Thursday, August 21, 2025
Homeಸಾರ್ವಜನಿಕ ಧ್ವನಿಹೊರ ರಾಜ್ಯದಿಂದ ಬಂದಿರುವ ಖಾಸಗಿ ಕೇಬಲ್ ಕಂಪನಿಗಳು ದಾಳಿ ಮಾಡುತ್ತಿರುವುದನ್ನು ಖಂಡಿಸಿ ಕ.ರ.ವೆ ಬೈಕ್ ರ್ಯಾಲಿ

ಹೊರ ರಾಜ್ಯದಿಂದ ಬಂದಿರುವ ಖಾಸಗಿ ಕೇಬಲ್ ಕಂಪನಿಗಳು ದಾಳಿ ಮಾಡುತ್ತಿರುವುದನ್ನು ಖಂಡಿಸಿ ಕ.ರ.ವೆ ಬೈಕ್ ರ್ಯಾಲಿ

ದಾವಣಗೆರೆ :ಕರವೇ ಜಿಲ್ಲಾ ಘಟಕ ಮತ್ತು ದಾವಣಗೆರೆ ನಗರ ಗ್ರಾಮಾಂತರ ಕೇಬಲ್ ಆಪರೇಟರ್ ಅಸೋಸಿಯನ್ ವತಿಯಿಂದ ಶಾಮನೂರ್ ರಸ್ತೆಯಲ್ಲಿರುವ ಕಸಲ್ ವಿಠಲ ಪಾರ್ಕ್ ನಿಂದ ಬೈಕ್ ರಾಲಿ ಹೊರಟ ಎಸ್ ಋಎಸ್ ಬಡಾವಣೆ ರಿಂಗ್ ರಸ್ತೆ ಮೂಲಕ ಅಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಯಾದ ಶಿವಾನಂದ್ ಕಾಪಸಿ ಇವರಿಗೆ ಮನವಿ ಸಲ್ಲಿಸಲಾಯಿತು
ದಾವಣಗೆರೆ ಜಿಲ್ಲಾ ಘಟಕ ಕರ್ನಾಟಕ ರಕ್ಷಣಾ ವೇದಿಕೆ ಕಳೆದ 25 ವರ್ಷಗಳ ಪಾದಾರ್ಪಣೆ ಮಾಡುತ್ತಿರುವ ನಾಡು ನುಡಿ ಭಾಷೆ ಸಂಸ್ಕಾರ ಸಂಸ್ಕೃತಿ ಕನ್ನಡಿಗರ ಬದುಕನ್ನ ಕಟ್ಟುವ ನಿಟ್ಟಿನಲ್ಲಿ ತನ್ನದೇ ಆದಂತ ಹೋರಾಟ ಮಾಡುವ ಮೂಲಕ ಜನಮನ ಪಡೆದಿರುವುದು ತಮಗೆಲ್ಲಾ ತಿಳಿದಿರುವ ವಿಚಾರ. ಈಗ ಹೊರ ರಾಜ್ಯದಿಂದ ಬಂದಿರುವ ಖಾಸಗಿ ಕಂಪನಿಗಳು ದಾಳಿ ಮಾಡುತ್ತಿರುವುದನ್ನು ಖಂಡಿಸುತ್ತದೆ.
