿ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಿರುವ ಈ ಸಾಹಿತ್ಯ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಾಡಿನ ಮೂಲೆಮೂಲೆಯಿಂದ ಆಗಮಿಸಿದ ಸಾಹಿತ್ಯಾಸಕ್ತರು,ಲೇಖಕರು ಕಲಾವಿದರು, ಸಂಗೀತಗಾರರು ಗುರುಹಿರಿಯರು, ಅಶ್ವಿನಿ ಪ್ರಕಾಶನದ ಸರ್ವ ಸದಸ್ಯರು ಉಪಸ್ಥಿತರಿದ್ದು ಯಶಸ್ವಿಗೊಳಿಸಲು ವಿನಂತಿಪೂರ್ವಕ ಉದ್ದೇಶದಿಂದ ಅಶ್ವಿನಿ ಪ್ರಕಾಶನದ ಕಾರ್ಯದರ್ಶಿ ಯಾದ ಪುಟ್ಟರಾಜಸ್ವಾಮಿ.ಹಿರೇಮಠರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

