ವಿದ್ಯುತ್ ದರ ಏರಿಕೆಯಿಂದ ಉದ್ಯಮಕ್ಕೆ ತೊಂದರೆ ಆಗಿರುವುದಾಗಿ ಹೇಳಿದ್ದ ಕೈಗಾರಿಕಾ ಉದ್ಯಮಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಕೈಗಾರಿಕಾ ಸಂಸ್ಥೆಗಳು ಹಾಗೂ ಅವುಗಳ ವೃತ್ತಿಪರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಇಂಧನ ಸಚಿವರು ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಈದಿನ ವಿಧಾನಸೌಧದಲ್ಲಿ ಸಭೆಯನ್ನು ನಡೆಸಿ, ಚರ್ಚಿಸಿದರು. ಮಾನ್ಯ ಮುಖ್ಯಮಂತ್ರಿಗಳ ಅವರ ಜತೆ ರ‍್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಸಚಿವರಾದ ಎಮ್.ಬಿ.ಪಾಟೀಲರು ನೀಡಿದ್ದಾರೆ. ಇಂಧನ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನರ‍್ದೇಶಕರಾದ ಶ್ರೀ. ಪಂಕಜಕುಮಾರ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನರ‍್ದೇಶಕರಾದ ಶ್ರೀ ಮಹಾಂತೇಶ ಬೀಳಗಿ ಸಭೆಯಲ್ಲಿ ಉಪಸ್ಥಿತರಿದ್ದರು.