ದಾವಣಗೆರೆ ನಗರ ಮತ್ತು ಗ್ರಾಮಾಂತರ ಕೇಬಲ್ ಆಪರೇಟರ್ ಗಳ ಅಸೋಸಿಯೇಷನ್ ಸುಮಾರು 35 ವರ್ಷಗಳಿಂದ ಸ್ಥಳೀಯ ಕೇಬಲ್ ವೃತ್ತಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ದಾವಣಗೆರೆ ಜಿಲ್ಲಾ, ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಕೇಬಲ್ ಮೂಲಕ ಸಮಸ್ತ ನಾಗರಿಕರಿಗೆ ಮನರಂಜನೆ ಮತ್ತು ಸುದ್ದಿ ಪ್ರಸಾರ ಮಾಡುತ್ತಿರುವ ಕೇಬಲ್ ಆಪರೇಟರ್ ಗಳ ಬದುಕು ಇಂದು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ದಾವಣಗೆರೆ ನಗರದಲ್ಲಿ ಸ್ಥಳೀಯ 5 ಕೇಬಲ್ ನೆಟವರ್ಕ್ ಗಳಾದ ಮೆಟ್ರೋ ಕಾಸ್ಟ್ ಬಸವ ಕೇಬಲ್ ನೆಟವರ್ಕ್, ಗ್ಲೋಬಲ್ ವ್ಹಿಜನ್, ಹಾಥ್ ವೇ ಡಿಜಿಟಲ್ ಲಿಮಿಟೆಡ್ ಮತ್ತು ವಿಕ್ಟರಿ ಡಿಜಿಟಲ್ ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೂ ಸಹ ಈ ಕೇಬಲ್ ಆಪರೇಟರ್ ಗಳೇ ಜೀವಾಳ.

ಜಿಯೋ/ಏರ್ ಟೆಲ್ ಕಂಪನಿಯವರು ರಾಜ್ಯಾದ್ಯಾಂತ ಯೂನಿಫೈಡ್ ಟೆಲಿಕಾಂ ಲೈಸನ್ಸ್ ಹೊಂದಿದ್ದು ಇವರಿಗೆ ಕೇಬಲ್ ಟಿ ವಿ ಸಂಪರ್ಕ ಕೊಡುವ ಹಕ್ಕಿರುವುದಿಲ್ಲ. ಆದರೂ ಅನಧಿಕೃತವಾಗಿ ನೀಡುತ್ತಿದ್ದು ಕೇಬಲ್ ಆಪರೇಟರ್ ಗಳ ಮೇಲೆ ದುಷ್ಪರಿಣಾಮ ಬೀರಿದೆ.
ನಗರ ವ್ಯಾಪ್ತಿ ಮತ್ತು ದಾವಣಗೆರೆ ಜಿಲ್ಲೆ ವ್ಯಾಪ್ತಿ ಇಂಟರ್ ನೆಟ್ ಸಂಪರ್ಕದ ನೆಪದಲ್ಲಿ ನೇರವಾಗಿ ಗ್ರಾಹಕರಿಗೆ ಸೆಟ್ ಅಪ್ ಬಾಕ್ಸ್ ಮುಖಾಂತರ ಮನೋರಂಜನೆ ಹಾಗೂ ಸುದ್ದಿ ವಾಹಿನಿಗಳನ್ನು ನೇರವಾಗಿ ಪ್ರಸಾರ ಮಾಡುತ್ತಿದ್ದಾರೆ.
ಜಿಯೋ ಮತ್ತು ಏರ್ ಟೆಲ್ ಸಂಸ್ಥೆಯವರು ಇಂಟರ್ ನೆಟ್ ಸೇವೆಯನ್ನು ಸಾರ್ವಜನಿಕರಿಗೆ ನೀಡಿದರೆ ನಮ್ಮ ಅಭ್ಯಂತರವಿಲ್ಲ ಈ ಸೇವೆಯ ಜೊತೆಗೆ ಕೇಬಲ್ ಟಿ.ವಿ. ಸಂಪರ್ಕ ಕೊಡಲು ಮುಂದಾಗಿದ್ದಾರೆ. ಇದಕ್ಕೆ ಕರವೇ ಹಾಗೂ ದಾವಣಗೆರೆ ನಗರ ಹಾಗೂ ಗ್ರಾಮಾಂತರ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸುತ್ತದೆ.
ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಕ್ಕೆ ಆಗುವುದಿಲ್ಲ. ಆದರೆ ಸುಮಾರು 35 ವರ್ಷಗಳಿಂದ ದಾವಣಗೆರೆ ಜಿಲ್ಲೆಯಲ್ಲಿ 400 ಕ್ಕೂ ಹೆಚ್ಚು ಕೇಬಲ್ ಆಪರೇಟರ್ ಗಳು ಸಣ್ಣ ಬದುಕನ್ನ ಕಟ್ಟಿಕೊಂಡಿದ್ದಾರೆ ಆದರೆ ಜಿಯೋ ಕಂಪನಿ ಈ ಬದುಕನ್ನು ಬೀದಿಗೆ ತರುವಂತಹ ಕೆಲಸ ಮಾಡುತ್ತಾ ಇದೆ. ಕೇಬಲ್ ನಿಂದ ಜೀವನ ನಡೆಸುತ್ತಿರುವ ಸುಮಾರು 10000 ಜನ ಬೀದಿಗೆ ಬೀಳುತ್ತಾರೆ. ಇವರೆಲ್ಲರೂ ಸ್ಥಳೀಯ ಕನ್ನಡಿಗರು ಆಗಿರುತ್ತಾರೆ.
ಹೊರ ರಾಜ್ಯದಿಂದ ಬಂದಂತ ಇಂತಹ ಕಂಪನಿಗಳು ನಮ್ಮ ಕನ್ನಡಿಗರ ಮೇಲೆ ದೌರ್ಜನ್ಯವನ್ನು ನಡೆಸುತ್ತಿದ್ದಾರೆ. ಈಗ ಕೇಬಲ್ ಆಪರೇಟರ್ ಗಳು ಅವರ ಬದುಕು ಹಸನಾಗಬೇಕಾದರೆ ತಾವುಗಳು ತಕ್ಷಣ ದಾವಣಗೆರೆಯಲ್ಲಿರುವ ಜಿಯೋ ಹಾಗೂ ಏರ್ಟೆಲ್ ಕಂಪನಿಯ ಆಡಳಿತ ಮಂಡಳಿ ಅವರನ್ನು ಹಾಗೂ ದಾವಣಗೆರೆ ನಗರ ಮತ್ತು ಗ್ರಾಮಾಂತರ ಕೇಬಲ್ ಆಪರೇಟರ್ ಸಂಘ ದ ಜೊತೆ ಸಭೆ ಮಾಡುವ ಮೂಲಕ ಸೌಹಾರ್ದಯುತವಾಗಿ ಏರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೇಬಲ್ ಆಪರೇಟರ್ಗಳಾದ ಓ ಮಹೇಶ್ವರಪ್ಪ .ಸುನಿಲ್ ಜಾದವ್ .ಬಾಬುರಾವ್ .ನಾಗರಾಜಯ್ಯ .ಕೇಶವ್ ಗೌಡ‌. ಸುನಿಲ್. ಶಾಂತಪ್ಪ .ಮಹಾಂತೇಶ್ . ಇದಾಯ್ತು. ಸವಿತಾ . ಗೌರಮ್ಮ.ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಶ್ರೀಮತಿ ಬಸಮ್ಮ. ಮಂಜುಳಾ ಮಾಂತೇಶ್ ಮಂಜುಳ ಗಣೇಶ್ ಜಿ ಎಸ್ ಸಂತೋಷ್. ಎಂಡಿ ರಫೀಕ್. ಜಬಿವುಲ್ಲಾ .ಮಲ್ಲಿಕಾರ್ಜುನ್. ಖಾದರ್ ಭಾಷಾ ಎನ್ ಟಿ.ಹನುಮಂತಪ್ಪ .ಸುನಿಲ್. ನಾಗರಾಜ್. ಮಧು . ರವಿ ಕುಮಾರ್. ಮಂಜುನಾಥ್. ಕರಿ ಬಸವರಾಜ್ .ಮಲ್ಲಿಕಾರ್ಜುನ್ ಜಯಪ್ಪ. ಮೂರ್ತಿ. ಉಮೇಶ್ .ಮಲ್ಲಿಕಾರ್ಜುನ್ . ರಾಜು .ಹಾಲೇಶ್ . ಮಂಜಣ್ಣ .ಬಸಣ್ಣ. ಮತ್ತಿತರ ರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments