ದಾವಣಗೆರೆ: ಹರಿಹರ ಹನಗವಾಡಿ ಕ್ರಾಸ್ ಬಳಿಯ ಬಿ ಕೃಷ್ಣಪ್ಪ ಭವನ ದಲ್ಲಿ ಇದೇ ಜೂನ್ 15-16 ವಿಧ್ಯಾರ್ಥಿ ಬಂಧುತ್ವ ವೇದಿಕೆ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ ದಾಸ್.ಸಂವಿಧಾನ ಆಶಯ ಅರ್ಥ ಮಾಡಿಕೊಳ್ಳಲು ಮೊದಲು ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಹಲವಾರು ವರ್ಷಗಳ ಕಾಲ ಈ ದೇಶವನ್ನು ಆಳಿದ ವಿದೇಶಿ ಪಾಶ್ಚಿಮಾತ್ಯ ರಾಷ್ಟ್ರಗಳ ಸಾಮ್ರಾಜ್ಯ ಶಾಹಿಗಳು ಸುಲ್ತಾನರು, ಅರಸರು ರಾಜರ ಆಳ್ವಿಕೆಯ ಅವಧಿಯಲ್ಲಿ ಇದ್ದ ಧರ್ಮ ಜಾತಿ ಭಾಷೆ ಪಂಥ ಗಳು ವೈವಿಧ್ಯಮಯ ಸಾಂಸ್ಕೃತಿಕ ಸಾಮಾಜಿಕ ಸ್ಥಿತಿ ಗತಿಗಳ ಅವಲೋಕನ ಮಾಡಿದಾಗ ಈಗೀನ ನಮ್ಮ ಜಾತ್ಯತೀತ, ಸಾಮಾಜಿಕ ನ್ಯಾಯ ಅಶಾಯಗಳ ಬಗ್ಗೆ ಮನನ ಆಗುವುದು ಬುದ್ದನ ಧಮ್ಮ ಬಸವಣ್ಣನ ಸಮಾನತೆ ಗಾಂಧಿಯ ಅಹಿಂಸೆ ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯ ಸಂವಿಧಾನ ರಚನೆ ಹಿಂದಿನ ಮೂಲ ಆಶಯ ಅರ್ಥ ಪೂರ್ಣ ಅರ್ಥೈಸುವ ಅಂಬೇಡ್ಕರ್ ರವರ ಕಾಳಜಿ ಜಾತ್ಯತೀತ ರಾಜಕೀಯ, ಸಾಮಾಜಿಕ ಕಳಕಳಿ ಮಾನವೀಯ ಮೌಲ್ಯಗಳ ಬಗ್ಗೆ ಅರಿವಾಗುವುದು ಎಂದರು ಮಾನವ ಬಂಧುತ್ವ ವೇದಿಕೆ ಯ ರಾಜ್ಯ ಸಂಚಾಲಕ ಎಂ.ಬಿ.ರಾಮಚಂದ್ದರಪ್ಪ, ಅನಂತನಾಯ್ಕ, ಭರಮಪ್ಪ, ಸತೀಶ್ ಪ್ರೋ ಬಿ ಕೃಷ್ಣಪ್ಪ ಟ್ರಸ್ಟ್ ಅಧ್ಯಕ್ಷ ಹನಗವಾಡಿ ರುದ್ರಪ್ಪ ಆಶಯ ಮಾತುಗಳಾಡಿದರು. ಮೊದಲಿಗೆ ಶಿಗ್ಗಾಂವಿ ಬಸವರಾಜ್ ತಂಡದಿಂದ ಕಟ್ಟುತ್ತೆವಾ ನಾವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಡುಗಳು ಪ್ರಸ್ತುತ ಗೊಂಡವು ರಾಜ್ಯದ ಬಹುತೇಕ ಜಿಲ್ಲೆಗಳ ನೂರಾರು ವಿಧ್ಯಾರ್ಥಿ ಯುವಜನರು ಪಾಲ್ಗೊಂಡಿದ್ದರು.(ವರದಿ: ಪುರಂದರ ಲೋಕಿಕೆರೆ)