Saturday, December 21, 2024
Homeಸಂಸ್ಕೃತಿಬಕ್ರೀದ್ ಶಾಂತಿ ಸಭೆ ಸೌಹಾರ್ದತೆಯಿಂದ ಹಬ್ಬ ಆಚರಿಸಿ — ಪಿಎಸ್ಐ ಶ್ರೀ ಶ್ರೀಕಾಂತ್ ಕಾಂಬಳೆ

ಬಕ್ರೀದ್ ಶಾಂತಿ ಸಭೆ ಸೌಹಾರ್ದತೆಯಿಂದ ಹಬ್ಬ ಆಚರಿಸಿ — ಪಿಎಸ್ಐ ಶ್ರೀ ಶ್ರೀಕಾಂತ್ ಕಾಂಬಳೆ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿಂದು   ಬಕ್ರೀದ್ ಹಬ್ಬವನ್ನು ಸಕಲರು ಸೌಹಾರ್ದತೆಯಿಂದ ಶಾಂತಿಯುತವಾಗಿ ಆಚರಿಸಬೇಕಿದೆ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿ ಮಾಡಲಾಗುತ್ತದೆ ಎಂದು ಪಿಎಸ್ಐ ಶ್ರೀಕಾಂತ ಕಾಂಬಳೆ ಅವರು ಜೂನ್ 25ರಂದು ಠಾಣೆಯಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಮಾತನಾಡಿದರು, ಬೈಕ್ ಗಳನ್ನು ಮಕ್ಕಳಿಗೆ ಪೋಷಕರು ಕೊಡಬಾರದು. ವಾಹನಗಳನ್ನು ಚಲಾಯಿಸುವಾಗ ಸರ್ವರೂ ಚಾಲನೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ, ಬಕ್ರೀದ್ ಹಬ್ಬದಂದು ಪ್ರಾರ್ಥನಾ ಮಂದಿರ ಸೇರಿದಂತೆ ವೃತ್ತಗಳಲ್ಲಿ ಪೊಲೀಸ್ ರನ್ನು ನಿಯೋಜಿಸಲಾಗಿರುತ್ತೆ. ಭಾರೀ ವಾಹನಗಳು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿ, ಸುಗಮ ಸಂಚಾರಕ್ಕೆ ಸೂಕ್ತಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹಬ್ಬ ಹರ್ಷದ ಸಂಕೇತ ಕಾರಣ ಎಲ್ಲಾ ಪಂಗಡದ ಜಾತಿಯವರೆಲ್ಲರೂ ಸೇರಿ, ಸೌಹಾರ್ಧತೆಯಿಂದ ಶಾಂತಿಯುತವಾಗಿ ಸಂತಸದಿಂದ ಬ್ರಕ್ರೀದ್ ಹಬ್ಬ ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ
ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು, ಕೈಗೊಂಡಿರುತ್ತದೆ ಜೊತೆಗೆ ಸಾರ್ವಜನಿಕರ ಸರ್ವ ಸಮುದಾಯಗಳ ಸಹಕಾರ ಅತ್ಯಗತ್ಯ ಎಂದರು. ಮೊಬೈಲ್ ಅಥವಾ ಬಿತ್ತಿಪತ್ರಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ, ಯಾವುದೆ ವ್ಯಕ್ತಿಗಳ ಹಾಗೂ ಯಾವುದೇ ಧರ್ಮ ಜಾತಿ ಸಮಾಜದ ಘನತೆಗೆ ಧಕ್ಕೆ ಬರುವಂತಹ ಸಂದೇಶಗಳನ್ನು ರವಾನಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಚಟುವಟಿಕೆಗಳಲ್ಲಿ ನಿರತರಾಗಿರುವ ಶಂಕಿತರ ಮೇಲೆ ಇಲಾಖೆ ತೀವ್ರ ನಿಗಾ ವಹಿಸಿರುತ್ತದೆ, ಅದು ಅಕ್ಷಮ್ಯ ಸೈಬರ್ ಅಪರಾಧವಾಗಿದ್ದು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಕಾರಣ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಚಲನ ವಲನಗಳ ಮೇಲೆ ನಿಗಾ ಇಡಬೇಕಿದೆ, ಅವರು ಕಳುಹಿಸುವ ಸಂದೇಶಗಳ ಬಗ್ಗೆ ವಿಚಾರಿಸಬೇಕಿದೆ ಎಂದು ಸಲಹೆ ನೀಡಿದರು. 

ಹರ್ಷ ಸಂತಸದ ಸಮಯದಲ್ಲಿ ಮಕ್ಕಳು ಮಾಡುವ ಕೆಲವು, ಲೋಪ ದೋಷಗಳಿಂದಾಗಿ ಸೂತಕದ ವಾತಾವರಣ ನಿರ್ಮಾಣವಾಗದಿರಲಿ. ಕಾರಣ ಹಬ್ಬವನ್ನು ಸರ್ವರೂ ಸಹಬಾಳ್ವೆಯಿಂದ ಶಾಂತಿ ಸೌಹಾರ್ದತೆಯಿಂದ, ಹಬ್ಬವನ್ನು ಆಚರಿಸಲು ಮಕ್ಕಳು ಮಹಿಳೆಯರು ಹಿರಿಯರು ಸರ್ವರೂ ಕೈಜೋಡಿಸೋಣ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಶ್ರೀಕಾಂತ ಕಾಂಬಳೆ ಮಾತನಾಡಿ, ಮನಗೂಳಿ ಶಾಂತಿ ಸೌಹಾರ್ದತೆಗೆ ಹೆಸರಾಗಿದೆ ,ಕಾರಣ ಸರ್ವರೂ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕಿದೆ. ಸರ್ವರೂ ಶಾಂತಿ ಯುತವಾಗಿ ಅರ್ಥಪೂರ್ಣವಾಗಿ ಹರ್ಷದಿಂದ ಸಂತಸದಿಂದ ಬಕ್ರೀದ್ ಹಬ್ಬ ಆಚರಿಸಿ ನಾಗರಿಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದೆ ಎಂದರು.ಸಭೆಯಲ್ಲಿ ಮುಸ್ಲೀಂ ಸಮಾಜದ ಮುಖಂಡರಾದ ಮಾತನಾಡಿದರು.  ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಜೆಡಿಎಸ್ ಮುಖಂಡರಾದ ಶ್ರೀ ಸೋಮನಗೌಡ ಪಾಟೀಲ್ , ಎಪಿಎಂಸಿ ಅಧ್ಯಕ್ಷರಾದ ವಿಶ್ವನಾಥ್ ಗೌಡ ಪಾಟೀಲ್,  ಹಾಗೂ ಎಲ್ಲಾ ಮುಸ್ಲಿಂ ಬಾಂಧವರು ಹಾಗೂ ದಲಿತರು ,ಎಲ್ಲಾ ಜಾತಿಯ ಮುಖಂಡರು ಜೊತೆಗೆ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು ಈ ಸಭೆಯಲ್ಲಿ ಹಾಜರಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments