Saturday, December 21, 2024
Homeಆರೋಗ್ಯಪತ್ರಕರ್ತರಿಗೆ ಆರೋಗ್ಯ ವಿಮೆ ಕಾರ್ಡ್ ವಿತರಣೆ

ಪತ್ರಕರ್ತರಿಗೆ ಆರೋಗ್ಯ ವಿಮೆ ಕಾರ್ಡ್ ವಿತರಣೆ

ಬೆಳಗಾವಿ ಜು.10: ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಕಾರ್ಯನಿರತ ಪತ್ರಕರ್ತರಿಗೆ ಒದಗಿಸಲಾಗಿರುವ ಆರೋಗ್ಯ ವಿಮೆ ಸೌಲಭ್ಯದ ಕಾರ್ಡುಗಳನ್ನು ಮಹಾಪೌರರಾದ ಶೋಭಾ ಸೋಮನಾಚೆ ಅವರು ವಿತರಿಸಿದರು.

ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಸೋಮವಾರ (ಜು.10) ಒಟ್ಟು 88 ಪತ್ರಕರ್ತರಿಗೆ ಹಾಗೂ ಅವರ ಕುಟುಂಬದವರಿಗೆ ಅನ್ವಯವಾಗುವಂತೆ ಆರೋಗ್ಯ ವಿಮೆ ಕಾರ್ಡ್ ಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಆರೋಗ್ಯ ವಿಮಾ ಕಂಪನಿಯ ಪ್ರತಿನಿಧಿ ಶ್ರೀಕಾಂತ ಗುನಾರಿ ಅವರು ಈಗಾಗಲೇ ಕೆಲವು ಪತ್ರಕರ್ತರರು ವಿಮಾ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. ರಾಜ್ಯದಲ್ಲಿಯೇ ಇದೊಂದು ಉತ್ತಮ ವಿಮಾ ಯೋಜನೆಯಾಗಿದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲಾ ಕೇಂದ್ರದಲ್ಲಿರುವ 88 ಪತ್ರಕರ್ತರಿಗೆ ಹಾಗೂ ಅವರು ಕುಟುಂಬಗಳ 270 ಸದಸ್ಯರು ಸೇರಿದಂತೆ ಒಟ್ಟು 358 ಜನರಿಗೆ ವಿಮಾ ಸೌಲಭ್ಯ ದೊರಕಲಿದೆ ಎಂದು ಮಾಹಿತಿ ನೀಡಿದರು.

ವಿಮೆ ಕಾರ್ಡ್ ಹೊಂದಿದ ಪ್ರತಿಯೊಬ್ ಪತ್ರಕರ್ತರ ಕುಟುಂಬಕ್ಕೆ ವಾರ್ಷಿಕ 3 ಲಕ್ಷದ ವರೆಗೆ ವಿಮೆ ಸೌಲಭ್ಯ ಸಿಗಲಿದೆ. ಒಂದು ವೇಳೆ ಆಸ್ಪತ್ರೆಯಲ್ಲಿ ಮುಂಗಡ ಹಣ ಪಾವತಿಸಿ ಆಸ್ಪತ್ರೆಗೆ ದಾಖಲಾದಲ್ಲಿ ಬಿಲ್ ಮೊತ್ತ ಕ್ಲೈಮ್ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ರಾಜ್ಯದ ಒಟ್ಟು 1020 ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲೆಯ 38 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಪತ್ರಕರ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆರೋಗ್ಯ ವಿಮಾ ಕಂಪನಿಯ ಪ್ರತಿನಿಧಿ ಶ್ರೀಕಾಂತ ಗುನಾರಿ ಅವರು ಹೇಳಿದರು.

ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಸಂಜಯ ಡುಮ್ಮಗೊಳ ಹಾಗೂ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.


RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments