ಕಲಬುರಗಿ: ಹನ್ನೆರೆಡು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಮಾಡಿದ ಅಮಾನವೀಯ ಕೃತ್ಯ ಆಳಂದ ತಾಲೂಕಿನಲ್ಲಿ ನಡೆದಿದ್ದು ಹೇಯ ಕೃತ್ಯ.
ಸರ್ಕಾರವು ಕೂಡಲೆ ಸಂತ್ರಸ್ತರ ನೆರವಿಗೆಬರಬೇಕು ಅತ್ಯಾಚಾರಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಬೇಕು ಮತ್ತು ತಪ್ಪಿತಸ್ಥರಿಗೆ ಮರಣದಂಡನೆಯಂಥಾ ಶಿಕ್ಷೆವಿಧಿಸಬೇಕೆಂದು ಭಾರತೀಯ ವಿದ್ಯಾರ್ಥಿ ದಳ ಕರ್ನಾಟಕ ಸಂಘಟನೆಯು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದೆ. ಜಮಖಂಡಿಯಲ್ಲಿ ಭಾರತೀಯ ವಿದ್ಯಾರ್ಥಿ ದಳ ತಹಶೀಲ್ದಾರ್ ಕಚೇರಿಗೆ ತೆರಳಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ ಸರ್ಕಾರವು ಒಂದುಕೋಟಿ ರೂಪಾಯಿಗಳ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.ಈ ಪ್ರತಿಭಟನೆಯ ನೇತೃತ್ವ ವನ್ನು ಹನಮಂತ ಯಮಗಾರ ಚಿದಾನಂದ ಬಬಲಾದೀ, ಪರಶು ಚಿಗರಿ, ಈಶ್ವರ ದಳವಾಯಿ , ಲಕ್ಷ್ಮಣ ಬಂಕಿ , ಆಕಾಶ ಬೀಳಗಿ ಮುಂತಾದವರು ವಹಿಸಿದ್ದರು.
ಅತ್ಯಾಚಾರಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಉಗ್ರ ಶಿಕ್ಷೆಗೆ ಗುರಿಪಡಿಸಿ ಸಂತ್ರಸ್ತ ಕುಟುಂಬಕ್ಕೆ ಒಂದು ಕೋಟಿ ಪರಿಹಾರಕ್ಕೆ ಆಗ್ರಹ
RELATED ARTICLES