ಮೂಡಲಗಿ: ಜು,11-ಪಟ್ಟಣದ ಶ್ರೀ ಕಲ್ಲೇಶ್ವರ ವೃತ್ತದಲ್ಲಿ ಜೈನಮುನಿಗಳು ಕಾಮಕುಮಾರ ನಂದಿ ಮಹಾರಾಜರು ಕೊಲೆ ಮಾಡಿದಕ್ಕಾಗಿ ಜೈನ ಸಮಾಜದ ಮುಖಂಡರು,ವಿಶ್ವ ಹಿಂದೂ ಪರಿಷತ್ತು,ಭಜರಂಗದಳ ಮತ್ತು ಎಲ್ಲ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುಮಾರು 15 ವರ್ಷಗಳಿಂದ ನಂದಿ ಪರ್ವತದಲ್ಲಿ ಕಾಮಕುಮಾರ ನಂದಿ ಮಹಾರಾಜರು ಧಾರ್ಮಿಕ ಸೇವೆ ಮಾಡುತ್ತಾ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದರು.ಸಾತ್ವಿಕ ಹಾಗೂ ಪಾರಮಾರ್ಥಿಕ ಚಿಂತನೆ ಮೂಲಕ ಕರ್ನಾಟಕ ಮತ್ತು ಮಹಾಷ್ಟ್ರದ ಬಹುಸಂಖ್ಯಾತ ಭಕ್ತರನ್ನು ಹೊಂದಿದ ವೈರಾಗ್ಯ ಮೂರ್ತಿಗಳಾದ ಕಾಮಕುಮಾರ ಮಹಾರಾಜ ಮುನಿಗಳ ಹತ್ಯೆಯನ್ನು ದುಷ್ಕರ್ಮಿಗಳು ಅಮಾನುಷವಾಗಿ ಮಾಡಿರುವುದು ಅತ್ಯಂತ ಅಸಹನಿಯ ಮತ್ತು ಹೆಯಕರ ಕೃತ್ಯವಾಗಿದ್ದು ಇಂತಹ ಸಮಾಜಘಾತುಕ ಕೊಲೆಗಡುಕ ದುಷ್ಕರ್ಮಿಗಳ ವಿರುದ್ದ ಪೊಲೀಸ್ ಇಲಾಖೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಶ್ರೀಗಳ ಹತ್ಯೆಯ ಹಿಂದಿರುವ ದುಷ್ಟಶಕ್ತಿಗಳನ್ನು ಬಂದಿಸಿ ಗಲ್ಲು ಶಿಕ್ಷೆ ವಿಧಿಸಬೇಕು.
ಅಹಿಂಸಾ ಪರಮೋಧರ್ಮ ಎಂದು ಬೋಧಿಸುವ ಜೈನಮುನಿಗಳ ಹತ್ಯೆ ಮಾಡಿರುವುದು ಖಂಡನಿಯ.ಈ ಬಗ್ಗೆ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಶ್ರೀಗಳ ಹತ್ಯೆ ಯಿಂದ ಅಪಾರ ದು:ಖದಲಗಲ್ಲಿರುವ ಜೈನ ಸಮುದಾಯಕ್ಕೆ ಎಲ್ಲ ಸಮಾಜದವರು ಬೆಂಬಲ ನೀಡಿದ್ದಾರೆ.ಹತ್ಯೆ ಪ್ರಕರಣದ ಸಿಬಿಐಗೆ ತನಿಖೆಗೆ ಒಳಪಡಿಸಬೇಕೆಂದು ರಾಜ್ಯ ಸರ್ಕಾರದ ಗೃಹ ಸಚಿವರಾದ ಶ್ರೀ ಜಿ.ಪರಮೇಶ್ವರ ಅವರಿಗೆ ಮೂಡಲಗಿ ತಹಶಿಲ್ದಾರಾದ ಶಿವಾನಂದ ಬಬಲಿಯವರ ಮೂಲಕ ಮನವಿಯನ್ನು ಸಲ್ಲಿಸಲ್ಲಿಸಿದರು ಹಾಗೂ ಪಿ ಎಸ್ ಆಯ್ ಎಚ್.ವಾಯ್ ಬಾಲದಂಡಿ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡರಾದ ಪ್ರಕಾಶ ಮಾದರ ಮಾತನಾಡಿ ಮಹಾ ಜೈನಮುನಿಗಳನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾರೆ.ಕೆವಲ 6 ಲಕ್ಷ ರೂಪಾಯಿ ಹಣಕ್ಕಾಗಿ ಕೊಲೆ ಮಾಡಿದ್ದೇವೆ ಎಂದು ಕೊಲೆ ಮಾಡಿದವರು ಹೇಳುತ್ತಾರೆ. ಇದು ನಂಬಲು ಅಸಾಧ್ಯ.ಹತ್ಯೆ ಹಿಂದಿನ ಮರ್ಮ ಏನೆಂದು ಹೊರ ಬರಬೇಕು ಮುನಿಗಳ ಸಾವಿಗೆ ಕಾರಣವಾದ ರಾಕ್ಷಸರಿಗೆ ತಕ್ಕ ಶಿಕ್ಷೆ ಆಗಬೇಕು ಎಂದರು.
ಶ್ರೀ1008 ಭಗವಾನ ಮಹಾವೀರ ದಿಗಂಬರ ಜೈಜ ಮಂದಿರ ಟ್ರಷ್ಟ,ಮೂಡಲಗಿ ಅಧ್ಯಕ್ಷ ವರ್ಧಮಾನ ಬೋಳಿ ಜೈನ ಸಮಾಜವು ವಿಶ್ವಕ್ಕೆ ಮಾದರಿ,ಜೈನ ಮುನಿಗಳು ಅಹಿಂಸಾವಾದಿಗಳು ಹೀಗಿರುವಾಗ ಹಿಂಥ ಹಿನಕೃತ್ಯ ಮಾಡಿದ್ದಾರೆ. ಅವರಿಗೆ ಕೊಡುವ ಶಿಕ್ಷೆ ನೋಡಿ ಮತ್ಯಾರು ಈ ರೀತಿಯಾಗಿ ಕೊಲೆ ಮಾಡಬಾರದು ಆ ರೀತಿಯಾಗಿ ಶಿಕ್ಷೆ ಆಗಬೇಕು ಅಂತ ಹೇಳದರು.ಇನ್ನು ಅನೇಕರು ಮಾತನಾಡಿದರು. ಕಾರ್ಯದರ್ಶಿ ರವಿ ಪಟ್ಟಣಶಟ್ಟಿ,ಸದಸ್ಯರುಗಳಾದ/ಜೈನ ಸಮಾಜದ ಹಿರಿಯರು ಡಾll ಬಿ.ಎಸ್.ಬಾಬಣ್ಣವರ,ನೇಮಣ್ಣ ಬೇವಿನಕಟ್ಟಿ,ಲಕ್ಷ್ಮಣ ಸಪ್ತಸಾಗರ,ಪರೀಶ ಹುಕ್ಕೇರಿ, ಮಾನಿಕ ಬೋಳಿ,ಎಸ್.ಆರ್.ಉಪ್ಪಿನ,ಸುಧಾಕರ ಉಂದ್ರಿ,ಬಿ.ಕೆ.ಸಾವಂತನವರ ಮತ್ತು ಇನ್ನುಳಿದ ಸಮಾಜದವರು ಡಾllಎಮ್.ಬಿ.ಪಾಲಭಾವಿ,ಮಲ್ಲಪ್ಪ ನೇಮಗೌಡರ,ಮಲ್ಲಪ್ಪ ಮದುಗುಣಕಿ,ಜಗದೀಶ ತೇಲಿ,ಮಹಾದೇವ ಶಕ್ಕಿ,ಸತೀಶ ಲಂಕೆಪ್ಪನ್ನವರ,ಈರಪ್ಪ ಢವಳೇಶ್ವರ,ಕೇದಾರಿ ಭಷ್ಮೆ ಇನ್ನು ಅನೇಕ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜೈನಮುನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ
RELATED ARTICLES