ವಿಜಯಪುರ:ಆವಿದ್ಯೆಯು ಜಗತ್ತಿನ ನಾಶಕ್ಕೆ ಕಾರಣವಾಗುತ್ತದೆ. ದ್ವೇಷವೇ ಅತ್ಯಂತ ತೀವ್ರವಾದ ಜ್ವರ ಎಂದು ಹೇಳಿದ ಬುದ್ಧ, ಪ್ರೀತಿ-ಕರುಣೆ-ಬಂಧುತ್ವಗಳೆಂಬ ಮಾನವೀಯ ತತ್ವಗಳಿಂದ ಈ ಜಗತ್ತನ್ನು ರೂಪಿಸಲು ಹೊರಟ ಮಹಾನ್ ವೈದ್ಯನಂತೆ ಕಾಣುತ್ತಾನೆ. ಹೊಸ ಸಮಾಜವನ್ನು ಕಟ್ಟಬಯಸಿದ ಬಸವಣ್ಣ ಮತ್ತವರ ಅನುಯಾಯಿ ಶರಣ ಸಮೂಹ. ಸರ್ವರಲ್ಲೂ ಸಮಾನತೆಯ, ಸಮಭಾವದಿಂದ ನೋಡುವ ಸಮಾಜ ವನ್ನು ಕಟ್ಟಬಯಸಿ ಹೊಸ ಚಳವಳಿಯನ್ನೇ ಹುಟ್ಟುಹಾಕಿದರು. ಡಾ. ಬಾಬಾಸಾಹೇಬ ಅಂಬೇಡ್ಕರ್ ಬರೆಯದೇ ಇರುವ ವಿಷಯಗಳೇ ಇರಲಿಲ್ಲ. ಹಿಂದೂ ಧರ್ಮ, ಜಾತಿ ವ್ಯವಸ್ಥೆ, ಸಮಾನತೆ ಬಗೆಗೆ ಬರೆದ ವಿಶ್ಲೇಷಣೆಗಳು ಜಾತಿಪದ್ಧತಿ ಇರುವವರೆಗೂ ಉಳಿಯುತ್ತದೆ.
ಜಾತಿ ಎಂಬುದು ಮನುಷ್ಯರನ್ನು ಮೇಲು ಕೀಳಾಗಿ ವಿಭಜಿಸಿದರೆ, ಅಸ್ಪೃಶ್ಯತೆ ಎಂಬುದು ಒಂದು ಜನ ವಿಭಾಗವನ್ನು ಮನುಷ್ಯ ಸಮಾಜದಿಂದಲೇ ಹೊರಗೆ ಇಟ್ಟಿತು. ಮನುಷ್ಯತ್ವ, ಪ್ರೀತಿ, ಮಾನವೀಯತೆಯ ಮೂಲಕ ಹೊಸ ಸಮಾಜ ಕಟ್ಟುವದಕ್ಕಾಗಿ, ಆ ಉದೇಶವನ್ನು ಇರಿಸಿಕೊಂಡು ಈ ಪುಸ್ತಕ ಮೇಳವನ್ನು ಬಸವಣ್ಣ ಹುಟ್ಟಿದ ನೆಲದಲ್ಲಿ ನಡೆಸಲಾಗುತ್ತಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರನ್ನು, ಅವರ ಬೌದ್ಧಿಕ ಸಾರವನ್ನು ಇಡಿಯಾಗಿರಿಸಲು ಈ ಪುಸ್ತಕ ಪರಿಷೆ ಒಂದು ಸದವಕಾಶ ಅಷ್ಟೇ.
ಎಲ್ಲ ಶೋಷಿತರಿಗೆ, ಅನ್ಯಾಯಕ್ಕೊಳಗಾದ ಬಡವರಿಗೆ. ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಎಲ್ಲರಿಗೆ, ಆದಿವಾಸಿಗಳಿಗೆ, ಗಿರಿಜನರಿಗೆ ಅಂದರೆ ಸಮಾಜದ ಎಲ್ಲ ನಿಮ್ಮ ವರ್ಗದ ಜನಗಳಿಗೆ ಇರುವ ಮುಖ್ಯ ಬಲವೇ ಸಂವಿಧಾನ. ಅದು ಅಸ್ತವ್ಯಸ್ತ ಗೊಂಡರೆ ನ್ಯಾಯದ ಕಲ್ಪನೆಯೇ ಧೂಳೀಪಟವಾಗುತ್ತದೆ. ಇದರಿಂದ ಅವರೆಲ್ಲರೂ ಸಾಮಾಜಿಕ, ಆರ್ಥಿಕ ಅಂತರವನ್ನು ಮತ್ತಷ್ಟು ಹೆಚ್ಚಿಸಿ ಕೊಳ್ಳುವಂತಾಗುತ್ತದೆ. ಇದನ್ನು ಮನುಷ್ಯರಾಗಿ ಆಲೋಚಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವೂ ಆಗಿದೆ.
ಆ ನಿಟ್ಟಿನಲ್ಲಿ ಒಂದು ಹೊಸ ಅರಿವನ್ನು ವಿಸ್ತರಿಸುವ ಬುದ್ಧ. ಬಸವ, ಅಂಬೇಡ್ಕರರ ಓದು ಇಂದಿನ ಅಗತ್ಯ. ಇಂಥದೇ ಉದ್ದೇಶದಿಂದ 2026, ಏಪ್ರಿಲ್ 10 ರಿಂದ 14 ರವರೆಗೆ ಬಿಜಾಪುರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಬುದ್ದ, ಬಸವ, ಬಾಬಾಸಾಹೇಬ ಅಂಬೇಡ್ಕರ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ಪ್ರಜ್ಞಾ ಪ್ರವಾಹವೇ ಆಗಿರುವ ಮೇ ಸಾಹಿತ್ಯ ಮೇಳ ಬಳಗ ಆಯೋಜಿಸಿರುವ ಈ ಪುಸ್ತಕ ಪರಿಷೆಯಲ್ಲಿ, ನೀವೆಲ್ಲ ನಿಮ್ಮ ಬಳಗದೊಂದಿಗೆ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿ.
“ಇದು ಕೇವಲ ಪುಸ್ತಕ ಮೇಳ ಮಾತ್ರವಲ್ಲ. ಇದೊಂದು
ಸಾಂಸ್ಕೃತಿಕ ಸಮಾವೇಶ”, ಐದು ದಿನಗಳ ಲೇಖಕರ ಮತ್ತು ಓದುಗರ ಮಹಾಮೇಳ, ಅದಕ್ಕಾಗಿ ಲೇಖಕರ ಜೊತೆ ಸಂವಾದ, ವಿದ್ಯಾರ್ಥಿ ಯುವಜನರ ಚಿಂತನೆ, ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲವೂ ಇಲ್ಲಿ ಇರಲಿದೆ. ಪುಸ್ತಕಗಳ ಓದು, ಸಾಮಾಜಿಕ ನ್ಯಾಯ ಮತ್ತು ಜ್ಞಾನದ ಅನ್ವೇಷಣೆಯ ಭಾಗವಾಗಿರುವುದು ಅಷ್ಟೇ ಅಲ್ಲ, ಸಮಾಜದ ಕ್ರಾಂತಿಯ ಭಾಗವೂ, ಚಳವಳಿಯೂ ಆಗಿದೆ. ಈ ಪುಸ್ತಕ ಮೇಳ ಕೂಡ ಜನಚಳವಳಿಯನ್ನು ವಿಸ್ತರಿಸುವ ಹೊಸಹಾದಿಯ ಒಂದು ನಡುಗೆ ಎಂದಷ್ಟೇ ನಾವು ಹೇಳಲು ಇಚ್ಚಿಸುತ್ತೇವೆ.
ದಲಿತಪರ ಚಳವಳಿಗಳಲ್ಲಿ ದಲಿತೇತರರು ಹೆಚ್ಚೆಚ್ಚು ಭಾಗವಹಿಸುವುದು ಇಂದಿನ ಅಗತ್ಯ. ಪ್ರಗತಿಪರರ ಹೋರಾಟಗಳಲ್ಲಿ ದಲಿತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವುದು ಕೂಡ ಅಷ್ಟೇ ಮುಖ್ಯವಾದ ಸಂಗತಿಯಾಗಿದೆ. ಒಟ್ಟಿನಲ್ಲಿ ನಾಡಿನ ಎಲ್ಲ ಪ್ರಗತಿಪರ, ಸಮಾನತೆಯ ಮನಸುಗಳು ಸೇರಿ ಒಂದಾಗಿ ನಿಲ್ಲುವುದು ಈ ಹೊತ್ತಿನ ಅಗತ್ಯವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಬರವಣಿಗೆಗಳು ಮುಖ್ಯವಾಹಿನಿಯ ಕೆಲವೇ ಬುದ್ದಿಜೀವಿ ವರ್ಗಗಳ ಚಿಂತನೆಯಲ್ಲಿ ಬಂಧಿಯಾಗಿರುವಂತೆ ತೋರುವ ಈ ಕಾಲದಲ್ಲಿ ಬಿಜಾಪುರದ ಗೆಳೆಯರೆಲ್ಲ ಸೇರಿ ಇಂಥದೊಂದು ಪುಸ್ತಕ ಮೇಳ ನಡೆಸಲು ಮುಂದಾಗಿದ್ದು ಮುಖ್ಯವಾಗಿ ಚಳವಳಿಯ ದಾರಿಗಳನ್ನು ಮತ್ತಷ್ಟು ವಿಸ್ತರಿಸುವ ಒಂದು ದಾರಿದೀಪ ಅಷ್ಟೇ..
ಸಹಭಾಗಿ ಸಂಘಟನೆಗಳು :
* ಲಡಾಯಿ ಪ್ರಕಾಶನ, ಗದಗ, ಕವಿ ಪ್ರಕಾಶನ, ಕವಲಕ್ಕಿ * ದಲಿತ ಕಲಾ ಮಂಡಳಿ, ಗದಗ • ಚಿತ್ತಾರ ಕಲಾಬಳಗ, ಧಾರವಾಡ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ವಿಜಯಪುರ ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ * ನವಸ್ಫೂರ್ತಿ ಸಂಘ, ವಿಜಯಪುರ * ಸಬಲಾ ಸಂಸ್ಥೆ, ವಿಜಯಪುರ * ಸಾವಿತ್ರಿಬಾಯಿ ಫುಲೆ ಸಂಘ, ವಿಜಯಪುರ ತುಳಸಿಗಿರೀಶ ಫೌಂಡೇಶನ್, ವಿಜಯಪುರ * ಕರ್ನಾಟಕ ರಾಜ್ಯ ಸರಕಾರಿ ಎಸ್.ಸಿ/ಎಸ್.ಟಿ ನೌಕರರ ಸಮನ್ವಯ ಸಮಿತಿ, ವಿಜಯಪುರ ಜನವಾದಿ ಮಹಿಳಾ ಸಂಘಟನೆ, ವಿಜಯಪುರ ಕರ್ನಾಟಕ ರಾಜ್ಯ ಸರ್ಕಾರಿ ಛಲವಾದಿ ನೌಕರರ ಸಂಘ, ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ, ವಿಜಯಪುರ ವೀರಶೈವ ಲಿಂಗಾಯತ ಮಹಾಸಭಾ, ವಿಜಯಪುರ + ಮಾನವ ಬಂಧುತ್ತ ವೇದಿಕೆ, ವಿಜಯಪುರ * ಶರಣ ಸಾಹಿತ್ಯ ಪರಿಷತ್ತು, ವಿಜಯಪುರ ಚಂದ್ರಶೇಖರ ಹೊಸಮನಿ ಫೌಂಡೇಶನ್, ವಿಜಯಪುರ * ವಿಜಯಪುರ ಶಹರ ಅಗ್ಗದರದ ಕಾಳಿನ ಅಂಗಡಿಕಾರರ ಸಂಘ ತನು ಫೌಂಡೇಶನ್, ವಿಜಯಪುರ.
ಐದು ದಿನಗಳ ಕಾರ್ಯಕ್ರಮಗಳು ಹೀಗಿರಲಿವೆ
* ಏಪ್ರಿಲ್ 10- ಪುಸ್ತಕ ಮೇಳ ಉದ್ಘಾಟನೆ. ಡಾ. ಅಂಬೇಡ್ಕರ್ ವೃತ್ತದಿಂದ ಪುಸ್ತಕ ಮೇಳ ಸ್ಥಳದವರೆಗೆ ಪುಸ್ತಕಗಳ ಜೊತೆ ಲೇಖಕರ ಮೆರವಣಿಗೆ
* ಏಪ್ರಿಲ್ 11- ಮಹಾತ್ಮಾ ಜ್ಯೋತಿಬಾ ಫುಲೆ ಜನ್ಮದಿನ. ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದವರೆಗೆ ಶಿಕ್ಷಕ ದಂಪತಿಗಳ ಮೆರವಣಿಗೆ
* ಏಪ್ರಿಲ್ 12- ಬಸವಾದಿ ಶರಣರ ವಚನಗಳ ಕಟ್ಟುಗಳೊಂದಿಗೆ ಬಸವೇಶ್ವರ ವೃತ್ತದಿಂದ ಪುಸ್ತಕ ಮೇಳ ಸ್ಥಳದವರೆಗೆ ಬಸವಾನುಯಾಯಿಗಳ ಮೆರವಣಿಗೆ
* ಏಪ್ರಿಲ್ 13- ಅಸ್ಪೃಶ್ಯರ ಶಿಕ್ಷಣಕ್ಕಾಗಿ ಶ್ರಮಿಸಿದ ಕಾಕಾ ಕಾರಖಾನೀಸ್ ಸ್ಮರಣೆ. ಅವರ ಬೋಡಿರ್ಂಗ್ ನಲ್ಲಿದ್ದು ವಿದ್ಯೆ ಪಡೆದವರು, ಅವರ ಕುಟುಂಬಸ್ಥರಿಂದ ಕಾಕಾ ಕಾರಖಾನೀಸ್ ಅವರ ಮನೆಯಿಂದ ಪುಸ್ತಕ ಮೇಳ ಸ್ಥಳದವರೆಗೆ ಮೆರವಣಿಗೆ * ಏಪ್ರಿಲ್ 14- ಡಾ. ಅಂಬೇಡ್ಕರ್ ಜನ್ಮದಿನ ಡಾ. ಅಂಬೇಡ್ಕರ್ ವೃತ್ತದಿಂದ ಪುಸ್ತಕ ಮೇಳ ಸ್ಥಳದವರೆಗೆ ಸಂವಿಧಾನ ಪೀಠಿಕೆ ಕಂಠಪಾಠ ಮಾಡಿದ ವಿದ್ಯಾರ್ಥಿ ಮತ್ತು ಶಿಕ್ಷಕರಿಂದ ಮೆರವಣಿಗೆ * ಪ್ರತಿದಿನ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕವಿಗೋಷ್ಠಿ, ವಿದ್ಯಾರ್ಥಿಗಳಿಂದ ಪುಸ್ತಕ ಕುರಿತು ಮಾತು, ಲೇಖಕರೊಂದಿಗೆ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿ ಯುವಜನರು,ಪ್ರಗತಿಪರ ಹೋರಾಟಗಾರರು,ಪ್ರಗತಿಪರ ಚಿಂತಕರು,ಸಾಹಿತಿಗಳು,ಕಲಾವಿಧರು,ಕೃಷಿಕರು,ಕಾರ್ಮಿಕರು,ಚಾಲಕರು,ವ್ಯಾಪಾರಿಗಳು,ಮಾಜಿ ಸೈನಿಕರು,ಮಹಿಳೆಯರು ಸೇರಿದಂತೆ ಪುಸ್ತಕ ಪ್ರಿಯ ರೆಲ್ಲರೂ ಭಾಗವಹಿಸಿ ಪುಸ್ತಕ ಜಾತ್ರೆಯ ಸಂಭ್ರಮಾಚರಣೆಯ ಜೊತೆಗೆ ಬುದ್ಧ,ಬಸವ,ಅಂಬೇಡ್ಕರ್ ರವರ ಸನ್ಮಾರ್ಗದ ಮಾನವೀಯ ಸಂಭಂಧಗಳ ಉದ್ಯಮಗಳನ್ನು ಖರೀದಿಸೋಣ.

