ದಾವಣಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಸಮಿತಿಯಿಂದ ಜುಲೈ ಒಂದರಂದು ಹರ್ಡೇಕರ್ ಮಂಜಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬೆಳಿಗ್ಗೆ ಒಂಬತ್ತು ಗಂಟೆಗೆ ಸಾಂಕೇತಿಕವಾಗಿ ಆಚರಿಸಿ ಸಂಜೆ ನಾಲ್ಕು ಗಂಟೆಗೆ ನಗರದ ಪ್ರತಿಷ್ಠಿತ ಹೋಟೆಲ್ ಸಭಾಂಗಣದಲ್ಲಿ ಪತ್ರಕರ್ತಸದಸ್ಯರುಗಳಿಗೆ ಗುರುತಿನ ಕಾರ್ಡ್ ವಿತರಣೆ ಮಾಡಲಾಯಿತು. ಮತ್ತು ಪತ್ರಕರ್ತರಾದ ಶ್ರೀ ಎನ್ ವಿ.ಬದರಿನಾಥ್ ರವರ ವಿವಾಹದ ಹದಿನೈದನೆಯ ವಾರ್ಷಿಕೋತ್ಸವ ಮತ್ತು ಶ್ರೀ ವೀರೇಶ್ ರವರ ವಿವಾಹದ ಇಪ್ಪತ್ತೈದನೇಯ ವಾರ್ಷಿಕೋತ್ಸವದ ಪ್ರಯುಕ್ತ ಈ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಯಕೊಂಡ ವಿಧಾನಸಭಾ ಶಾಸಕರಾದ ಶ್ರೀ ಬಸವಂತಪ್ಪ ನವರು, ಹೊಟೇಲ್ ಉದ್ಯಮಿ ಶ್ರೀ ಅಣಬೇರು ರಾಜಣ್ಣನವರು, ಮಹಾನಗರಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಮ್ಮ ನವರು, ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಜಿ ಸಿ.ಲೋಕೇಶ್ ರವರು ಮತ್ತು ಹಿರಿಯ ಪತ್ರಕರ್ತರಾದ ಬಸವರಾಜ ಐರಣಿ ಯವರು ಭಾಗವಹಿಸಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಬದರಿನಾಥ್ ಹಾಗೂ ವಿರೇಶ್ ದಂಪತಿಗಳಿಗೆ ಸನ್ಮಾನ
RELATED ARTICLES