Homeಸಾಹಿತ್ಯಹತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜೆಸ್ಕಾಂ ನ ಸಹಾಯಕ ಲೆಕ್ಕಾಧಿಕಾರಿ...

ಹತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜೆಸ್ಕಾಂ ನ ಸಹಾಯಕ ಲೆಕ್ಕಾಧಿಕಾರಿ ಮೊಹಮ್ಮದ್ ಖಾಸಿಂ,

ಕಲಬುರಗಿ: ನವೆಂಬರ್ ೧೫ ರಂದು ನಗರದ ಕನ್ನಡ ಭವನದಲ್ಲಿ ಆಯೋಜಿಸಿರುವ ಒಂದು ದಿನದ ತಾಲೂಕಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಕನ್ನಡ ಭವನದ ಅಂಗಳ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಕನ್ನಡ ಮನಸ್ಸುಗಳ ಸ್ವಾಗತಕ್ಕೆ ಸಜ್ಜಾಗಿದೆ. ಹಾಗೆಯೇ ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿಯೊಂದನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಜೆಸ್ಕಾಂ ನ ಸಹಾಯಕ ಲೆಕ್ಕಾಧಿಕಾರಿ ಮೊಹಮ್ಮದ್ ಖಾಸಿಂ, ಕಾರ್ಯಾಧ್ಯಕ್ಷರಾಗಿ ಉದ್ಯಮಿ ಶರಣಬಸಪ್ಪ ಆರ್. ಪಾಟೀಲ ಹಾಗೂ ಟೆಂಗಳಿಯ ಶ್ರೀ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ಬಿ ವಾಲಿ ಅವರು ಆಯ್ಕೆಗೊಂಡ ಹಿನ್ನೆಲೆ ಅವರನ್ನು ಸತ್ಕರಿಸಿ ಅಧಿಕೃತ ಆಹ್ವಾನ ನೀಡಲಾಯಿತು.

ಸತ್ಕರಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕನ್ನಡ ನಾಡು-ನುಡಿ, ನೆಲ-ಜಲ, ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಈ ಸಮ್ಮೇಳನ ಮಾಡಲಿದೆ. ಇಂದು ಪ್ರತಿಯೊಬ್ಬರೂ ತಮ್ಮ ನಿತ್ಯದ ಬದುಕಿನಲ್ಲಿ ಕನ್ನಡ ಭಾಷೆಯನ್ನು ಬಳಸುವುದು ಮತ್ತು ಮುಂದಿನ ಪೀಳಿಗೆಗೆ ನಮ್ಮ ಮೂಲ ಸಂಸ್ಕೃತಿಯನ್ನು ಮುಟ್ಟಿಸುವ ನಿಜವಾದ ಆಶಯ ಸಮ್ಮೇಳನ ಹೊಂದಿದೆ ಎಂದರು.

ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ತಾಲೂಕಾಧ್ಯಕ್ಷೆ ಶಿವಲೀಲಾ ಕಲಗುರ್ಕಿ, ಪ್ರಮುಖರಾದ ಧರ್ಮರಾಜ ಜವಳಿ, ಹಣಮಂತರ ಪ್ರಭು, ರವೀಂದ್ರಕುಮಾರ ಭಂಟನಳ್ಳಿ, ಮಹಾನಂದಾ ಹುಲಿ, ನೀಲಾಂಬಿಕಾ ಚೌಕಿಮಠ, ಚಂದ್ರಕಾಂತ ಸೂರನ್, ಪರಮಾನಂದ ಸರಸಂಬಿ, ಹೆಚ್ ಎಸ್ ಬರಗಾಲಿ, ರೇವಣಸಿದ್ದಪ್ಪ ಜೀವಣಗಿ, ಭೀಮಾಶಂಕರ ಅಂಕಲಗಿ, ರಾಜೇಂದ್ರ ಮಾಡಬೂಳ, ಪ್ರಭವ ಪಟ್ಟಣಕರ್, ಈರಣ್ಣ ಸೋನಾರ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಸೋಮಶೇಖರಯ್ಯ ಹೊಸಮಠ, ಚಂದ್ರಕಾಂತ ಸೂರನ್, ಶಿವಕುಮಾರ ಸಿ.ಎಚ್., ವಿವೇಕಾನಂದ, ಪದ್ಮಾವತಿ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments