Saturday, December 21, 2024
Homeಸಾಧನೆಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣಗೆ ರಾಜ್ಯಮಟ್ಟದ ಬೆಳ್ಳಿ ಸಂಭ್ರಮ ಪ್ರಶಸ್ತಿ ವಿಜಯಪುರ ಜಿಲ್ಲೆಗೆ ಹೆಮ್ಮೆ

ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣಗೆ ರಾಜ್ಯಮಟ್ಟದ ಬೆಳ್ಳಿ ಸಂಭ್ರಮ ಪ್ರಶಸ್ತಿ ವಿಜಯಪುರ ಜಿಲ್ಲೆಗೆ ಹೆಮ್ಮೆ

ವಿಜಯಪುರ: ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ ಅವರಿಗೆ ದಲಿತ ಸಾಹಿತ್ಯ ಪರಿಷತ್ ರಾಜ್ಯ ಮಟ್ಟದ ಬೆಳ್ಳಿ ಸಂಭ್ರಮ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಾನವೀಯ ಪ್ರಜ್ಞೆ ಅಳವಡಿಸಿಕೊಂಡಿರುವ ಪರಶುರಾಮ ಶಿವಶರಣ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಬರವಣಿಗೆಯಲ್ಲಿ ಪ್ರಭುತ್ವ ಸಾಧಿಸಿದ ಇವರು, ಈಗಾಗಲೇ ಜೀವ ಪೀಠ ಕವನ ಸಂಕಲನ, ರಾಣಿ ಬಗೀಚ್ ಕಥಾ ಸಂಕಲನ, ವಾರನೋಟ ಅಂಕಣ ಸಂಕಲನ, ನೀಲಿಮಿಂಚು ಕವನ ಸಂಕಲನ ಕೃತಿಗಳು ಪ್ರಕಟವಾಗಿವೆ. ಇನ್ನು ಜೀವಯಂತ್ರ ಯೋನಿ ಕಾದಂಬರಿ, ಹುಳಿಮಜ್ಜಿಗೆ ಕಥಾ ಸಂಕಲನ ಸೇರಿ ಕವನ ಸಂಕಲನಗಳು ಅಚ್ಚಿನಲ್ಲಿವೆ.
ಈಗಾಗಲೇ ಪರಶುರಾಮ ಶಿವಶರಣ ಅವರ ಕೃತಿಯಾದ ಜೀವ ಪೀಠ ಕವನ ಸಂಕಲನಕ್ಕೆ ಬೆಂಗಳೂರು ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ‘ಅರಳು ಪ್ರಶಸ್ತಿ’ ಲಭಿಸಿದೆ. ‘ನೀಲಿಮಿಂಚು’ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸಹಾಯಧನದಡಿಯಲ್ಲಿ ಪ್ರಕಟಗೊಂಡಿದೆ.
ಅದರಂತೆ ಜೀವಪೀಠ, ರಾಣಿ ಬಗೀಚ್, ವಾರನೋಟ, ನೀಲಿಮಿಂಚು ಕೃತಿಗಳು ಕೋಲ್ಕತ್ತಾ ಸೇರಿದಂತೆ ದೇಶ ಪ್ರಮುಖ ಗ್ರಂಥಾಲಯಗಳಿಗೆ ಆಯ್ಕೆಯಾಗಿವೆ. ಇವರ ಈ ಮಹತ್ತರ ಮಾದರಿ ಸಾಧನೆಗಳನ್ನು ಗುರುತಿಸಿ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ, ಬೆಳ್ಳಿ ಸಂಭ್ರಮದ ನಿಮಿತ್ಯವಾಗಿ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಹಾಗೂ 30 -2023 ರಂದು ಹಮ್ಮಿಕೊಂಡಿರುವ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments